ಕಾಗವಾಡ 05: ಐನಾಪೂರದ ಕೆ.ಆರ್.ಇ.ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾಥರ್ಿ ಸಚಿನ ಗಣಪತಿ ತೇರದಾಳೆ 98.8 ಅಂಕಪಡೆದು ಚಿಕ್ಕೋಡಿ ಡಿಡಿಪಿಐ ವಲಯದಲ್ಲಿ ತೃತೀಯ ಕ್ರಮಾಂಕ ಪಡೆದಿದ್ದರಿಂದ ಕಾಗವಾಡ ಬಿಇಒ ಎ.ಎಸ್.ಜೋಡಗೇರಿ ಶಾಲೆಗೆ ತರಳಿ ವಿದ್ಯಾಥರ್ಿಗೆ ಸನ್ಮಾನಿಸಿದ್ದಾರೆ.
ಶನಿವಾರ ದಿ. 4ರಂದು ಕೆ.ಆರ್.ಇ.ಎಸ್ ಶಾಲೆಗೆ ಭೇಟಿನೀಡಿ, ಸನ್ಮಾನಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯಿಂದ 150 ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದರು. ಶೇ. 92%ರಷ್ಟು ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಯ ಒಳ್ಳೆಯ ಗುಣಮಟ್ಟದ ಶಿಕ್ಷಣ ಕಂಡು ಕ್ಷೇತ್ರ ಶಿಕ್ಷಣಾಧಿಕಾರಿ, ಮುಖ್ಯಾಧ್ಯಾಪಕ ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ಅಭಿನಂದಿಸಿದರು.
ಸನ್ಮಾನ ಸಮಾರಂಭದಲ್ಲಿ ಸಂಸ್ಥೆಯ ಆಧ್ಯಕ್ಷ ಮೋಹನ ಕಾಚರ್ಿ, ಮುಖ್ಯಾಧ್ಯಾಪಕರಾದ ಎಸ್.ಎಂ.ಬೆಳಕೂಡ, ಶಿಕ್ಷಕರಾದ, ಎ.ಎಂ.ಹುಲನ್ನವರ, ವ್ಹಿ.ಎಸ್.ಅವಟಿ, ಎಸ್.ಪಿ.ನರೋಟೆ, ವ್ಹಿ.ಎಸ್.ಮಹೇಶ್ವರ, ಎಸ್.ಎ.ಶೇಖ್, ಜಿ.ಎಸ್.ಕುಡವಕ್ಕಲಗಿ, ಜಿ.ಪಿ.ತೇರದಾಳೆ, ಸೇರಿದಂತೆ ಅನೇಕರು ಇದ್ದರು.