ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‌ನಲ್ಲಿ 19ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ

19th year anniversary celebration at Basavarajeshwari Public School and College

ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‌ನಲ್ಲಿ 19ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ 

ಬಳ್ಳಾರಿ 19: ನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‌ನಲ್ಲಿ ಜ. 18ರಂದು 19ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಆಚರಣೆಯು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.  

ಸಾಯಂಕಾಲ 6.00 ಗಂಟೆಗೆ ಪ್ರಾರಂಭವಾದ ಈ ವಾರ್ಷಿಕೋತ್ಸವದ ಕಾರ್ಯಕ್ರಮವು ನಾಡಗೀತೆಯನ್ನು ಹಾಡುವುದರ ಮೂಲಕ ಪ್ರಾರಂಭವಾಗಿ ಬಿ.ಪಿ.ಎಸ್‌.ಸಿ ಕಿಡ್ಸ್‌ ಅಕಾಡೆಮಿ (ಪೂರ್ವ ಪ್ರಾಥಮಿಕ) ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಕ್ಕಳ ನೃತ್ಯಗಾನವು ಅತ್ಯಂತ ಮನೋಹರವಾಗಿದ್ದು ನೆರೆದಿದ್ದ ಪ್ರೇಕ್ಷಕರನ್ನೆಲ್ಲ ಸಂತೋಷದ ಕಡಲಲ್ಲಿ ತೇಲಿಸಿತು. ನಂತರ ಶಾಲಾ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭವನ್ನು ದೇವಿ ಸರಸ್ವತಿಯ ಪ್ರಾರ್ಥನೆಯನ್ನು 9ನೇ ತರಗತಿಯ ಎಸ್‌.ಸುದೀಕ್ಷಾ ತಂಡದವರು ಸುಮಧುರವಾಗಿ ಹಾಡಿದರು.  

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿಂಧನೂರು ತಾಲೂಕಿನ ವಿಧಾನಸಭಾ ಸದಸ್ಯರು ಹಂಪನಗೌಡ ಬಾದರ್ಲಿಯವರು, ಗೌರವ ಅತಿಥಿಗಳಾದ ಎಮ್‌. ಅಮರೇಗೌಡರವರು, ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‌ನ ಹಾಗೂ ಟಿ.ಇ.ಹೆಚ್‌.ಆರ್‌.ಡಿ. ಟ್ರಸ್ಟ್‌ ಅಧ್ಯಕ್ಷರಾದ ಡಾ. ಎಸ್‌.ಜೆ.ವಿ.ಮಹಿಪಾಲ್‌ರವರು, ಟಿ.ಇ.ಹೆಚ್‌.ಆರ್‌.ಡಿ. ಟ್ರಸ್ಟಿಗಳೆಲ್ಲರನ್ನು, ಶಾಲೆಯ ಶಿಕ್ಷಕಿ ಶ್ವೇತಾ ತುಮ್ಮಾರವರು ಸ್ವಾಗತಿಸಿದರು.  

ನೆರೆದ ಗಣ್ಯಮಾನ್ಯರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಶಾಲೆಯ ಪ್ರಾಂಶುಪಾಲರಾದ ಜೆ.ಅನೀಲ್ ಕುಮಾರ್‌ರವರು ಶಾಲೆಯ ವಾರ್ಷಿಕ ವರದಿಯನ್ನು ಮಂಡಿಸುತ್ತಾ ಶಾಲೆಯ 19 ವರ್ಷಗಳ ಸಾಧನೆಗಳನ್ನು ವಿವರಿಸುತ್ತಾ ಸತತವಾಗಿ 13 ವರ್ಷಗಳಿಂದ 10ನೇ ತರಗತಿಯ ಪರೀಕ್ಷೆಯಲ್ಲಿ 100ಅ ಫಲಿತಾಂಶ ಬರುತ್ತಿರುವುದನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಹಂಪನಗೌಡ ಬಾದರ್ಲಿಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಂಪನಗೌಡ ಬಾದರ್ಲಿಯವರು ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳು ವಿಧ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಕೊಡುವುದರ ಬಗ್ಗೆ ಶ್ಲಾಘಿಸುತ್ತಾ ಶಿಕ್ಷಣದ ಮಹತ್ವವನ್ನು ಕುರಿತು ವಿವರಿಸಿದರು.  

ನಂತರ ಟಿ.ಇ.ಹೆಚ್‌.ಆರ್‌.ಡಿ. ಟ್ರಸ್ಟ್‌ ಹಾಗೂ ಬಿಪಿಎಸ್‌ಸಿ ಶಾಲೆಯ ಅಧ್ಯಕ್ಷರಾದ ಡಾ.ಎಸ್‌.ಜೆ.ವಿ.ಮಹಿಪಾಲ್‌ರವರು ಮಾತನಾಡುತ್ತಾ ಬಳ್ಳಾರಿಯಲ್ಲಿ ಆಂಗ್ಲ ಮಾಧ್ಯಮದ ಋಖಇ ಪಠ್ಯಕ್ರಮ ಓದಲು ಮೊದಲು ವಿಧ್ಯಾರ್ಥಿಗಳು ಪರಸ್ಥಳಕ್ಕೆ ಹೋಗಿ ಪಡುತ್ತಿರುವ ಕಷ್ಟವನ್ನು ಅರಿತು ತಮ್ಮ ತಾಯಿಯವರು ತೆಗೆದುಕೊಂಡ ಧೃಡನಿರ್ಧಾರದಿಂದ ಬಳ್ಳಾರಿಯಲ್ಲಿ ಋಖಇ ಪಠ್ಯಕ್ರಮದ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್ ನಿರ್ಮಾಣವಾಗಿರುವ ಕುರಿತು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸುತ್ತಾ ವಿಧ್ಯಾರ್ಥಿಗಳಿಗೆ ಶುಭವನ್ನು ಕೋರಿದರು. 

ನಂತರ ಮಾತನಾಡಿದ ಟಿ.ಇ.ಹೆಚ್‌.ಆರ್‌.ಡಿ. ಟ್ರಸ್ಟಿಗಳಾದ ಪ್ರೃಥ್ವಿರಾಜ್  ಭುಪಾಲ್‌ರವರು ಶೈಕ್ಷಣಿಕವಾಗಿ ವಿಧ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲು ಆತ್ಮ ವಿಶ್ವಾಸವಿರಬೇಕೆಂದು ತಿಳಿಸಿದರು. ನಂತರ 2023-24 ಸಾಲಿನ 10 ನೇ ತರಗತಿಯಲ್ಲಿ ಅತೀ ಹೆಚ್ಚು ಶೇಕಡವಾರು 95ಅ, ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿಯಾದ ಕುಮಾರಿ ಜೆ.ಶ್ರೀವಲ್ಲಿಗೆ ಅಕಾಡೆಮಿಕ್ ಎಕ್ಸೆಲೆನ್ಸ್‌ ಪಾರಿತೋಷಕವನ್ನು ಮುಖ್ಯ ಅತಿಥಿಗಳು ವಿತರಿಸಿದರು. ಕಳೆದ ವರ್ಷದ ಶಾಲೆಯ ವಾರ್ಷಿಕ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ತರಗತಿವಾರು ವಿದ್ಯಾರ್ಥಿಗಳಿಗೆ ಕೂಡ ಪಾರಿತೋಷಕವನ್ನು ವಿತರಿಸಲಾಯಿತು.  

ತದನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾದವು. ಈ ವಾರ್ಷಿಕೋತ್ಸವದಲ್ಲಿ ‘ಮೌಲ್ಯಗಳು’ ಎಂಬ ವಿಷಯದ ಅಧಾರದ ಮೇಲೆ ಸತ್ಯ, ಪ್ರಾಮಾಣಿಕತೆ, ಸಹನೆ, ಸಹಾಯ, ಹಿರಿಯರಿಗೆ ಗೌರವವನ್ನು ಒಳಗೊಂಡ ನೃತ್ಯವನ್ನು ಪ್ರದರ್ಶಿಸಿದರು. ಈ ಬಾರಿ ವಿಶೇಷವಾಗಿ ಕನ್ನಡದ ಚಲನಚಿತ್ರ ರಂಗದ ಹಳೆಯ ಗೀತೆಗಳಿಗೆ ಮಕ್ಕಳು ತಮ್ಮ ಹಾವ ಭಾವದ ಮೂಲಕ ನೃತ್ಯವನ್ನು ಪ್ರದರ್ಶಿಸಿ ನೆರೆದ ಪೋಷಕರ ಮನಸೆಳೆದರು ಹಾಗೂ ಭಾರತದ ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ನಟನಾ ಕೌಶಲ್ಯದ ಮೂಲಕ ಜನರ ಮನಸ್ಸನ್ನು ಸೂರೆಗೊಂಡ ಅಧ್ಭುತ ಕಲಾವಿದ ರಾಜ್‌ಕಪೂರ್‌ರವರ 100ನೇ ಶತಮಾನೋತ್ಸವದ ಅಂಗವಾಗಿ ಅವರು ಅಭಿನಯಿಸಿದ ಹಿಂದಿಯ ಹಾಡುಗಳಿಗೆ ಅತ್ಯಂತ ಸುಂದರವಾಗಿ ವಿಧ್ಯಾರ್ಥಿಗಳು ನೃತ್ಯವನ್ನು ಪ್ರದರ್ಶಿಸಿ ರಾಜ್‌ಕಪೂರ್ ಅವರ ನೆನಪನ್ನು ಮರುಕಳಿಸಿದರು ಕೊನೆಯಲ್ಲಿ ಶಾಲೆಯ ಹಿರಿಯ ಶಿಕ್ಷಕಿಯರಾದ ಶಿಲ್ಪಾ ವಂದನಾರೆ​‍್ಣಯನ್ನು ನೆರವೇರಿಸಿದರು.