ದಾನಮ್ಮ ದೇವಿಯ 13 ನೇ ವರ್ಷದ ಜಾತ್ರಾ ಮಹೋತ್ಸವ
ಬ್ಯಾಡಗಿ 26: ಪಟ್ಟಣದ ನೆಹರು ನಗರದ ಶ್ರೀ ದಾನಮ್ಮ ದೇವಿಯ 13 ನೇ ವರ್ಷದ ಜಾತ್ರಾ ಮಹೋತ್ಸವವು ನ.28 ರಿಂದ ಡಿ.1 ರವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಗುರುವಾರ ಸಂಜೆ 6,30 ಘಂಟೆಗೆಮುಪ್ಪಿನೇಶ್ವರ ಮಠದ ಚೆನ್ನ ಮಲ್ಲಿಕಾರ್ಜುನ ಶ್ರೀಗಳಿಂದ ಧ್ವಜಾರೋಹಣ ಹಾಗೂ ಜಾತ್ರಾ ಮಹೋತ್ಸವ ಪೂಜೆಯೊಂದಿಗೆ ಪ್ರಾರಂಭವಾಗಲಿದೆ. ಶುಕ್ರವಾರ ಮುಂಜಾನೆ 10 ಘಂಟೆಗೆ ಹಾವೇರಿಯ ಸದಾಶಿವ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಉದ್ಘಾಟನೆ ನೆರವೇರಲಿದೆ. ಮಧ್ಯಾಹ್ನ 12.45 ಘಂಟೆಗೆ ಉಚಿತ ಸಾಮೂಹಿಕ ವಿವಾಹಗಳು ನೆರವೇರಲಿವೆ. ಸಂಜೆ 7 ಘಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶನಿವಾರ ಸಂಜೆ 6.30 ಘಂಟೆಗೆ ವಿರಕ್ತಮಠ ಹೂವಿನ ಶಿಗ್ಲಿ ಚನ್ನವೀರ ಶ್ರೀಗಳ ಸಾನಿಧ್ಯದಲ್ಲಿ ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಾಗೂ ಹಿರಿಯ ನಾಗರಿಕರಿಗೆ (80 ವರ್ಷ ಮೇಲ್ಪಟ್ಟ) ಸನ್ಮಾನ ಕಾರ್ಯಕ್ರಮ ನಡೆಯಲಿದೆ, ರವಿವಾರ ಮುಂಜಾನೆ 6 ಘಂಟೆಗೆ, ಶ್ರೀ ದಾನಮ್ಮದೇವಿಗೆ ರುದ್ರಾಭಿಷೇಕ ನಡೆಯಲಿದೆ. ಮಧ್ಯಾಹ್ನ 12:30 ಘಂಟೆಗೆ ಮಹಾಪ್ರಸಾದ, ಸಂಜೆ 4 ಘಂಟೆಗೆ ಬೆಳ್ಳಿ ಪಲ್ಲಕ್ಕಿ ಮಹೋತ್ಸವ, 5 ಘಂಟೆಗೆ ವಿಶೇಷವಾಗಿ ಮಹಿಳೆಯರಿಂದ ಮಹಾ ರಥೋತ್ಸವದ ತೇರು ಸಾಗಲಿದೆ. ಸಂಜೆ 7 ಘಂಟೆಗೆ ಕಾರ್ತಿಕೋತ್ಸವ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ, ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಕೋರಿದ್ದಾರೆ,