ಕನರ್ಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ 15ನೇ ವಾಷರ್ಿಕ ಸಾಮಾನ್ಯ ಸಭೆ

ಲೋಕದರ್ಶನ ವರದಿ

ಬೆಳಗಾವಿ, 11: ಜನಪರ ಮತ್ತು ವೃತ್ತಿಪರ ಸಂಘಟನೆಗಳು ಪ್ರಬಲ ಸಂಘಟನೆಗಳನ್ನು ರಚಿಸಿಕೊಂಡು, ಸಂವಿಧಾನ ಬದ್ದವಾದ ಹಕ್ಕುಗಳನ್ನು ಪಡೆಯುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ ಕರೆ ನೀಡಿದ್ದಾರೆ.

ಭಾನುವಾರದಂದು ನಗರದ ಮಹಾಂತ ಭವನದಲ್ಲಿ ಕನರ್ಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘವು ಏರ್ಪಡಿಸಿದ್ದ ಸಂಘದ 15 ನೇ ವಾಷರ್ಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೌಕರರು ತಮ್ಮ ಹಕ್ಕುಗಳನ್ನು ಪಡೆಯುವದರೊಂದಿಗೆ ಸ್ವಾತಂತ್ರ ಹೋರಾಟಗಾರರ ಆಶಯದಂತೆ ಭ್ರಷ್ಟಾಚಾರ ಮುಕ್ತ ಮತ್ತು ವ್ಯಸನ ಮುಕ್ತ ಸಮಾಜದ ನಿಮರ್ಾಣಕ್ಕೆ ಶ್ರಮಿಸಬೇಕು. ಲಕ್ಷಾಂತರ ಜನರ ತ್ಯಾಗ ಮತ್ತು ಬಲಿದಾನಗಳಿಂದ ಸ್ವತಂತ್ರವಾಗಿರುವ ಈ ದೇಶವನ್ನು ಸರ್ವ ರೀತಿಯಿಂದಲೂ ಬಲ ಪಡಿಸಬೇಕು ಎಂದು ಮನವಿ ಮಾಡಿದರು.

ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಮಾತನಾಡಿ, ಸ್ವಾತಂತ್ರ ನಂತರದ ಈ ದಿನಗಳಲ್ಲಿ ಕಲ್ಲು ಮಣ್ಣಿನ ಕಟ್ಟಡಗಳ, ರಸ್ತೆಗಳ ಮತ್ತು ಮೂಲ ಸೌಕರ್ಯಗಳಲ್ಲಿ ಸಾಕಷ್ಟು ಅಭಿವೃದ್ದಿಯಾಗಿದೆ. ಆದರೆ, ದಾಸೋಹದ ಪ್ರತೀಕವಾಗಿರುವ ಶರಣು ಬನ್ನಿ ಎಂಬ ಜನಪರ ಕಳಕಳಿಯ ಸಮಾಜ ಬಡವಾಗುತ್ತಿದೆ. ಈ ಬೆಳವಣಿಗೆ ಅಪಾಯಕಾರಿ ಎಂದರು.

ಶರಣು ಬನ್ನಿ ಎಂಬ ಮಾನವೀಯ ಸಮಾಜ ನಿಮರ್ಾಣವಾಗಬೇಕಿದೆ. ನಿವೃತ್ತ ನೌಕರರು ತಮ್ಮ ವಯಕ್ತಿಕ ಬೇಕು ಬೇಡಗಳಿಗೆ ಹೋರಾಡುವದರ ಜೊತೆಗೆ ತಮ್ಮ ಜೀವನದ ಅನಿಭವವನ್ನು ಸಾತ್ವಿಕ ಮಾನವೀಯ ಸಮಾಜದ ನಿಮರ್ಾಣಕ್ಕೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಹಿರಿಯ ನ್ಯಾಯವಾದಿ ಬಸವರಾಜ ರೊಟ್ಟಿ ಮಾತನಾಡಿ, ನಿವೃತ್ತಿಯ ನಂತರ ವೇತನದಲ್ಲಿ 70 ಪ್ರತಿಶತ ಕಡಿತವಾಗುವದರಿಂದ ಹಿರಿಯ ನಾಗರಿಕರು ಮಿತ ಆಥರ್ಿಕ ಬಳಕೆಯ ಕಡೆ ಗಮನ ಹರಿಸಬೇಕು. ಆರೋಗ್ಯವನ್ನು ನಿರ್ಲಕ್ಷಿಸದೆ ಆರೋಗ್ಯವನ್ನು ಕಾಪಾಡಿಕೊಂಡು ಸಮಾಜಕ್ಕೆ ಉತ್ತಮವಾದ ಮಾರ್ಗದರ್ಶನ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಚನ್ನಬಸಪ್ಪ ಬಾಗೇವಾಡಿ ಮಾತನಾಡಿ, ನಿವೃತ್ತ ನೌಕರರ ಸಂಘಕ್ಕೆ ಸ್ವಂತ ನಿವೇಶನ ಕೊಡಿಸುವ ಪ್ರಯತ್ನ ಮುಂದುವರೆದಿದೆ. ಸೂಕ್ತ ಸ್ಥಳದಲ್ಲಿ ಸಂಘಕ್ಕೆ ಕಟ್ಟಡ ನಿಮರ್ಿಸಲಾಗುವದು. ನೌಕರರಿಗೆ ಅಲ್ಲಿ ಸಕಲ ಸೌಲಭ್ಯ ಒದಗಿಸಲಾಗುವದು. ಈ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಸಂಘದ ಅಧ್ಯಕ್ಷ ಎ.ವಿ.ಚಿಂಚಣಿ ಸ್ವಾಗತಿಸಿದರು. ಐ.ಎಚ್.ನದಾಫ್ ವರದಿ ವಾಚನ ಮಾಡಿದರು. ಸಿ.ವೈ.ಅಪ್ಪಣ್ಣವರ ವಂದಿಸಿದರು. ಜಿ.ಎಸ್.ಸೋನಾರ ನಿರೂಪಿಸಿದರು. ಅನೇಕ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.