ಪುಟ್ಟರಾಜ ಕವಿ ಗವಾಯಿಗಳವರ 14ನೇ ಸ್ವರ ಸ್ಮರಣೋತ್ಸವ
ಕೊಪ್ಪಳ 24: ವಿಠ್ಠಲಕೃಷ್ಣ ವಾಣಿಜ್ಯ ಸಂಕೀರ್ಣ ಕಾಂಪ್ಲೆಕ್ಸ್ ಹೆಚ್.ಡಿ.ಎಫ್.ಸಿ ಬ್ಯಾಂಕ ಎದುರುಗಡೆ ಕಿನ್ನಾಳ ರೋಡ್ ಭಾಗ್ಯನಗರದಲ್ಲಿ ಗುರುಕೃಪಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾ ಸಂಘ(ರಿ) ಭಾಗ್ಯನಗರ ಸಂಘವು ಪಂ. ಪುಟ್ಟರಾಜ ಕವಿ ಗವಾಯಿಗಳವರ 14ನೇ ಸ್ವರ ಸ್ಮರಣೋತ್ಸವ ಹಾಗೂ ಕಲಾ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅತಿಥಿಗಳಾಗಿ ವಿಜಯಕರ್ನಾಟಕ ಜಿಲ್ಲಾ ವರದಿಗಾರರಾದ ಶ್ರೀಕಾಂತ ಅಕ್ಕಿಯವರು ಆಗಮಿಸಿದ್ದರು. ಸಂಗೀತ ವಿದ್ಯೆ ಬಹು ಕಠಿಣವಾದದು ಮತ್ತು ಪ್ರತಿಯೊಂದು ಕಾರ್ಯಕ್ರಮದ ಪ್ರಾರಂಭದಲ್ಲಿ ನಾವು ದೇವರ ಪ್ರಾರ್ಥನೆಯೊಂದಿಗೆ ಆರಂಭ ಮಾಡುತ್ತೆವೆ. ಇದು ಬಹು ಪ್ರಮುಖವಾದ ಕಲೆಯಾಗಿದೆ ಎಂದು ಹಾಗೇ ಸನ್ಮಾನಿತರಾದ ಕರ್ನಾಟಕ ಜನಪದ ಅಕಾಡೆಮಿಯ ಸದಸ್ಯರಾದ ಡಾಽಽ ಜಿವನಸಾಬ ಬಿನ್ನಾಳರವರು ಮತ್ತು ಮಹೇಬೂಬಸಾಬ ಕಿಲ್ಲೆದಾರವರು ನಾವು ಶಾಸ್ತ್ರೀಯ ಸಂಗೀತವಾಗಿರಲಿ ಅಥವಾ ಬರುವಂಥ ಜನಪದ ಸಂಗೀತವನ್ನು ಪ್ರತಿಯೊಬ್ಬರ ಮನಮನಗಳಿಗೆ ತಲುಪಿಸುವಂಥ ಕಾರ್ಯ ನಾವೆಲ್ಲ ಮಾಡಿದಾಗ ಸಂಗೀತ ಇನ್ನೂ ಅಜರಾಮರವಾಗ್ತದೆ ಎಂದರು.
ಅಧ್ಯಕ್ಷರಾದ ದಾನಪ್ಪ ಕವಲೂರರವರು ಹಿಂದುಸ್ಥಾನಿ ಗಾಯನ ಕಛೇರಿಗಳು ನಮ್ಮ ಭಾಗದಲ್ಲಿ ಅತಿ ವಿರಳವಾಗಿವೆ ಇಂತ ಸಂದರ್ಭದಲ್ಲಿ ಬೆಳೆಯುತ್ತಿರುವ ಕಲಾವಿದರರಿಗೆ ಗಾಯನ ಗೊಷ್ಟಿ ಏರಿ್ಡಸಿದ್ದು ಬಹಳ ಸಂತೋಷವಾಗಿದೆ ಎಂದರು. ಸ್ವರ ಸ್ಮರಣೋತ್ಸವದ ಗಾಯನದಲ್ಲಿ ಸದಾಶೀವ ಐಹೊಳೆಯವರು ಭಾಗವಹಿಸಿ ರಾಗ ಮಾಲಕಾಂಸ ್ಘ ಪುಟ್ಟರಾಜ ಗವಾಯಿಘಲ ಗೀತೆ ಹಾಡಿ ಜನರನ್ನ ಮನಾನಂದಗೊಳಿಸಿದರು ಇವರಿಗೆ ತಬಲಾ ಸಾಥ ಗದುಗಿನ ಶರಣಕುಮಾರ ಗುತ್ತರಿಗಿಯವರು, ಹಾರ್ಮೋನಿಯಂ ಸಾಥ ವಿರೇಶ ಹಿಟ್ನಾಳರವರು, ಇನ್ನೊರ್ವ ತಬಲಾದಲ್ಲಿ ಶ್ರೀನಿವಾಸ ಜೋಶಿಯವರು, ಹಾರ್ಮೋನಿಯಂದಲ್ಲಿ ಕುಽಽ ಅಪೇಕ್ಷಾ ಕವಲೂರು ಕಿಬೋರ್ಡ ್ಘ ಕುಽಽ ಮಧು ಕವಲೂರು, ತಾಳದಲ್ಲಿ ಕೃಷ್ಣಾ ಸೊರಟೂರರವರೂ ಸಾಥ ನಿಡಿದರು. ಆರಂಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ಸಂಗೀತ ಶಿಕ್ಷಕಿ ಶಕುಂತಲಾ ಬೆನ್ನಾಳ ಪ್ರಾಸ್ತಾವಿಕ ಮತ್ತು ಸ್ವಾಗತಿಸಿದರು ಕು. ಸ್ಪಂದನಾ ಹಿಂದಲಮನಿ ಮತ್ತು ಶಿವಲೀಲಾ ಸೊಪ್ಪಿಮಠ ನಿರೂಪಿಸಿದರು.