ಗ್ರಾಮೀಣ ಬ್ಯಾಂಕುಗಳ ಸುವರ್ಣ ಮಹೋತ್ಸವದ ಅಂಗವಾಗಿ ಬಳ್ಳಾರಿಯಲ್ಲಿ ಅಖಿಲ ಭಾರತ ಮಟ್ಟದ 15ನೇ ತ್ರೈವಾರ್ಷಿಕ ಸಮ್ಮೇಳನ
ಬಳ್ಳಾರಿ 22: ಗ್ರಾಮೀಣ ಬ್ಯಾಂಕುಗಳು ರಚನೆಗೊಂಡು 50 ವರ್ಷಗಳು ಪೂರೈಸಿದ ಸಂದರ್ಭದಲ್ಲಿ "ಗ್ರಾಮೀಣ ಬ್ಯಾಂಕುಗಳ ಸುವರ್ಣ ಮಹೋತ್ಸವ"ದ ಅಂಗವಾಗಿ ಅಖಿಲ ಭಾರತ ಮಟ್ಟದ ಸಂಘಟನೆಯಾದ ಂಋಖಃಇಂ 15ನೇ ಅಖಿಲ ಭಾರತ ತ್ರೈವಾರ್ಷಿಕ ಮಹಾಧಿವೇಶನವನ್ನು ಯಶಸ್ವಿಯಾಗಿ ನಡೆಸುವ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯಮಟ್ಟದ ಸಂಘಟನೆಯಾದ ಆಖಿಲ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟಕ್ಕೆ ನೀಡಲಾಗಿದೆ.
ಗ್ರಾಮೀಣ ಬ್ಯಾಂಕ್‌ಗಳು ಹುಟ್ಟಿ 50 ವರ್ಷಗಳ ಈ ಸಮಯದಲ್ಲಿ ಂಋಖಃಇಂ ಮಹಾಧಿವೇಶನವು ಬಳ್ಳಾರಿಯಲ್ಲಿ ನಡೆಯುತ್ತಿರುವುದು ಒಂದು ವಿಶೇಷದ ಸಂಗತಿಯಾಗಿದೆ. ಈ ಅಖಿಲ ಭಾರತ ತ್ರೈವಾರ್ಷಿಕ ಮಹಾಧಿವೇಶನವನ್ನು ಫೆಬ್ರವರಿ 8 ಮತ್ತು 9 ನೇ, 2025ರಂದು ಬಳ್ಳಾರಿಯ ಕಮ್ಮ ಭವನದಲ್ಲಿ ನಡೆಸಲು ದಿನಾಂಕ ನಿಗದಿ ಮಾಡಿದ್ದು, ಇದರ ಪೂರ್ವಭಾವಿ ಕಾರ್ಯಗಳನ್ನು ಈಗಾಗಲೇ ನಿರಂತರವಾಗಿ ನಡೆಸಿರುತ್ತೇವೆ. ಈ ಮಹಾಧಿವೇಶನದ ಉದ್ಘಾಟನೆಗೆ ಸರ್ವೋಚ್ಛ ನ್ಯಾಯಾಲಯ ನಿವೃತ್ತಿ ನ್ಯಾಯಾಧೀಶರಾದ ಮಾನ್ಯ ಶ್ರೀ ಗೋಪಾಲಗೌಡರು ಆಗಮಿಸಲಿದ್ದಾರೆ. ಅಲ್ಲದೇ ಈ ಮಹಾಧಿವೇಶನದಲ್ಲಿ ಭಾರತ ದೇಶದಾದ್ಯಂತ ಇರುವ ಗ್ರಾಮೀಣ ಬ್ಯಾಂಕ್‌ಗಳ ಸುಮಾರು 1000 ಪ್ರತಿನಿಧಿಗಳು ಸಂಘಟನೆಗಳ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ. ಭಾರತ ಸರ್ಕಾರವು ಕಾಲಕಾಲಕ್ಕೆ ವೀಲೀನ ಪ್ರಕ್ರಿಯೆ ಮಾಡುತ್ತಾ ಬಂದಿದ್ದು ದೇಶದಲ್ಲಿರುವ ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆ 196 ರಿಂದ 43 ಕ್ಕೆ ಬಂದಿರುತ್ತದೆ. ಕರ್ನಾಟಕದಲ್ಲಿಯೂ ಸಹ ಅದರ ಸಂಖ್ಯೆ 13 ರಿಂದ 2 ಕ್ಕೆ ಇಳಿದಿರುತ್ತದೆ. ಮುಂದುವರಿದ ಭಾಗವಾಗಿ ಕೇಂದ್ರ ಸರ್ಕಾರ ದೇಶದಲ್ಲಿ ಗ್ರಾಮೀಣ ಬ್ಯಾಂಕ್‌ಗಳ ವೀಲೀನ ಪ್ರಕ್ರಿಯೆಯನ್ನು ಮುಂದುವರೆಸಿದ್ದು, ಕರ್ನಾಟಕದಲ್ಲಿ ಈಗ ಇರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವೀಲೀನಗೊಳಿಸಿ “ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್” ನ ಸ್ಥಾಪನೆಯ ಆದೇಶವನ್ನು ಶೀಘ್ರದಲ್ಲಿ ನೀರೀಕ್ಷಿಸಲಾಗಿದೆ. ನಮ್ಮ ರಾಷ್ಟ್ರ ಮಟ್ಟದ ಸಂಘಟನೆಯ ಮೂಲ ಉದ್ದೇಶ ಮತ್ತು ಬೇಡಿಕೆ ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ನಿರ್ಮಾಣವಾಗಿರುತ್ತದೆ.
ಈ ಮಹಾಧಿವೇಶನದ ಅಂಗವಾಗಿ ಅಖಿಲ ಭಾರತ ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀ ಕೆ. ಕೋಟೇಶ್ವರರಾವ್ ರವರ ನೇತೃತ್ವದಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಸ್ವಾಗತ ಸಮಿತಿಯಲ್ಲಿ ಡಾ. ಅರವಿಂದ ಪಾಟೀಲ್, ಶ್ರೀ ಸಿರಿಗೇರಿ ಪನ್ನಾರಾಜ್, ಕಾಂಽಽ ಟಿ.ಜಿ.ವಿಠ್ಠಲ್ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರನ್ನು, ರೈತ ಮುಖಂಡರು, ಕಾರ್ಮಿಕ ಸಂಘಟನೆಗಳ ಮುಖಂಡರು, ಕರ್ನಾಟಕ ಗ್ರಾಮೀಣ ಬ್ಯಾಂಕಿನ ನೌಕರರ ಮತ್ತು ಅಧಿಕಾರಿಗಳ ಸಂಘ, ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನೌಕರರ ಮತ್ತು ಅಧಿಕಾರಿಗಳ ಸಂಘಗಳ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳನ್ನು ಒಳಗೊಂಡಿದೆ.
ಈ ಮಹಾ ಅಧಿವೇಶನದಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಮುಖ್ಯ ಬೇಡಿಕೆಗಳಾದ ಬ್ಯಾಂಕಿಂಗ್ ಕ್ಷೇತ್ರದಲ್ಲಿರುವಂತೆ ಎಲ್ಲಾ ಹುದ್ದೆಗಳಿಗೆ ನೇಮಕಾತಿ ಮತ್ತು ಬಡ್ತಿ ಕುರಿತು, ದಿನಗೂಲಿ ನೌಕರರ ಖಾಯಮಾತಿ, ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ನ ನಿರ್ಮಾಣ ಮತ್ತು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪಿಂಚಣಿ ಜಾರಿ ಮತ್ತು ಇನ್ನಿತರೆ ವಿಷಯ ಮತ್ತು ಬೇಡಿಕೆಗಳ ಬಗ್ಗೆ ಚರ್ಚಿಸಲಾಗುವುದು.
ನಮ್ಮ ಈ ಕಾರ್ಯಕ್ರಮಗಳ ಬಗ್ಗೆ ಸಾಕಷ್ಟು ಪ್ರಚಾರ ಮಾಡಬೇಕೆಂದು ಮಾಧ್ಯಮ ಮಿತ್ರರಲ್ಲಿ ವಿನಂತಿಸುತ್ತೇವೆ.
ಗ್ರಾಮೀಣ ಬ್ಯಾಂಕ್‌ಗಳ ಅಂಕಿ ಅಂಶಗಳು ಮತ್ತು ಮಹಾ ಅಧಿವೇಶನದ ಯಶಸ್ಸಿಗಾಗಿ ರಚಿಸಲಾಗಿರುವ ಸ್ವಾಗತ ಸಮಿತಿಯ ಪಧಾಧಿಕಾರಿಗಳ ಪಟ್ಟಿಯನ್ನು ಲಗತ್ತಿಸಲಾಗಿದೆ.