ಉಗರಗೋಳ(ತಾ,ಸವದತ್ತಿ) 06: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಗುರುವಾರ ಬೆಳಿಗ್ಗೆ ಲೋಕ ಕಲ್ಯಾಣಾರ್ಥವಾಗಿ ಹಾಗೂ ನಾಡಿನ ರೈತರ ಹಾಗೂ ನಾಡಿನ ಜನತೆಗೆ, ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿ ಸಿ ಸಕರ್ಾರ ದೇವಸ್ಥಾನ ಆವರಣದಲ್ಲಿ ಗಂಗಾಮಾತೆ ಪೂಜೆಯೊಂದಿಗೆ ಪರ್ಜನ್ಯ ಹೋಮವನ್ನು ನೆರವೇರಿಸಲಾಯಿತು.
ದೇವಸ್ಥಾನ ಕಾರ್ಯನಿವರ್ಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ ಮನುಷ್ಯನ ತಿಳುವಳಿಕೆಯ ಕೊರತೆ ಹಾಗೂ ದುರಾಸೆಯಿಂದ ಅರಣ್ಯ ನಾಶವಾಗುತ್ತಿದ್ದು ಮಳೆಯ ಪ್ರಮಾಣ ಕಡಿಮೆಯಾಗಿದ್ದು ನಾಡಿನ ಜನತೆ ಹಾಗೂ ರೈತನ ಅಧೋಗತಿಗೆ ಕಾರಣವಾಗಿದೆ, ನಾಡಿಗೆ ಭಯಂಕರ ಬರಗಾಲ ಬಂದೊದಗಿದೆ. ಇದನ್ನು ಹೋಗಲಾಡಿಸಲು ಯಲ್ಲಮ್ಮನ ದೇವಸ್ಥಾನದಲ್ಲಿ ಸಕರ್ಾರ ಮಳೆಗಾಗಿ ಪ್ರಾಥರ್ಿಸಿ ಪರ್ಜನ್ಯ ಹೋಮ, ಜಪತಪ, ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಲಾಯಿತು ಎಂದ ಅವರು ರಸ್ತೆ ಬದಿಯಲ್ಲಿ, ಪಟ್ಟಣ ಪ್ರದೇಶ, ಗ್ರಾಮೀಣ ಪ್ರದೇಶ ಮತ್ತು ಶಾಲೆ, ಕಾಲೇಜು, ಮನೆ, ಹೊಲಗದ್ದೆಗಳಲ್ಲಿ ಸಾಕಷ್ಟು ಗಿಡ, ಮರಗಳನ್ನು ನೆಟ್ಟು ಪರಿಸರವನ್ನು ಕಾಪಾಡಿಕೊಳ್ಳಬೇಕು, ಕಾಡು ಉಳಿದರೆ ನಾಡು ಉಳಿಯುತ್ತದೆ ಎಂದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಎಸ್. ಆರ್. ಪಾಟೀಲ ಮಾತನಾಡಿ-ಶ್ರೀರೇಣುಕಾ ದೇವಿಯ ಕೃಪಾ ಆಶೀವರ್ಾದ ಹಾಗೂ ಪರ್ಜನ್ಯ ಹೋಮದಿಂದ ಸಮಸ್ತ ನಾಡಿನ ಜನರಿಗೆ ಒಳ್ಳೆಯದಾಗುತ್ತದೆ. ಸಮೃದ್ಧ ಮಳೆ, ಹುಲಸಾದ ಬೆಳೆ ಸಮೃದ್ಧಿಯಾಗಿ ಬೆಳೆದು ನಾಡಿನ ರೈತನ ಮೂಗದಲ್ಲಿ ಸಂತೋಷ ಮೂಡಲಿ ಎಂದರು.
ಹೂಲಿಯ ಅಜ್ಜಯ್ಯಶಾಸ್ತ್ರಿಗಳು, ದೇವಸ್ಥಾನದ ಅರ್ಚಕರಾದ ಪರಸನಗೌಡ ರೆಣ್ಕೀಗೌಡ್ರ, ಏಕನಗೌಡ ಮುದ್ದನಗೌಡ್ರ, ಪರಸನಗೌಡ ಕಾಳಿಂಗೌಡ್ರ, ಮಂಜನಗೌಡ ಸಂದಿಮನಿ, ಬಸನಗೌಡ ಪರಷಋಷಿ, ದೇವಸ್ಥಾನದ ಪಂಡಿತ ಕೆ ಎಸ್ ಯಡೂರಯ್ಯ ಹಾಗೂ ಪಿ ರಾಜಶೇಖರಯ್ಯ ಚೇತನ ಗುರುಜಿ ವೈದಿಕತ್ವದಲ್ಲಿ ಅಭೀಷಕ, ವಿಶೇಷ ಪೂಜೆ, ಪರ್ಜನ್ಯ ಹೋಮ ಹಾಗೂ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು.
ದೇವಸ್ಥಾನ ಕಾರ್ಯನಿವರ್ಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಅಭಿವೃದ್ಧಿ ಸಮಿತಿ ಸದಸ್ಯ ಆದಪ್ಪಗೌಡ ಹುಲಕೋಟಿ, ಹೂಲಿಯ ಕುಲಕಣರ್ಿ, ಬಸವರಾಜ ಜಿರಗ್ಯಾಳ, ಅಭಿಯಂತರ ಎ ವಿ ಮೂಳ್ಳೂರ, ಕಿರಿಯ ಅಭಿಯಂತರ ಡಿ. ಆರ್. ಚವ್ಹಾಣ, ದೇವಸ್ಥಾನ ಸಿಬ್ಬಂದಿ ಇದ್ದರು.