ಶೇಡಬಾಳ : ತಂಬಾಕು ಸೇವನೆಯಿಂದ ವಿದ್ಯಾಥರ್ಿಗಳ ಮೇಲೆ ವ್ಯತಿರಿಕ್ತ ಪರಿಣಾಮ: ಶಿರಹಟ್ಟಿ

ಶೇಡಬಾಳ 01: ತಂಬಾಕು ಮತ್ತು ಅದರ ವಿವಿಧ ರೂಪದ ಉತ್ಪನ್ನಗಳ ಸೇವನೆಯು ವಿದ್ಯಾಥರ್ಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವದಲ್ಲದೆ, ಕುಟುಂಬ ಹಾಗೂ ಸಮಾಜವನ್ನು ಹಾಳುಗೆಡುವುತ್ತದೆ. ಮಾದಕ ವಸ್ತುಗಳಿಂದ ಮನಸ್ಸನ್ನು ಕೇಂದ್ರಿಕರಿಸಲಾಗದೆ ಜೀವನದಲ್ಲಿ ಎನನ್ನೂ ಸಾಧಿಸದೇ ಹತಾಶರಾಗಿ ಸಮಾಜಕ್ಕೆ ಮತ್ತು ದೇಶಕ್ಕೆ ಕಂಟಕರಾಗಿ ನಿರರ್ಥಕ ಬದುಕನ್ನು ಸಾಗಿಸುವ ಸ್ಥಿತಿ ಉದ್ಭವಿಸುತ್ತದೆ. ಈ ವಸ್ತುಗಳಿಂದ ದೂರವಿದ್ದು ಯಶಸ್ವಿ ಜೀವನ ಸಾಗಿಸಬೇಕೆಂದು ಸ್ಥಳೀಯ ಪೋಲೀಸ್ ಠಾಣೆಯ ಪಿ.ಎಸ್.ಐ ಎಚ್.ಎನ್. ಶಿರಹಟ್ಟಿ ಹೇಳಿದರು. 

ಅವರು ಶುಕ್ರವಾರ ದಿ. 31 ರಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ವಿಶ್ವ ತಂಬಾಕು ರಹಿತ ಜಾಗೃತಿ ಆಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. 

ವಿದ್ಯಾಥರ್ಿಗಳು ಪರವಾಣಿಗೆ ರಹಿತವಾಗಿ ವಾಹನ ಚಲಾಯಿಸುವದು ಕಾನೂನಿನ ಉಲ್ಲಂಘನೆಯಾಗುತ್ತದೆ. ಅಂತಹ ಪ್ರಸಂಗದಲ್ಲಿ ಅಪಘಾತಕ್ಕೀಡಾದರೆ ವಿದ್ಯಾಥರ್ಿಗಳು ತಮ್ಮ ಪಾಲಕರನ್ನು ಕಷ್ಟಕ್ಕೀಡು ಮಾಡಿದಂತಾಗುತ್ತದೆಯೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಓ.ಹಲಸಗಿಯವರು ಮಾತನಾಡಿ ಸಂಪತ್ತು ಕಳೆದು ಹೋದರೆ ಮತ್ತೇ ಗಳಿಸಬಹುದು. ಆದರೆ, ಆರೋಗ್ಯ ಮತ್ತು ಚಾರಿತ್ರ್ಯ ಹಾಳಾದರೆ ಮರಳಿ ಗಳಿಸಲಾಗದು. ಜೀವನ ಪರ್ಯಂತ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ವಿದ್ಯಾಥರ್ಿಗಳು ತಾವೊಬ್ಬರೆ ಉದ್ಧಾರವಾಗದೆ, ತಮ್ಮ ಕುಟುಂಬ, ಪರಿಸರ ಮತ್ತು ಸಮಾಜ ಉದ್ಧಾರವಾಗುವ ಮಹೋನ್ನತ ಕಾರ್ಯ ಮಾಡಬೇಕು. ಅದರಿಂದ ಎಲ್ಲರೂ ಹೆಮ್ಮೆ ಪಡುವ ಕೆಲಸ ಸಾಧಿಸಬೇಕೆಂದು ಹೇಳಿದರು. 

ಪದವಿ ಪೂರ್ವ ಪ್ರಾಚಾರ್ಯ ಪ್ರೊ. ಪಿ.ಬಿ.ನಂದಾಳೆ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾಥರ್ಿಗಳು ಸಚ್ಚಾರಿತ್ರ್ಯವಂತರಾಗಬೇಕೆಂದು ಹೇಳಿ ಎಲ್ಲರನ್ನು ಸ್ವಾಗತಿಸಿದರು. 

 ಕಾರ್ಯಕ್ರಮದಲ್ಲಿ ಪ್ರೊ. ಎಸ್.ಎಸ್.ಗಣೆ, ಪ್ರೊ. ಜೆ.ಎನ್.ನಾಯಿಕ, ಪ್ರೊ. ಪಿ.ಬಿ.ಹವಾಲ್ದಾರ, ಪ್ರೊ.ಎಸ್.ಎ.ಅವಟಿ, ಪ್ರೊ.ಎಂ.ವಾಯ್.ಮಾಳಿ, ಅಮರ ಕೊರವಿ ಮತ್ತು ಪೋಲೀಸ್ ಠಾಣೆ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರೊ.ಎಂ.ಎಸ್.ಮಾಂಜರಿಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.