ಮೇ 3, 4 ರಂದು 16ನೇ ರಾಜರಾಜೇಶ್ವರಿ ಜಾತ್ರಾ ಮಹೋತ್ಸವ
ಯರಗಟ್ಟಿ 16: ಪಟ್ಟಣದ ರಾಜರಾಜೇಶ್ವರಿ ಆಶ್ರಮದ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರ ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಯಿತು.ಮೇ 3 ಬೆಳಿಗ್ಗೆ ಧ್ವಜಾರೋಹಣ, ದೇವಿ ಪುರ್ರವೇಶ, ಪಲ್ಲಕ್ಕಿ ಉತ್ಸವ, ಸಂಜೆ ಧರ್ಮಜಾಗೃತಿ ವೇದಾಂತ ಪರಿಷತ್ತ್, ದಾನಿಗಳಿಗೆ ಸನ್ಮಾನ, ಮೇ 4 ರಂದು ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಹೋಮ ಹವನ, ಸಂಜೆ 05-00 ರಥೋತ್ಸವ ಹಾಗೂ ಕೀರೀಟ ಪೂಜೆ ಮತ್ತು ಜಾತ್ರಾ ಸಮಾರೋಪ ಸಮಾರಂಭಈ ವೇಳೆ ಆಶ್ರಮದ ಪೀಠಾಧಿಪತಿಗಳಾದ ಗಣಪತಿ ಮಹಾರಾಜರು, ವಿಠ್ಠಲಗೌಡ ದೇವರಡ್ಡಿ, ಎಚ್. ಎಸ್. ನಾಯ್ಕರ, ಪಿ. ಎಚ್. ಪಾಟೀಲ, ಎನ್. ಕೆ. ಹುಚ್ಚರೆಡ್ಡಿ, ಡಾ. ವಿಶ್ವನಾಥ ತಾವಂಶಿ, ಬಿ. ಎಸ್. ಆಲದಕಟ್ಟಿ ರಾಜೇಂದ್ರ ವಾಲಿ, ಫಕ್ಕೀರ್ಪ ಕಿಲಾರಿ, ಸಿದ್ದು ದೇವರಡ್ಡಿ, ರಾಜೇಂದ್ರ ಶೆಟ್ಟಿ, ನಾಗಪ್ಪ ಬೆಣ್ಣಿ, ಶಿವಾಜಿ ಪಟೇಲ್, ಸೋಮಪ್ಪ ಕುಂಬಾರ, ಲಕ್ಕಪ್ಪ ಸನ್ನಿಂಗನವರ, ತಮ್ಮಣ್ಣಾ ಕಾಮಣ್ಣವರ, ಬಾಸ್ಕರ ಹಿರೇಮತ್ರಿ, ಕೆ. ವಾಯ್. ಬಡಿಗೇರ, ಎಂ. ಬಿ. ಘೋಡಗೇರಿ, ಚಿದಂಬರ ಕದಂ, ಆಶಾ ಪರೀಟ, ಸುಜಾತಾ ಸಿದ್ದನಗೌಡ್ರ, ಮೈತ್ರಾ ಹೊಂಗಲ, ಸುರ್ವಣಾ ಮದ್ದಾನಿ, ಲಕ್ಷ್ಮೀ ಕಟ್ಟಿ, ಜಯಶ್ರೀ ಹಿರೇಮಠ ಸೇರಿದಂತೆ ಅನೇಕ ಗಣ್ಯರು ಹಾಗೂ ಶ್ರೀಮಠದ ಭಕ್ತರು ಇದ್ದರು.