ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ವಲಯ ಮಟ್ಟದ ಪ್ರೌಢಶಾಲೆಗಳ 2 ದಿನಗಳ ಕ್ರೀಡಾಕೂಟಕ್ಕೆ ಚಾಲನೆ
2-day zonal level high school sports meet kicks off at Government Urdu High School
ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ವಲಯ ಮಟ್ಟದ ಪ್ರೌಢಶಾಲೆಗಳ 2 ದಿನಗಳ ಕ್ರೀಡಾಕೂಟಕ್ಕೆ ಚಾಲನೆ
ಮಹಾಲಿಂಗಪುರ 08: ಕ್ರೀಡೆ ಮನಸ್ಸಿನ ನೆಮ್ಮದಿಗಾಗಿಯೆ ಹೊರತು ಅಶಾಂತಿಗಾಗಿ ಅಲ್ಲ, ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಸೌಹಾರ್ದ ಮನೋಭಾವದಿಂದ ಆಡಿ ಕ್ರೀಡೆಗಿರುವ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಗುರುವಾರ ಮುಂಜಾನೆ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಆರಂಭವಾದ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ತಾರತಮ್ಯ ಮಾಡದೆ ಎಲ್ಲ ಮಕ್ಕಳು ನಮ್ಮವರೇ ಎಂಬ ಭಾವನೆ ನಿರ್ಣಾಯಕರಲ್ಲಿ ಮೂಡಬೇಕು,
ಆಗ ಭವಿಷ್ಯದ ನೈಜ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ. ಇಂದಿನ ಪ್ರೌಢ ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸಿ ಕ್ರೀಡಾಕೂಟ ಯಶಸ್ವಿಗೊಳ್ಳಲಿ ಎಂದರು.
ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶೇಖರ ಅಂಗಡಿ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ, ಪಂದ್ಯಾವಳಿಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಕ್ರೀಡಾ ಸ್ಫೂರ್ತಿ ಮೆರೆಯುವುದು ಮುಖ್ಯ.ಇದು ಸಮಾಜದಲ್ಲಿ ಪರಸ್ಪರ ಬದುಕುವ ಕಲೆಯನ್ನು ಕಲಿಸುತ್ತದೆ.ಈ ಕ್ರೀಡಾಕೂಟ ಆಯೋಜನೆಯಲ್ಲಿ ಶ್ರಮವಹಿಸಿದ ಸಕಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ಹಿರಿಯ ಪತ್ರಕರ್ತರಾದ ಜಯರಾಮ ಶೆಟ್ಟಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಮತ್ತು ಅಂಜುಮನ್ ಅಧ್ಯಕ್ಷ ಸಜನಸಾಬ್ ಪೆಂಡಾರಿ ಕ್ರೀಡಾ ಧ್ವಜಾರೋಹಣ, ಕ್ರೀಡಾ ಜ್ಯೋತಿಗೆ ಸ್ವಾಗತವನ್ನು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಥ್ರೋ ಬಾಲ್ ಮತ್ತು ವಾಲಿಬಾಲ ಉದ್ಘಾಟನೆಯನ್ನು ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಅಬ್ದುಲ್ರಜಾಕ ಎಂ. ಭಾಗವಾನ, ಸದಸ್ಯ ಮುಸ್ತಾಕ್ ಚಿಕ್ಕೋಡಿ, ಮುಸ್ತಾಕ್ ಸೌದಾಗರ ಮತ್ತು ಪ್ರಕಾಶ್ ಓಸ್ವಾಲ, ದೈಹಿಕ ಶಿಕ್ಷಕ ಪಿ.ಸಿ.ಪಕೀರನ್ನವರ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಉಮಾಮಾ ಅನ್ಸಾರಿ, ನಫೀಸಾ ಕರ್ಜಗಿ ಮತ್ತು ವಿಧ್ಯಾರ್ಥಿನಿಯರಾದ ವೇದಿಕೆ ಮುಂಭಾಗದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಕೆ.ಬಿ.ಕುಬಾಳೆಯವರ ಸೇವೆ ಗುರುತಿಸಿ ಸನ್ಮಾನಿಸಲಾಯಿತು.ಮುಖ್ಯ ಗುರುಗಳಾದ ಸೋನೂನೆ ಪ್ರಾಸ್ತಾವಿಕ ನುಡಿಗಳು ಮತ್ತು ವೇದಿಕೆಗೆ ಗಣ್ಯಮಾನ್ಯರನ್ನು ಸ್ವಾಗತಿಸಿ, ಶಿಕ್ಷಕ ಯು.ಎನ್.ಮುದಗಲ್ ವಂದಿಸಿದರು. ಗಣ್ಯಮಾನ್ಯರನ್ನು ಹಾಗೂ ಕ್ರೀಡಾಕೂಟಕ್ಕೆ ದಿನ ಸಹಾಯ ಮಾಡಿದ ದಾನಿಗಳನ್ನು ಸಹ ಎಸ್.ಡಿ.ಎಂ.ಸಿ ಸನ್ಮಾನಿಸಿ ಗೌರವಿಸಿತು.
ಇನ್ನುಳಿದಂತೆ ಸಯ್ಯದ್ ಯಾದವಾಡ, ನಜೀರ್ ಅತ್ತಾರ, ಸುನೀಲ್ ಗೌಡ ಪಾಟೀಲ್, ಸಂಗಮೇಶ ಮುಕರ್ತಿಹಾಳ, ನಿಯಾಜ್ ಪಟೇಲ್, ನಜೀರ್ ಝಾರೆ, ಪೈಗಂಬರ್ ಪೆಂಡಾರಿ, ಅರ್ಜುನ್ ದೊಡಮನಿ, ಮೇಹಬೂಬ ಜೀರಗಾಳ, ಹಾಸಿಂ ಪೆಂಡಾರಿ, ಲಕ್ಷ್ಮಣ ಮಾಂಗ, ಪಾಪಾ ನಾಲಬಂದ, ಸಿರಾಜ ಪಾಂಡು, ಡಾ.ಅಜ್ಹರ್ ಕೋಲಾರ, ಡಿ.ಆರ್.ಛಬ್ಬಿ, ಮೇಹಬೂಬ ಪೆಂಡಾರಿ, ತಾಹೀರ್ ಸೌದಾಗರ, ಮುಬಾರಕ್ ಹುನ್ನೂರ, ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 