ಹಣಕಾಸು ಕಂಪನಿ ಲೂಟಿ: ಅಂತಾರಾಜ್ಯ ತಂಡದ ಬಂಧನ

ಪಾಲ್ಘರ್, ಜೂನ್ 6, ಕರ್ನಾಟಕ  ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳ್ಳತನ, ದರೋಡೆ  ಲೂಟಿ ಮಾಡುತ್ತಿದ್ದ ಅಂತಾರರಾಜ್ಯ  ತಂಡದ ನಾಲ್ವರು ಸದಸ್ಯರನ್ನು ಗುರುವಾರ ಬಂಧಿಸಲಾಗಿದೆ.ಈ  ಮೂಲಕ  2019 ರ ಸೆಪ್ಟೆಂಬರ್‌ನಲ್ಲಿ 1.77 ಕೋಟಿ ರೂಪಾಯಿಗಳ  ದರೋಡೆ ಪ್ರಕರಣವನ್ನು ಪೊಲೀಸರು   ಯಶಸ್ವಿಯಾಗಿ ಬಗೆಹರಿಸಿದ್ದಾರೆ. ಈ ಕುರಿತು  ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದತ್ತಾತ್ರೇಯ ಶಿಂಧೆ, 2019 ರಲ್ಲಿ    ಶಸ್ತ್ರಸಜ್ಜಿತ ದರೋಡೆಕೋರರು ನಲ್ಲಾ ಸೊಪಾರಾದ ಸೆಂಟ್ರಲ್ ಪಾರ್ಕ್‌ನಲ್ಲಿರುವ ಚಿನ್ನದ ಹಣಕಾಸು ಕಚೇರಿಗೆ ನುಗ್ಗಿ ಲೂಟಿ ಮಾಡಿದ್ದರು.

ಪೊಲೀಸ್ ತನಿಖಾ ತಂಡವು ನಾಲ್ವರ ಬಗ್ಗೆ ಸುಳಿವು ನೀಡಿ ಗುರುವಾರ ಅವರನ್ನು ಮುಂಬೈನಲ್ಲಿ  ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಬಂಧಿತ ಆರೋಪಿಗಳು ಮತ್ತು ಇತರ ಗ್ಯಾಂಗ್ ಸದಸ್ಯರ ವಿರುದ್ಧ ಕೊಲೆ, ದೌರ್ಜನ್ಯ, ಕಳ್ಳತನ ಮತ್ತು ವಾಹನ ಕಳ್ಳತನಕ್ಕೆ ಸಂಬಂಧಿಸಿದ ಹಲವು  ಅಪರಾಧಗಳು  ಮುಂಬೈ, ಥಾಣೆ, ಪಾಲ್ಘರ್, ಗುಜರಾತ್ ಮತ್ತು ಕರ್ನಾಟಕದ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ  ಬಂಧಿತರನ್ನು  ಶುಕ್ರವಾರ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು  ಅವರನ್ನು ಇದೆ  14 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.