ಜಗದ್ಗುರು ಸಿದ್ದಾರೂಢ ಸ್ವಾಮಿಯ 190ನೇ ಮತ್ತು ಗುರುನಾಥರೂಡ ಸ್ವಾಮಿಯ 115ನೇ ಜಯಂತಿ

190th Birth Anniversary of Jagadguru Siddarudha Swami and 115th Birth Anniversary of Gurunathrudha

ಜಗದ್ಗುರು ಸಿದ್ದಾರೂಢ ಸ್ವಾಮಿಯ 190ನೇ ಮತ್ತು ಗುರುನಾಥರೂಡ ಸ್ವಾಮಿಯ 115ನೇ ಜಯಂತಿ

ರಾಣಿಬೆನ್ನೂರ 14:  ಹುಬ್ಬಳ್ಳಿಯ ಜಗದ್ಗುರು ಸಿದ್ದಾರೂಢ ಸ್ವಾಮಿಯ 190ನೇ ಮತ್ತು ಗುರುನಾಥರೂಡ ಸ್ವಾಮಿಯ 115ನೇ ಜಯಂತಿ ಹಾಗೂ ಸಿದ್ದಾರೂಡರ ಕಥಾಮೃತ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಜ್ಯೋತಿ ರಥಯಾತ್ರೆಯು ರವಿವಾರ  ತಾಲೂಕಿನ ಮಾಕನೂರು ಗ್ರಾಮಕ್ಕೆ ಆಗಮಿಸಿದಾಗ ಗ್ರಾಮಸ್ಥರು ಭ್ಯವ್ಯವಾಗಿ ಸ್ವಾಗತಿಸಿ ಬೀಳ್ಕೊಟ್ಟರು. 

   ಜ್ಯೋತಿ ರಥಯಾತ್ರೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾಜ ಭಕಂತ್ರಿ, ಸಮಾಳ ಮತ್ತು ಮಹಿಳೆಯರು ಆರತಿಯೊಂದಿಗೆ ಮೆರವಣಿಗೆ ನಡೆಸಿ ಬೀಳ್ಕೊಟ್ಟರು. ಮಹಿಳೆಯರು ಮನೆಯ ಅಂಗಳಕ್ಕೆ ನೀರು ಹಾಕಿ ರಂಗೋಲಿ ಬಿಡಿಸಿ ಹಸಿರು ತೋಣಗಳಿಂದ ಶೃಂಗರಿಸಿದ್ದರು. ಮನೆಯ ಮುಂದೆ ಜ್ಯೋತಿ ಬಂದಾಗ ಮಹಿಳೆಯರು ಉಭಯ ಶ್ರೀಗಳ ಮೂರ್ತಿಗೆ ಪೂಜೆ ಸಲ್ಲಿಸಿ ಮಂಗಳಾರತಿಯೊಂದಿ ಧೈನ್ಯತಾಭಾವದಿಂದ ನಮಸ್ಕಾರ ಮಾಡುವುದು ಕಂಡು ಬಂದಿತು.  ಇಲ್ಲಿಂದ ಜ್ಯೋತಿ ರಥಯಾತ್ರೆಯು ನಾಗೇನಹಳ್ಳಿ, ಮುದೇನೂರು, ತರೇದಹಳ್ಳಿ, ಚಳಗೇರಿ, ವಡೇರಾಯನಹಳ್ಳಿ, ಕವಲೆತ್ತು, ಹಿರೇಬಿದರಿ ಗ್ರಾಮಗಳಲ್ಲಿ ಭಕ್ತರು ಮರವಣಿಗೆ ನಡೆಸಿ ಐರಣಿ ಹೊಳೆಮಠಕ್ಕೆ ಬೀಳ್ಕೊಟ್ಟರು. ಪ್ರತಿ ಗ್ರಾಮದಲ್ಲಿಯೂ ಮನೆಯ ಅಂಗಳಕ್ಕೆ ನೀರು ಹಾಕಿ ರಂಗೋಲಿ ಬಿಡಿಸಿ ಭವ್ಯವಾಗಿ ಸ್ವಾಗತಿಸುವುದು ಕಂಡು ಬಂದಿತು.    ಜ್ಯೋತಿ ರಥಯಾತ್ರೆಯ ಮೆರವಣಿಗೆಯಲ್ಲಿ ಖಂಡೇರಾಯನಹಳ್ಳಿಯ ಸಿದ್ದಾಶ್ರಮದ ಗುರು ನಾಗರಾಜಾನಂದ ಸ್ವಾಮಿಜಿಗಳು, ವೀರಭದ್ರ ಸ್ವಾಮಿಗಳು, ಶ್ರೀಧರ ಅಗಸಿಬಾಗಿಲ, ಸಿದ್ಧಾರೂಢ ಕುಂಬಳೂರ, ಮಹೇಶ ಹನಗೋಡಿ, ಡಾಽ ಕಾಂತೇಶರಡ್ಡಿ ಗೋಡಿಹಾಳ, ಸುರೇಶ ಹನುಮನಾಯಕರ, ಮಹಾದೇವಪ್ಪ ಬಣಕಾರ, ಬೀರ​‍್ಪ ಹುಚ್ಚಣ್ಣನವರ, ಹನುಮಂತಪ್ಪ ಆರೇರ, ಹನುಮಂತಪ್ಪ ಸಾರ್ಥಿ, ಜಟ್ಟೆಪ್ಪ ಕರೇಗೌಡ್ರ, ಗದಿಗಪ್ದ ಸಾರ್ಥಿ, ಸಿದ್ಧನಗೌಡ ಗೋವಿಂದಗೌಡ್ರ, ಮರಮೇಶ ಹಲಸಬಾಳ, ಬಸನಗೌಡ ಮುದಿಗೌಡ್ರ ಸೇರಿ ಮಹಿಳೆಯರು ಮತ್ತು ಮಕ್ಕಳು ಇದ್ದರು.