ಲೋಕದರ್ಶನ ವರದಿ
ಬೆಳಗಾವಿ, 16: ನಗರದ ಜನರಿಗೆ ಬಹಳ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಬಾಧಿಸುತ್ತಿದ್ದು, ಸಧ್ಯ ವಾರದಲ್ಲಿ ಒಂದುಸಾರಿ ಜನರಿಗೆ ಕುಡಿಯುವ ನೀರು ಲಭ್ಯವಾಗುತ್ತಿದೆ. 24 ತಾಸುಗಳ ಕಾಲ ಕುಡಿಯುವ ನೀರಿನ ಯೋಜನೆ ಆಗಬೇಕೆನ್ನುವ ಜನರ ಆಪೇಕ್ಷೆ ಇದ್ದು, ಆದರೇ ಅನೇಕ ವರ್ಷಗಳಿಂದ ಕಾಮಗಾರಿ ಬಾಕಿ ಉಳಿದಿದ್ದು, ಈಗ ಶಾಸಕ ಅಭಯ ಪಾಟೀಲರ ನಿರಂತರ ಪ್ರಯ್ನದಿಂದ ಸುಮಾರು 696 ಕೋಟಿ ರೂಪಾಯಿಗಳ ಕುಡಿಯುವ ನೀರನ ಯೋಜನೆಗೆ ಇಂದು ಸರಕಾರ ಮುಖ್ಯ ಕಾರ್ಯದಶರ್ಿಗಳು ಹಾಗೂ ಎಮ್. ಪವರ ಕಮೀಟಿಯ ಅಧ್ಯಕ್ಷರಾದ ಶ್ರೀ ಡಿ. ವ್ಹಿ. ಪ್ರಸಾದ ರವರ ಅಧ್ಯಕ್ಷತೆಯಲ್ಲಿ ಕೆ.ಯು.ಐ.ಡಿ.ಎಫ್.ಸಿ, ಯು.ಡಿ. ಹಾಗೂ ವಿಶ್ವ ಬ್ಯಾಂಕಿನ ವಿವಧ ಅಧಿಕಾರಿಗಳ ಸಭೆ ನಡೆಸಿ ಈ ಯೋಜನೆಗೆ ಒಪ್ಪಿಗೆಯನ್ನು ನೀಡಲಾಯಿತು. ಹಾಗೂ ವಿಶ್ವ ಬ್ಯಾಂಕಿಗೆ ಈ ಯೋಜನೆಯನ್ನು ಕಳುಹಿಸಿ ಕೋಡಲಾಯಿತು. ಬರುವ ಕೇಲವೆ ತಿಂಗಳಲ್ಲಿ ಗುತ್ತಿಗೆ ಪ್ರಕ್ರೀಯೆ ಪ್ರಾರಂಭವಾಗಿ, ಮಾರ್ಚ ತಿಂಗಳ ಒಳಗಾಗಿ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು.
ಸುಮಾರು 696 ಕೋಟಿ ರೂಪಾಯಿಗಳ ಬೃಹತ ಯೋಜನೆ ಜಾರಿಗೊಂಡ ನಂತರ ಬೆಳಗಾವಿ ನಗರದ ಸುಮಾರು 6 ಲಕ್ಷ ಜನರಿಗೆ (24 ತಾಸ) 24ಘಿ7 ಕುಡಿಯುವ ನೀರಿನ ಯೋಜನೆ ಉಪಯೋಗವಾಗುವುದೆಂದು ಶಾಸಕ ಅಭಯ ಪಾಟೀಲ ತಿಳಿಸಿದರು.
ಬೆಳಗಾವಿ ನಗರದ ಬಹು ವರ್ಷಗಳ ಬೇಡಿಕೆಯನ್ನು ಇಡೇರಿಸಲು ಹಾಗೂ ಈ ಯೋಜನೆ ಸಹಕಾರ ಗೋಳಿಸಲು ಶಾಸಕ ಅಭಯ ಪಾಟೀಲ ಇವರು ಸತತ 5 ತಿಂಗಳುಗಳ ಕಾಲ ಪ್ರಯತ್ನಿಸಿ, ಸನ್ಮಾನ್ಯ ಮುಖ್ಯಮಂತ್ರಿಗಳು, ಸನ್ಮಾನ್ಯ ಯು. ಡಿ. ಸಚಿವರು, ಸರಕಾರದ ಮುಖ್ಯ ಕಾರ್ಯದಶರ್ಿಗಳು, ಯು.ಡಿ. ಕಾರ್ಯದಶರ್ಿಗಳು, ಕೆ.ಯು.ಐ.ಡಿ.ಎಫ್.ಸಿ. ವ್ಯವಸ್ತಾಪಕ ನಿದರ್ೆಶಕರು, ಸರಕಾರದ ಅಧಿನ ಕಾರ್ಯದಶರ್ಿಗಳು ಹಾಗೂ ವಿಶ್ವ ಬ್ಯಾಂಕಿನ ಅಧಿಕಾರಿಗಳನ್ನು 13 ಬಾರಿ ಖುದ್ದಾಗಿ ಬೇಟಿಮಾಡಿ ಈ ಯೋಜನೆಯನ್ನು ಜಾರಿಗೆ ತರಲು ನಿರಂತರ ಶ್ರಮಿಸಿದ್ದರಿಂದ 24ಘಿ7 ಕುಡಿಯುವ ನೀರಿನ ಯೋಜನೆ ಜಾರಿಗೆ ಬರುತ್ತಿದೆ. ಇದು ಎಲ್ಲ ಬೆಳಗಾವಿ ಜನರಿಗೆ ಪೂರ್ಣ ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಶಾಸಕ ಅಭಯ ಪಾಟೀಲ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿ ನಗರದಲ್ಲಿ 24ಘಿ7 ಕುಡಿಯುವ ನೀರಿನ ಯೋಜನೆ ಜಾರಿಗೆ ತರುವ ವಿಷಯವಾಗಿ ಶಾಸಕ ಅಭಯ ಪಾಟೀಲ ಹಾಗೂ ಸರಕಾರ ಮುಖ್ಯ ಕಾರ್ಯದಶರ್ಿಗಳು ಹಾಗೂ ಎಮ್. ಪವರ ಕಮೀಟಿಯ ಅಧ್ಯಕ್ಷರಾದ ಡಿ. ವ್ಹಿ. ಪ್ರಸಾದ ರವರ ಜೋತೆ ಚೆಚರ್ೆಯಲ್ಲಿ ಭಾಗಿಯಾಗಿದ್ದರು.