ದೇಶದಲ್ಲಿ ವಾಯು ಮಾಲಿನ್ಯಕ್ಕೆ 1.2ದಶಲಕ್ಷ ಮಂದಿ ಬಲಿ


ನವದೆಹಲಿ,ಏ.3- ಭಾರತದಲ್ಲಿ ವಾಯು ಮಾಲಿನ್ಯಕ್ಕೆ 1.2ದಶಲಕ್ಷ ಮಂದಿ 2017ರಲ್ಲಿ ಬಲಿಯಾಗಿದ್ದಾರೆ ಎಂದು 2019ರ ಜಾಗತಿಕ ವರದಿಯೊಂದು ತಿಳಿಸಿದೆ.

2017ರಲ್ಲಿ ಒಟ್ಟಾರೆ ವಾಯು ಮಾಲಿನ್ಯದಿಂದ 5ದಶಲಕ್ಷ ಜನರು  ಹಾನಿಕಾರಕ ರೋಗಗಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇವುಗಳಲ್ಲಿ 3ದಶಲಕ್ಷ ಸಾವುಗಳಿಗೆ ವಾತಾವರಣದಲ್ಲಿರುವ ಅಪಾಯದಾಯಕ ಕಣಗಳು ಮೀತಿ  ಮೀರಿರುವುದೆ ನೇರ ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಲಾಗಿದೆ.

ವಾಯು ಮಾಲಿನ್ಯ ದುಷ್ಪರಿಣಾಮದ ವಿಶ್ಲೇಷಣೆಯ ಪ್ರಕಾರ ಚೀನಾ ಹಾಗೂ ಭಾರತ ದೇಶಗಳೇ ವಿಶ್ವದಲ್ಲಿನ ಅರ್ಧದಷ್ಟು ವಾಯು ಮಾಲಿನ್ಯ ಸಂಬಂಧಿತ ಸಾವಿಗೆ ಮೂಲ ಕಾರಣವಾಗಿದೆ.