ಧುಳಗನವಾಡಿಯಲ್ಲಿ 101ನೇಯ ಸುವಿಚಾರ ಚಿಂತನಗೋಷ್ಠಿ
ಚಿಕ್ಕೋಡಿ 02: ಸುವಿಚಾರ ಚಿಂತನೆ ಪ್ರತಿಯೊಬ್ಬರಿಗೆ ಜ್ಞಾನಾಮೃತವಿದ್ದಂತೆ, ಸಂಕುಚಿತ ಕಲ್ಮಶ ಮನಸ್ಸನ್ನು ಸುಚಿತ್ವಗೊಳಿಸಲು ಪುರಾಣ ಪ್ರವಚನ ಆಸ್ವಾಧಿಸುವದರಿಂದ ಭಕ್ತಿ ಪುಣ್ಯ ಪ್ರಾಪ್ತಿಯಾಗುತ್ತದೆ, ಎಂದು ಖಡಕಲಾಟ ಪೋಲಿಸ ಸ್ಟೇಷನ್ ಎ.ಎಸ್. ಆಯ್ ಎ. ಸಿ. ಅಂಬರಶೆಟ್ಟಿ ಅಭಿವ್ಯಕ್ತ ಪಡಿಸಿದರು. ಅವರು ಕಳೆದ ರವಿವಾರ ದಿನಾಂಕ 2 ರಂದು ಸದುರು ಆರಣರ ಕಲಾಸೇವಾ ಮಂಡಳ, ಧುಳಗನವಾಡಿ ಖೋತ ಪರಿವಾರದವರು ಆಯೋಜಿಸಿದ 101ನೇಯ ಸುವಿಚಾರ ಚಿಂತನಗೋಷ್ಠಿ ಭಜನಾ ಕಾಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸಂಗೀತ ಭಜನೆ ಪದ ಕೇಳುವುದರಿಂದ ಮನಸ್ಸಿಗೆ ಸದಾ ಆನಂದ ಸಿಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಪೂಜ್ಯ ಕೇದಾರಲಿಂಗ ಶರಣರು ಮಾತನಾಡಿ ಮನುಷ್ಯ ಜೀವಿಗೆ ಬೋಧನೆ ಮಾಡುವ ಆಧ್ಯಾತ್ಮೀಕತೆ ಕಲ್ಪವೃಕ್ಷವಿದ್ದಂತೆ, ಯಾವಾಗಲೂ ಜ್ಞಾನದ ಸುವಾಸನೆ ಬಿರುತ್ತದೆ. ಅಂತಹ ಪಾರಮಾರ್ಥ ತೋಟದಲ್ಲಿ ಭಕ್ತಿ ಎಂಬ ಬೆಳೆ ತೆಗೆದು ಜೀವನಮುಕ್ತರಾಗಬೇಕೆಂದರು.
ಅತಿಥಿಗಳಾಗಿ ಆಗಮಿಸಿದ ಮಾತೋಶ್ರೀ ಸಾವಿತ್ರಮ್ಮ ವಿಜಯನಗರೆ ಮಾತನಾಡಿ ಬದುಕಿನ ಭವನೆಯನ್ನು ಕಳೆಯಲುಸಂತ ಶರಣರ ಸಂಘ ಮಾಡಬೇಕು ನುಡಿದಂತೆ ನಡೆದು ಮಹಾತ್ಮರ ಅಮೃತ ವಾಣಿ ಕೇಳಿ ಮನುಷ್ಯ ಜೀವನ ಸಾರ್ಥಕ ಮಾಡಿಕೋಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಈರಾ್ಪ ರು. ಅನೋಜಿ ಹತ್ತರವಾಟ ಹಾಗೂ ಪ್ರತಿಭಾವಂತ ವಿದ್ಯಾರ್ಥಿ ಸುದರ್ಶನ ಖೋತ ಇವರಿಗೆ ಶಾಲು ಹೋದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಜಯ ವಾಘಮಾರೆ, ಅಪ್ಪಾಸಾಬ ಖೋತ, ಸಾವಂತ ಜೋಡಟ್ಟಿ, ಮಾರುತಿ ಚಿಮನೆ ಮಾರುತಿ ಕಾಮಗೌಡ, ಶಶಿಕಾಂತ ಜಂಗಿ ಉಪಸ್ಥಿತರಿದ್ದರು.
ವಿವಿಧ ಗ್ರಾಮದ ಕಲಾವಿದರು ಭಜನಾ ಸೇವೆ ನಡೆಸಿಕೋಟ್ಟರು. ಪ್ರಾಸ್ತಾವಿಕವಾಗಿ ಭರತ ಕಲಾಚಂದ್ರ ಮಾತನಾಡಿದರು. ಓಂಕಾರ ಖೋತ ಸ್ವಾಗತಿಸಿದರು. ಸುಜಾತಾ ಮಗದುಮ್ಮ ನಿರೂಪಿಸದರು. ಸುಪ್ರೀಯಾ ಕಲಾಚಂದ್ರ ವಂದಿಸಿದರು.