ಧಾರವಾಡ 17: ಹಿಂದಿನ ಸಾರ್ವತ್ರಿಕ ಚುನಾವಣೆಗಳ ಮತದಾನ ಪ್ರಮಾಣ ಅವಲೋಕಿಸಿದಾಗ ಶಿಕ್ಷಿತರು, ನೌಕರರು ವಾಸಿಸುವ ಪ್ರದೇಶಗಳಲ್ಲಿ ಗ್ರಾಮೀಣ ಭಾಗಕ್ಕಿಂತ ಮತದಾನ ಕಡಿಮೆಯಾಗಿದೆ. ಮತದಾನ ಮಾಡಲು ಯಾರಲ್ಲೂ ನಿರಾಸೆ, ಉದಾಸೀನತೆ ಬೇಡ. ಅದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ತಪ್ಪದೇ ಮತ ಚಲಾಯಿಸಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಹೇಳಿದರು.
ಕನರ್ಾಟಕ ಕಾಲೇಜು ಆವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ "ನಾನು ಮತ ಹಾಕುತ್ತೆನೆ ನೀವು ಮತಹಾಕಿ ಮತ್ತು ನಿಮ್ಮವರನ್ನು ಮತದಾನಕ್ಕೆ ಕರೆತನ್ನಿ" ಎಂಬ ಘೋಷಣೆಯಡಿ ಆಯೋಜಿಸಿದ್ದ, ಮತದಾರರ ಜಾಗೃತಿ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 60 ರಷ್ಟು ಮತ್ತು ವಿಧಾನ ಸಭೆ ಚುನಾವಣೆಯಲ್ಲಿ ಶೇ. 70 ರಷ್ಟು ಮತದಾನವಾಗಿದೆ ಅದರಲ್ಲೂ ಗ್ರಾಮೀಣ ಪ್ರದೇಶಕ್ಕಿಂತ ನಗರ ಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ವಿದ್ಯಾವಂತರು, ಸೇವೆಯಲ್ಲಿರುವವರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಯಾವುದೇ ರೀತಿಯ ನಿರಾಶೆ ಮನೋಭಾವ, ಉದಾಸೀನತೆ ತೋರದೆ ಪ್ರತಿಯೊಬ್ಬರು ಬರುವ ಎಪ್ರೀಲ್ 23 ರಂದು ತಮ್ಮ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕೆಂದು ಅವರು ಹೇಳಿದರು.
ಭಾರತ ಚುನಾವಣಾ ಆಯೋಗ ಸ್ಥಾಪಿಸಿರುವ ಉಚಿತ ಸಹಾಯವಾಣಿ 1950ಕ್ಕೆ ಕರೆಮಾಡಿ ತಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರು, ಮಾಹಿತಿ ನೀಡಲು ನಾಗರಿಕರ ಅನುಕೂಲಕ್ಕಾಗಿ ಭಾರತ ಚುನಾವಣಾ ಆಯೋಗ ಸಿವಿಜಿಲ್ ಎಂಬ ಮೋಬೈಲ್ ಆ್ಯಪ್ ಬಿಡುಗಡೆ ಮಾಡಿದೆ.
ಆ ಮೂಲಕ ದೂರ ಸಲ್ಲಿಸಿದ ನೂರು ನಿಮಿಷಗಳಲ್ಲಿ ಪರಿಹಾರ ಸಿಗಲಿದೆ. ಸಿವಿಜಿಲ್ ಆ್ಯಪ್ ಜನಪ್ರಿಯಗೊಳಿಸಿ ಹೆಚ್ಚು ಹೆಚ್ಚು ಜನ ಬಳಸುವಂತೆ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಮತದಾನದ ದಿನದಂದು ಮತಚಲಾಯಿಸಿ ಸೆಲ್ಫಿ ಫೋಟೋ ಕಳಿಸುವ ಹೊಸ ಯುವ ಮತದಾರರ ಉತ್ತಮ ಛಾಯಾಚಿತ್ರಕ್ಕೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಬಹುಮಾನ ನೀಡಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ 18 ರಿಂದ 19 ವರ್ಷದೊಳಗಿನ 35 ಸಾವಿರ ನೂತನ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿದ್ದಾರೆ.
ಉಳಿದವರು ಎನ್ವಿಪಿ (ನ್ಯಾಶನಲ್ ವೋಟರ್ಸ್ ಪೋರ್ಟಲ್) ಮೂಲಕ ತಮ್ಮ ಹೆಸರನ್ನು ಮತದಾರ ಪಟ್ಟಿಗೆ ಸೇರಿಸಬೇಕೆಂದು ಅವರು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ, ಜಿಲ್ಲಾ ಪಂಚಾಯತ ಸಿ.ಇ.ಒ ಡಾ.ಬಿ.ಸಿ.ಸತೀಶ ಮಾತನಾಡಿ, ಬರುವ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅಧಿಕ ಮತದಾನ ಮಾಡಿಸುವ ಗುರಿ ಹೊಂದಲಾಗಿದೆ.
ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಮತದಾನ ಜಾಗೃತಿಗಾಗಿ ಇ.ವಿ.ಎಂ, ವಿವಿಪ್ಯಾಟ್ ತಿಳುವಳಿಕೆ ಮತದಾನ ಪ್ರಾತ್ಯಕ್ಷಿಕೆ, ಮಾಧ್ಯಮ ಕಾಯರ್ಾಗಾರ, ಮತದಾರರಿಗಾಗಿ ವಿವಿಧ ರಚನಾತ್ಮಕ ಸ್ಪಧರ್ೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಸೈಕಲ್ ಜಾಥಾ ಮೂಲಕ ನಗರ ಪ್ರದೇಶಗಳಲ್ಲಿ ಮತದಾನ ಕುರಿತು ಹೆಚ್ಚಿನ ಅರಿವು ಮೂಡಿಸಲು ಕ್ರಮವಹಿಸಲಾಗಿದೆ ಎಂದು ಅವರು ಹೇಳಿದರು.
ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಸೈಕಲ್ ಜಾಥಾ ಮಾಡಿ ಮತದಾ ರರ ಜಾಗೃತಿಗೆ ಶ್ರಮಿಸಿದ ಅಂಜುಮನ್ ಕಾಲೇಜಿನ ವಿದ್ಯಾಥರ್ಿ ಸಚಿನ್ ಹಾಗೂ ತಂಡದವರಿಗೆ ಪ್ರಮಾಣಪತ್ರ ನೀಡಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ ಸಿ.ಇ.ಓ ಅಭಿನಂದಿಸಿದರು.
ಶಿಕ್ಷಕ ಹಾಗೂ ಜಾನಪದ ಕಲಾವಿದರಾದ ಎಫ್.ಬಿ.ಕಣವಿ, ಸಿ.ಎಂ.ಕೆಂಗಾರ, ಪ್ರಮೀಳಾ ಜಕ್ಕಣ್ಣವರ ಹಾಗೂ ತಂಡದ ಸದಸ್ಯರು ಮತದಾನ ಜಾಗೃತಿ ಹಾಡುಗಳನ್ನು ಪ್ರಸ್ತುತ ಪಡಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಗಜಾನನ ಬಿ.ಮನ್ನಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರಿಕಟ್ಟಿ, ಎಸ್.ಎಂ ಹುಡೆದಮನಿ, ಎ.ಎ.ಖಾಜಿ, ಕೆ.ಎಂ.ಶೇಖ್, ಸ್ವೀಪ್ ಸಮಿತಿ ಸದಸ್ಯ ಕಾರ್ಯದಶರ್ಿ ಹಾಗೂ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿದರ್ೇಶಕ ಮಂಜುನಾಥ ಡೊಳ್ಳಿನ, ವಿಷಯ ಪರಿವೀಕ್ಷಕ ಬಿ.ಬಿ.ದುಬ್ಬನಮರಡಿ, ಎಸ್.ಬಿ.ಕೇಸರಿ ಸೇರಿದಂತೆ ವಿವಿಧ ಅಧಿಕಾರಿಗಳು, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು, ಶಾಲಾ ಮುಖ್ಯಸ್ಥರು ಉಪಸ್ಥಿತರಿದ್ದರು.