ನೇತಾಜಿ ಸುಭಾಸ್ ಚಂದ್ರ ಬೊಸ್‌ರವರ 128ನೆಯ ಜಯಂತಿ

128th birth anniversary of Netaji Subhas Chandra Bose

ನೇತಾಜಿ ಸುಭಾಸ್ ಚಂದ್ರ ಬೊಸ್‌ರವರ 128ನೆಯ ಜಯಂತಿ  

ಬೀಳಗಿ 23: ತಾಲೂಕಿನ ಬನಶಂಕರಿದೇವಿ ವಿದ್ಯಾ ಸಂಸ್ಥೆ ಪ್ರತಿಷ್ಠಾನದ ಬಿ.ಎನ್‌.ಖೋತ ಅಂತರ ರಾಷ್ಟ್ರೀಯ ಪಬ್ಲಿಕ್ ಶಾಲೆ ಮತ್ತು ಬಿ.ಎನ್‌.ಖೋತ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಅನಗವಾಡಿಯ ಸಂಯುಕ್ತ ಆಶ್ರಯದಲ್ಲಿ ಮಹಾನ್ ರಾಷ್ಟ್ರನಾಯಕ ನೇತಾಜಿ ಸುಭಾಸ್ ಚಂದ್ರ ಬೊಸ್‌ರವರ ಅದಮ್ಯ ಚೇತನ ಮತ್ತು ರಾಷ್ಟ್ರಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಗೌರವಿಸಲು ಭಾರತ ಸರಕಾರವು ಅವರ ಜನುಮದಿನವನ್ನು ಪರಾಕ್ರಮ್ ದಿವಸ್ ಎಂದು ಘೋಷಿಸಲಾಗಿದೆ. ಇದರ ಪ್ರಯುಕ್ತ ನೇತಾಜಿ ಸುಭಾಸ್ ಚಂದ್ರ ಬೊಸ್‌ರವರ 128ನೆಯ ಜಯಂತಿಯನ್ನು ಆಚರಿಸಲಾಯಿತು. 

  ಪ್ರಾಂಶುಪಾಲ್ ಸುರೇಶ ಹವಾಲ್ದಾರ ಸುಭಾಸ್ ಚಂದ್ರ ಬೋಸ್‌ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅವರ ಜೀವನ ಮತ್ತು ಸಾಧನೆಯ ಆದರ್ಶಗಳನ್ನು ಮಕ್ಕಳಿಗೆ ಮನವರಿಕೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಾಲೆ ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.