ಲೋಕದರ್ಶನ ವರದಿ
ಶಿರಹಟ್ಟಿ 18: ಪಟ್ಟಣದ ಶಿಕ್ಷಕರ ಭವನದಲ್ಲಿ ಸಹಮತ ವೇದಿಕೆ ಶ್ರೀ ಮಠ ಸಾಣೇಹಳ್ಳಿ " ಮತ್ತೆ ಕಲ್ಯಾಣ" ಜಿಲ್ಲಾ ಸಮಿತಿಯಿಂದ ನಡೆದ ಸರಳ ಕಾರ್ಯಕ್ರಮದಲ್ಲಿ ಶಿರಹಟ್ಟಿ ತಾಲೂಕ ವೇದಿಕೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕ ಆಧ್ಯಕ್ಷರಾಗಿ ಕೆ.ಎ.ಬಳಿಗಾರ ಹಾಗೂ ಕಾರ್ಯದಶರ್ಿಯಾಗಿ ಎಮ್.ಎ,ಮಕಾಂದಾರ ಅವರನ್ನು ಸವರ್ಾನುಮತದಿಂದ ಆಯ್ಕೆ ಮಾಡಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ ಜಡಗೊಂಡಿದ್ದ ಮನಸ್ಸುಗಳನ್ನು ಬಡಿದೆಬ್ಬಿಸಿ ಬದುಕಿನ ಸಾರ್ಥಕತೆಯ ಮಾರ್ಗ ತೋರಿಸಿದ್ದು 12ನೇ ಶತಮಾನದ ಶರಣ ಚಳುವಳಿ. ಆ ಅರಿವಿನ ಮಾರ್ಗವನ್ನು ಮತ್ತೆ ಕಂಡುಕೊಳ್ಳುವ ಪ್ರಯತ್ನವೇ "ಮತ್ತೆ ಕಲ್ಯಾಣ" ಎಂಬ ಆಂದೋಲನ. ಮನುಷ್ಯ ಕುಲ ಒಂದೆ ಎಂದು ಅರಿಯದ ಮಾನವ ಜಾತಿ, ಕಸಬು, ರಾಜಕೀಯ, ಭಾಷೆ ಹೀಗೆ ತಮ್ಮವರಿಂದ ದೂರ ಸರಿಯುತ್ತ ಒಡೆದು ಹೋಗುತ್ತಿದ್ದಾನೆ. ಕಾರಣ ಈ ಎಲ್ಲರನ್ನು ಜೋತೆಗುಡಿಸಿ ಸಾಗ ಬೇಕಾದ ಅನಿವಾರ್ಯತೆ ಇದೆ. ಇದರ ಪ್ರಾರಂಭದ ಹೆಜ್ಜೆಯೆ ಮತ್ತೆ ಕಲ್ಯಾಣ ಎಂದು ಹೇಳಿದರು.
ನಂತರ ಮಾತನಾಡಿದ ಕಾರ್ಯದಶರ್ಿ ಶೇಖಣ್ಣಾ ಕವಳಿಕಾಯಿ ಶರಣ ಕಲ್ಯಾಣ ರಾಜ್ಯದ ಕಲ್ಪನೆಯನ್ನು ಪುನರ್ ಸ್ಥಾಪಿಸುವ ಹಿನ್ನಲೆಯಲ್ಲಿ ಅಗಷ್ಟ 1 ರಿಂದ 30ರ ವರೆಗೆ ರಾಜ್ಯಾದ್ಯಂತ ಆಂದೋಲನ ನಡೆಯಲಿದೆ. ಮತ್ತೆ ಕಲ್ಯಾಣ ಕಾರ್ಯಕ್ರಮವು ಅಗಷ್ಟ 20ರಂದು ಗದುಗಿನ ಜಗದ್ಗುರು ತೊಂಟದಾರ್ಯ ಮಠದಲ್ಲಿ ನಡೆಯಲಿದೆ. ಇದಕ್ಕೆ ಪೂರಕವಗಿ ತಾಲೂಕ ವೇದಿಕೆ ಅಗಷ್ಟ 1ರಿಂದ 15 ನೇ ದಿನಾಂಕ ವರೆಗೆ ತಾಲೂಕಿನ ವಿವಿಧೆಡೆ ವಚನಗಳ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿ ಜನರನ್ನು ಜಾಗೃತಗೊಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ನಿವೃತ್ ಪ್ರೋ ಬಿ.ಸಿ.ಮೇಟಿ ಹಾಗೂ ಎಫ್.ಎಸ್.ಅಕ್ಕಿ ಮಾತನಾಡಿ ಅಧ್ಯಕ್ಷ ಹಾಗೂ ಕಾರ್ಯದಶರ್ಿ ಎರಡು ಸ್ಥಾನಗಳ ಆಯ್ಕೆ ಇಂದು ನಡೆದಿದ್ದು ಉಳಿದ ಪದಾಧಿಕಾರಿಗಳ ಆಯ್ಕೆ ತಾಲೂಕಿನ ವಿವಿಧ ಸ್ಥಳಗಳಿಂದ ಜನರನ್ನು ಆಯ್ಕೆ ಮಾಡಿ ಮಾಡಬೇಕು ಎಂದು ಸಲಹೆ ನೀಡಿದರು.
ಕಸಾಪ ತಾಲೂಕ ಅಧ್ಯಕ್ಷ ಎಮ್.ಕೆ.ಲಮಾಣಿ, ಪರಬತ, ಜಿ,ಆರ್.ಸಜರ್ಾಪೂರ, ಎಚ್.ಎಮ್.ದೇವಗಿರಿ, ಬಸಣ್ಣ ಬೋರಶೇಟ್ಟರ, ಉ.ಆರ್.ಅರ್ಕಸಾಲಿ, ವಿ.ಜಿ.ಮಠಪತಿ, ವಿವೆಕಾನಂದ ಪಾಟೀಲ, ವಿನಾಯಕ ಹಣಗಿ, ಸುಧಾ ಹುಚ್ಚಣ್ಣವರ, ಸುರೇಶ ಗುರುವಿನ, ಸಂತೋಷ ಕುಬೇರ, ಮಂಜುನಾಥ ಲಕ್ಕುಂಡಿಮಠ ಮುಂತಾದವರು ಇದ್ದರು.