ವಿಜಯಪುರ 11: ಜಗತ್ತಿನಾದ್ಯಂತ ತಲ್ಲಣ ಮೂಡಿಸಿರುವ ಕರೋನಾ ವೈರಸ್ದಿಂದ ಜನರು ಭಯಭೀತರಾಗಿದ್ದು, ಇಂತಹ ಸಂದರ್ಭದಲ್ಲಿ ಪ್ರತಿಯೊಂದು ಸಂಘ-ಸಂಸ್ಥೆಗಳು ಸಕರ್ಾರಗಳು ತನ್ನಿಂದಾಗುವ ಸಹಾಯ ಮಾಡುತ್ತಿದ್ದು, ಸವರ್ೇ ಸಾಮಾನ್ಯವಾಗಿ ಬಿಟ್ಟಿದೆ.
ಕೋವಿಡ್ -19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವೈಯಕ್ತಿಕವಾಗಿ 1ಲಕ್ಷ ರೂ. ಗಳನ್ನು ವಿಜಯಪುರದ ನಿವೃತ್ತ ನಸರ್ಿಂಗ್ ಸೂಪರಿಟೆಂಡೆಂಟ್ ಶ್ರೀಮತಿ ವಿಮಲಾ ಗಂ.ತಿಮ್ಮಣ್ಣ ಬಿದರಿ ಎಂಬ 83 ವರ್ಷದ ವೃದ್ಧೆ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರೆ. ವಿಮಲಾ ಅವರ ಪುತ್ರ ಶ್ರೀನಿವಾಸ ಟಿ.ಬಿದರಿ ಐಆರ್ಎಸ್ ಸಧ್ಯ ಗುಜರಾತ್ ರಾಜ್ಯದ ಸೂರತ್ನಲ್ಲಿ ಆದಾಯ ತೆರಿಗೆ ಇಲಾಖೆ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಜನರು ಮುಂದೆ ಬಂದಾಗ ಜನರಲ್ಲಿ ಆಶಾಭಾವನೆ ವ್ಯಕ್ತವಾಗಲಿದ್ದು, ಈ ಕಾರ್ಯ ಎಲ್ಲರಿಗೂ ಮಾದರಿಯಾಗಲಿದೆ. ದಿ. 11ರಂದು ವಿಜಯಪುರ ಜಿಲ್ಲಾಧಿಕಾರಿಗಳಿಗೆ 1 ಲಕ್ಷ ರೂ. ಚೆಕ್ನ್ನು ವಿಮಲಾ ಗಂ.ತಿಮ್ಮಣ್ಣ ಬಿದರಿ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅವರ ಮಗಳಾದ ಡಾ.ಅಂಜಲಿ ಬಿದರಿ, ಅಳಿಯ ರಾಜು ಬಿರಾದಾರ ಹಾಗೂ ಅರುಣ ಹುಂಡೇಕಾರ ಅವರು ಉಪಸ್ಥಿತರಿದ್ದರು.