ನೂತನ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಉದ್ಘಾಟನಾ ಸಮಾರಂಭ
ರಾಣೆಬೆನ್ನೂರ 22: ನಗರದ, ಗ್ರಾಮಗಳ ವರ್ತುಲಗಳಲ್ಲಿ, ರಸ್ತೆ ಅಕ್ಕಪಕ್ಕಗಳಲ್ಲಿ ಹಾಗೂ ಇತರೆಡೆಗಳಲ್ಲಿ ವ್ಯಕ್ತಿಗಳ ಮೂರ್ತಿ ಮತ್ತು ಪುತ್ತಳಿ ಅನಾವರಣ ಮಾಡುವುದು ಸರಿಯಲ್ಲ. ಇದರಿಂದ ಸಾಮರಸ್ಯ, ಭಾವೈಕ್ಯತೆಗೆ ಧಕ್ಕೆ ಬಂದ ಉದಾಹರಣೆಗಳೇ ಸಮಾಜದಲ್ಲಿ ಅಧಿಕವಾಗಿವೆ ಎಂದು ಕಾಗಿನೆಲೆ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು ಹೇಳಿದರು. ನಗರದ ಹಲಗೇರಿ ರಸ್ತೆಯ ಬೈಪಾಸ್ ಹತ್ತಿರದಲ್ಲಿ ನೂತನವಾಗಿ ನಿರ್ಮಿಸಿರುವ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ನನ್ನ ಗಮನಕ್ಕೆ ಬಂದಿರುವಂತೆ ಇತ್ತೀಚೆಗೆ ಸಮಾಜದಲ್ಲಿ ಮೂರ್ತಿ, ಪುತ್ತಳಿ ಪ್ರತಿಷ್ಠಾಪನೆಯ ಪರಿಣಾಮವಾಗಿ ಬಹಳಷ್ಟು ಕಡೆ ಕೋಮುಗಲಭೆ, ಗದ್ದಲ , ಗಲಾಟೆ, ಸಂಘರ್ಷ ಉಂಟಾಗಿ ಪೊಲೀಸ್, ಕೋರ್ಟುಗಳಲ್ಲಿ ಪ್ರಕರಣ ದಾಖಲಾಗಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು. ಸುಪ್ರೀಂ ಕೋರ್ಟಿನ ಆದೇಶದಂತೆ ವರ್ತುಲಗಳಲ್ಲಿ ಹಾಗೂ ಇತರೆಡೆಗಳಲ್ಲಿ ಸ್ವಾತಂತ್ರ್ಯ ಯೋಧರ, ದಾರ್ಶನಿಕರ ಮೂರ್ತಿ ಪ್ರತಿಷ್ಠಾಪನೆಗೆ ಮಾಡಬಾರದೆಂದು ನಿರ್ದೇಶನ ನೀಡಿದೆ. ಹೀಗಿದ್ದರೂ ಸಹ ಅನಾವರಣ ಕಾರ್ಯಕ್ರಮಗಳು ಸಮಾಜದಲ್ಲಿ ಇನ್ನೂ ನಡೆಯುತ್ತಿರುವುದು ವಿಷಾಧನೀಯ ಎಂದರು. ಮೂರ್ತಿ, ಪುತ್ತಳಿ ಪ್ರತಿಷ್ಠಾಪನೆ ಮಾಡುವುದಾದರೆ ಕಾನೂನು ಬದ್ಧವಾಗಿ ಹಾಗೂ ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ಮಾಡಬೇಕು. ಜೊತೆಗೆ ಸರ್ವ ಸಮಾಜದವರ ಒಮ್ಮತದ ಅಭಿಪ್ರಾಯ ಪಡೆದುಕೊಳ್ಳುವುದು ಉತ್ತಮ ಎಂದರು. ನಾನು ಮೂರ್ತಿ ಪ್ರತಿಷ್ಠಾಪನೆಗೆ ವೈಯಕ್ತಿಕವಾಗಿ ವಿರೋಧಿಸುತ್ತೇನೆ.
ಈವರೆಗೂ ನಾನು ಎಲ್ಲಿಯೂ ಮೂರ್ತಿ ಪ್ರತಿಷ್ಠಾಪನೆ ಅನಾವರಣ ಮಾಡಿಲ್ಲ. ಸುಕ್ಷೇತ್ರ ದೇವರಗುಡ್ಡದಲ್ಲಿ ಇತ್ತೀಚೆಗೆ ನಡೆದ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಸ್ವತಃ ಮುಖ್ಯಮಂತ್ರಿಗಳು ಆಗಮಿಸಿದ್ದರೂ ಸಹ ನಾನು ಅಲ್ಲಿಗೆ ಹೋಗಲಿಲ್ಲ. ಆದರೆ ಇಲ್ಲಿಯ ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಿರುವೆ ಎಂದರು. ಮೂರ್ತಿ, ಪುತ್ತಳಿ ಅನಾವರಣಗೊಳಿಸಿ ಪ್ರತಿಷ್ಠಾಪಿಸುವುದನ್ನು ಬಿಟ್ಟು, ಮಹಾತ್ಮರ ದಾರ್ಶನೀಕರ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಮೈಗೂಡಿಸಿಕೊಂಡು ಹಾಗೂ ತಮ್ಮ ಮಕ್ಕಳಿಗೆ ಶೈಕ್ಷಣಿಕ ಪ್ರಾತಿನಿಧ್ಯ ನೀಡುವುದರ ಮೂಲಕ ಮಹಾತ್ಮರ ಋಣ ತೀರಿಸಬೇಕು ಎಂದರು. ರಾಯಣ್ಣ, ಕನಕದಾಸರ ಮೂರ್ತಿ ಪ್ರತಿಷ್ಠಾಪಿಸುವುದರಿಂದ ಕುರುಬ ಸಮಾಜವು ಸಂಘಟನೆ ಆಗುವುದಿಲ್ಲ. ಬದಲಾಗಿ ಅಭಿಮಾನ ಬರುತ್ತದೆ. ಆದರೆ ಅವರುಗಳ ಆದರ್ಶಗಳನ್ನು ಸರ್ವರೂ ಮೈಗೂಡಿಸಿಕೊಂಡು ಮುನ್ನಡೆದರೆ ಸಮಾಜದ ಏಳಿಗೆ ಆಗಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ವರೂ ಸಮಾಜದ ಸಂಘಟನೆಗೆ ಆದ್ಯತೆ ನೀಡಬೇಕು ಎಂದರು. ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ಅಧ್ಯಕ್ಷ ಕುಬೇರ್ಪ ಕೊಂಡಜ್ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರುಬೀರಲಿಂಗೇಶ್ವರ ದೇವಸ್ಥಾನದ ಅರ್ಚಕ ಭರಮಪ್ಪ ಪೂಜಾರ ನೇತೃತ್ವ ವಹಿಸಿದ್ದರು.
ಶಾಸಕ ಪ್ರಕಾಶ್ ಕೋಳಿವಾಡ ಸಮಾರಂಭ ಉದ್ಘಾಟಿಸಿದರು. ವಿಧಾನಸಭಾ ಉಪ ಸಭಾಪತಿ ರುದ್ರ್ಪ ಲಮಾಣಿ ನಾಮಫಲಕ ಉದ್ಘಾಟಿಸಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ರಾಯಣ್ಣನ ಪುತ್ಥಳಿಯನ್ನು ಅನಾವರಣಗೊಳಿಸಿದರು. ರಾಜ್ಯ ಕಾಂಗ್ರೆಸ್ ಒತ್ತಾರ ನಿಖಿತ್ ರಾಜ್ ಮೌರ್ಯ ಉಪನ್ಯಾಸ ನೀಡಿದರು.
ಮಕ್ಕಳ ಪ್ರಜ್ಞ ಡಾ. ಪ್ರವೀಣ ಖನ್ನೂರ, ಚೋಳಪ್ಪ ಕಸವಾಳ, ಮಂಜುನಾಥ ಗೌಡ ಶಿವಣ್ಣನವರ್, ನಿಂಗಪ್ಪ ಗುತ್ತಪ್ಪ ಗೌಡ್ರು ,ನಗರಸಭಾ ಸದಸ್ಯರುಗಳಾದ ನಿಂಗಪ್ಪ ಕೋಡಿಹಳ್ಳಿ ರಮೇಶ್ ಕರಡೆಣ್ಣನವರ್, ಮುಖಂಡರಾದ ಬಸವರಾಜ ಕಂಬಳಿ, ಷಣ್ಮುಖಪ್ಪ ಕಂಬಳಿ, ಹನುಮಂತಪ್ಪ ದೇವರಗುಡ್ಡ, ಮಾಳಪ್ಪ ಪೂಜಾರ, ಆನಂದ ಹುಲಬನ್ನಿ, ರಾಜು ಮೈಲಾರ, ಮೂರ್ತೆಪ್ಪ ಕಂಬಳಿ, ಹನುಮಂತಪ್ಪ ಮುಳಗುಂದ, ಆಂಜನೇಯ ಹೂಲಿಹಳ್ಳಿ, ರಾಕೇಶ ಮೇಡ್ಲೇರಿ, ಬೀರೇಶ ಪೂಜಾರ, ಚಂದ್ರು ಮೈಲಾರ, ಕುಬೇರ್ಪಕೋಲಕಾರ, ಚಂದ್ರು ಕದರಮಂಡಲಗಿ, ನಿಂಗಪ್ಪ ಕಂಬಳಿ, ಶಿವಣ್ಣ ನಂದಿಹಳ್ಳಿ, ಚಂದ್ರ್ಪ ಬೇಡರ, ರವೀಂದ್ರಗೌಡ ಪಾಟೀಲ, ಶಿವಪುತ್ರ್ಪ ಹಲಗೇರಿ ಸೇರಿದಂತೆ ಇತರರು ಇದ್ದರು.