ಕನರ್ಾಟಕ ರಾಜ್ಯದಲ್ಲಿ ಎಕ್ಸಿಸ್ ಬ್ಯಾಂಕ್ ಹಠಾವೋ ಎಂಬ ಚಳುವಳಿ : ಕೋಟಿಹಳ್ಳಿ ಎಚ್ಚರಿಕೆ

ಲೋಕದರ್ಶನ ವರದಿ

ಬೈಲಹೊಂಗಲ,5: ರಾಜ್ಯದಲ್ಲಿ ಎಕ್ಸಿಸ್ ಬ್ಯಾಂಕ್ ನಡೆಸುತ್ತಿರುವ ವಾಣಿಜ್ಯ ವ್ಯವಾಹರಗಳನ್ನು ಭಾರತ ಸಕರ್ಾರದ ಆರ್ಬಿಐ ನಿಯಮಗಳ ಕಾನೂನು ಪ್ರಕಾರ ಮಾಡಬೇಕು. ಇಲ್ಲದಿದ್ದರೆ ಕನರ್ಾಟಕ ರಾಜ್ಯದಲ್ಲಿ ಎಕ್ಸಿಸ್ ಬ್ಯಾಂಕ್ ಹಠಾವೋ ಎಂಬ ಚಳುವಳಿಯನ್ನು ನಡೆಸಬೇಕಾಗುತ್ತದೆ ಎಂದು ಕನರ್ಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಎಚ್ಚರಿಸಿದರು.

ಪಟ್ಟಣದ ನಿರೀಕ್ಷಣಾ ಮಂದಿರಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ಬಿಐ ನಿಯಮದ ಪ್ರಕಾರರೈತರ ಕೃಷಿ ವಲಯಕ್ಕೆ, ಕೃಷಿ ಉತ್ತೇಜನಕ್ಕೆಅವರ ವಹಿವಾಟಿನಲ್ಲಿ ಎಷ್ಟು ಸಾಲ ನೀಡಬೇಕು ಅಷ್ಟು ಎಕ್ಸಿಸ್ ಬ್ಯಾಂಕ್ ಸಾಲ ನೀಡಿದೆ. ಅದೇ ಪ್ರಕಾರ ಎಕ್ಸಿಸ್ ಬ್ಯಾಂಕಿನವರು ರೈತರೊಂದಿಗೆ ನಡೆದುಕೊಳ್ಳಬೇಕು.ಅದನ್ನು ಬಿಟ್ಟು ಸಾಲ ಮರು ಪಾವತಿಸದರೈತರಿಗೆ ನೋಟಿಸ್ ನೀಡಿ ಬಂಧನದ ವಾರೆಂಟ್ ನೀಡಿರುವದನ್ನುಕನರ್ಾಟಕರಾಜ್ಯರೈತ ಸಂಘ, ಹಸಿರು ಸೇನೆ ಖಂಡಿಸುತ್ತದೆಎಂದರು.

ಸಂಕಷ್ಟದಲ್ಲಿರುವರೈತರು ಸಾಲವನ್ನು ಮರು ಪಾವತಿ ಮಾಡುವದರಲ್ಲಿ ಬಹಳ ಹಿಂದೆ ಬಿದಿದ್ದಾರೆ.ಕಾರಣ ಸಕರ್ಾರಗಳಿಗೆ ನಾವು ಪ್ರತಿ ಸಾರಿ ಮನವಿ ಮಾಡಿದ್ದೇವೆ. ರೈತರು ಸಾಲ ಕಟ್ಟಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಕರ್ಾರ ಸಾಲ ಮನ್ನಾಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಪೂರಕವಾಗಿರೈತರಿಗೆ ಭರವಸೆ ನೀಡುವ ಕೆಲಸ ಮಾಡಿವೆ. ಅಂತಹ ಅನೇಕ ರಾಜಕೀಯ ಪಕ್ಷಗಳು ದೇಶದ ನಾನಾ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದಾರೆ. ಒಂದುಷ್ಟು ಸಾಲವನ್ನು ಮನ್ನಾ ಮಾಡಿಸಿದ್ದಾರೆ.ಈಗ ಸಂಪೂರ್ಣ ಸಾಲ ಮನ್ನಾಕ್ಕೆ ಸಂಬಂಧಪಟ್ಟಂತೆ ಭಾರತ ಸಕರ್ಾರರಾಜ್ಯ ಸಕರ್ಾರಗಳ ನಡುವೆತೀಮರ್ಾಣಆಗಬೇಕಿರುವ ಸಂದರ್ಭದಲ್ಲಿಎಕ್ಸಿಸ್ ಬ್ಯಾಂಕಿನವರುಉದ್ದಟತನತೋರಬಾರದು.ಇದಕ್ಕೆ ಮುಂಚೆ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕುದೊಡ್ಡಮೆಟಿಕುಕರ್ಿಗ್ರಾಮದ 11 ಜನರೈತರಿಗೆ ನೋಟಿಸ್ಜಾರಿ ಮಾಡಲಾಗಿದೆ.ಆ ರೈತರಿಗೆ ಬಂಧನದ ವಾರೆಂಟ್ಜಾರಿ ಮಾಡಿಅದನ್ನುತಗೊಂಡು ಪೊಲೀಸರ ಮೂಲಕ ಸ್ಥಳೀಯ ಎಕ್ಸಿಸ್ ಬ್ಯಾಂಕಿನವರು ಠಾಣೆಗೆಕರೆದುಕೊಂಡು ಹೋಗಿ ರಾತ್ರಿ ನಾವು ಪ್ರಯಾಣ ಮಾಡಬೇಕು.ಕಲ್ಕತ್ತಾಕ್ಕೆ ಹೋಗಬೇಕು.ಮೂರನಾಲ್ಕು ದಿನ ಆಗುತ್ತದೆ.ಅಲ್ಲಿ ನ್ಯಾಯಾಲಯಕ್ಕೆ ಹಾಜರು ಮಾಡುತ್ತೇವೆ. ಯಾರಾದರೂ ವಕೀಲರುಇದ್ದರೆ ನೋಡಿಕೋ.ಇಲ್ಲದಿದ್ದರೆಕಲ್ಕತ್ತಾಜೈಲಿಗೆ ಕಳುಹಿಸುತ್ತೇವೆ. ಇದೆಲ್ಲಾ ನಿನಗೆ ಜವಾಬ್ದಾರಿಇದ್ದರೆ ಮಾಡಿಕೋ.ನಿಮ್ಮಕುಟುಂಬಸ್ಥರನ್ನು ಕರೆಯಿಸಿ ಅಂತ ಹೇಳಿ ಆ ರೈತರಲ್ಲಿಆತಂಕ ಸೃಷ್ಠಿ ಮಾಡುತ್ತಾರೆ.ವ್ಯಾಕರಣ ಬದ್ಧವಾಗಿಕನ್ನಡ ಮಾತನಾಡದರೈತ ಬಂಗಾಳಿ ಭಾಷೆ ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ.ಅಲ್ಲಿ ವ್ಯವಹಾರ ಮಾಡಲಿಕ್ಕೆ ಸಾಧ್ಯವಾಗುತ್ತಾಎಂದುಕಾರವಾಗಿ ಪ್ರಶ್ನಿಸಿದರು.

ರೈತರಲ್ಲಿಆತಂಕ ಸೃಷ್ಠಿ ಮಾಡಿಅವರ ಆಸ್ತಿಪಾಸ್ತಿ ಪಕ್ಕದವರಿಗೆ ಮಾರಾಟ ಮಾಡಿಸಿ ಬ್ಯಾಂಕಿನವರು ಆ ಹಣವನ್ನುಜಮಾ ತಗೆದುಕೊಳ್ಳುವ ಕೆಲಸವನ್ನುಅಲ್ಲಿ ಮಾಡಿದ್ದಾರೆ. ಈ ಕೆಲಸ ನಾವು ಯಶಸ್ವಿಯಾಗಿ ಮಾಡುತ್ತಿದ್ದೇವೆಅಂತ ಹೇಳಿ ಈಗ ಬೆಳಗಾವಿ ಸುತ್ತಮುತ್ತ ಹಳ್ಳಿಗಳಲ್ಲಿ 180 ರೈತರಿಗೆ ನೋಟಿಸ್ಜಾರಿ ಮಾಡಿ 5 ಜನರೈತರಿಗೆ ಬಂಧನದ ವಾರೆಂಟ್ಜಾರಿ ಮಾಡಿರುವದುಅನ್ಯಾಯದಕ್ರಮವಾಗಿದೆ.

ಬ್ಯಾಂಕಿನವರು ಕೂಡಲೇ ಎಚ್ಚೆತ್ತುಕೊಂಡು ರೈತರಿಗೆ ನೀಡಿರುವ ನೋಟಿಸ್, ವಾರೆಂಟ್ ಹಿಂದೆ ಪಡೆಯದಿದ್ದರೆಉಗ್ರ ಸ್ವರೂಪದಲ್ಲಿ ಚಳುವಳಿ ಮಾಡಬೇಕಾಗುತ್ತದೆ.ರೈತರಿಗೆ ಅನ್ಯಾಯಆಗದಂತೆಜಾಗೃತಿವಹಿಸಬೇಕು ಎಂದು ಒತ್ತಾಯಿಸಿದರು. 

ರೈತ ಶಿವಾನಂದ ಸಿದ್ದಪ್ಪ ಕಂಠಿ ಸಾಮಾನ್ಯರೈತ. ಇವನಿಗೆ ಟ್ರ್ಯಾಕ್ಟರ್ ಸಾಲ ನೀಡಲಾಗಿದೆ.ಆತ ಟ್ರ್ಯಾಕ್ಟರ್ ಊರಿಗೆತಂದ ಮೇಲೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಟ್ರ್ಯಾಕ್ಟರ್ ಇಂಜಿನ್ ಸಮಸ್ಯೆ ಇದ್ದ ಕಾರಣ ಬ್ಯಾಂಕಿಗೆ ವಿಷಯ ತಿಳಿಸಿದ. ಬ್ಯಾಂಕಿನವರು ಟ್ರ್ಯಾಕ್ಟರ್ ಕಂಪನಿಯರಿಗೆ ವಿಷಯ ತಿಳಿಸಿದರೂ. ಆಗ ಬಂದು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದಾರೆ. ಮತ್ತೆ ಟ್ರ್ಯಾಕ್ಟರ್ ಮರಳಿ ನೀಡಿಲ್ಲ. ರೈತ ಸಾಲ ಹೇಗೆ ತುಂಬಬೇಕು ಎಂದು ಪ್ರಶ್ನಿಸಿದರು. ಸಕರ್ಾರ, ಬ್ಯಾಂಕುರೈತರ ನೆರವಿಗೆ ಬರಬೇಕು. ಸಾಯುವ ರೈತರನ್ನು ರಕ್ಷಿಸಬೇಕು.ಈ ದಿಶೆಯಲ್ಲಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಬ್ಯಾಂಕುಕನರ್ಾಟಕದಿಂದ ಗಂಟುಮುಟೇ ಕಟ್ಟಿಕೊಂಡು ಹೋಗಬೇಕು.ರೈತರು ಮಾಡುವ ಚಳುವಳಿಯನ್ನು ಎದುರಿಸಬೇಕಾಗುತ್ತದೆಎಂದು ಎಚ್ಚರಿಸಿದರು.

ಬ್ಯಾಂಕಿಗೆ ಮುತ್ತಿಗೆ: ಸುದ್ದಿಗೋಷ್ಠಿ ನಂತರ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರುಎಕ್ಸಿಸ್ ಬ್ಯಾಂಕಿಗೆ ಮುತ್ತಿಗೆ ಹಾಕಿದರು. ಬ್ಯಾಂಕ್ ಮ್ಯಾನೇಜರ ಹೊರಗೆಕರೆದುಕೊಂಡು ಬಂದುಆಕ್ರೋಶ ವ್ಯಕ್ತಪಡಿಸಿದರು.ರೈತರ ಸಮಸ್ಯೆ ಆಲಿಸಿದ ಮ್ಯಾನೇಜರ ಮಾತನಾಡಿ, ದಸರಾ ಹಬ್ಬದ ಅಂಗವಾಗಿ ಕಲ್ಕತಾ ನ್ಯಾಯಾಲಯಕ್ಕೆ ರಜೆಇದೆ. ಈಗಾಗಲೇ ಎಕ್ಸಿಸ್ ಬ್ಯಾಂಕ್ ಮುಖ್ಯಕಚೇರಿಯಿಂದ ರೈತರಿಗೆ ನೀಡಿರುವ ನೋಟಿಸ್, ಅರೆಸ್ಟ್ ವಾರೆಂಟ್ ಹಿಂದೆ ಪಡೆಯುವಂತೆ ನಿದರ್ೇಶನ ಬಂದಿದೆ.ಆತಂಕಕ್ಕೆ ಒಳಗಾಬಾರದು ಎಂದು ಭರವಸೆ ನೀಡಿದರು.ಆಗ ರೈತರು ಪ್ರತಿಭಟನೆ ಕೈ ಬಿಟ್ಟರು.ಇನ್ನೂಳಿದ ಸಣ್ಣಪುಟ್ಟ ಸಮಸ್ಯೆ ಇವೆ. ಈ ಕುರಿಚುಚಚರ್ಿಸಲು ಪಟ್ಟು ಹಿಡಿದಾಗ ಮದ್ಯ ಪ್ರವೇಶಿಸಿದ ಕೋಡಿಹಳ್ಳಿ ದಿನಾಂಕ ನಿಗದಿ ಮಾಡಿ ಸಮಸ್ಯೆಇತ್ಯರ್ಥ ಪಡಿಸಲು ತಿಳಿಸಿದರು.ನ.13ರಂದು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಸಭೆಕರೆಯುವತಿಮರ್ಾಣಕೈ ಕೊಂಡರು. ಡಿವೈಎಸ್ಪಿ ಜೆ.ಎಂ.ಕರುಣಾಕರಶೆಟ್ಟಿ ನೇತೃತ್ವದಲ್ಲಿ ಬ್ಯಾಂಕಿಗೆ ಬಿಗಿ ಪೊಲೀಸ್ ಬಂದುಬಸ್ತ್ ಕೈಕೊಳ್ಳಲಾಗಿತ್ತು. ನೂರಾರು ರೈತರು ಇದ್ದರು.