ಬೆಳಗಾವಿ : ಅಕ್ಷರ, ಕಾಯಕ ಮತ್ತು ದಾಸೋಹದ ಮೂಲಕ ಸುಂದರ ಬದುಕು ಕಟ್ಟಿ ಕೊಟ್ಟಿರುವ ಬಸವಣ್ಣನವರು ವಿಶ್ವದ ಏಕೈಕ ವಿಶ್ವಗುರು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಹೇಳಿದ್ದಾರೆ.
ಗುರು ಪೂಣರ್ಿಮೆಯ ಅಂಗವಾಗಿ ಶುಕ್ರವಾರದಂದು ನಗರದ ಶೆಟ್ಟಿಗಲ್ಲಿಯಲ್ಲಿರುವ ಹಸಿರು ಕ್ರಾಂತಿ ಪತ್ರಿಕೆಯ ಸಭಾ ಭವನದಲ್ಲಿ ಬಸವ ಭೀಮ ಸೇನೆಯ ವತಿಯಿಂದ ಆಯೋಜಿಸಲಾಗಿದ್ದ ವಿಶ್ವಗುರುವಿಗೆ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರ ಮತ್ತು ಆಥರ್ಿಕ ಸಬಲೀಕರಣದಿಂದ ಮಾತ್ರ ಶೋಷಿತ ಸಮುದಾಯಗಳ ಸಬಲೀಕರ ಸಾಧ್ಯ ಎಂಬುದನ್ನು ಅರಿತಿದ್ದ ಬಸವಣ್ಣನವರು, ಆಚರಣೆಗಳಿಗಿಂತ ಅಕ್ಷರಕ್ಕೆ ಮತ್ತು ಪೂಜೆಯ ಬದಲು ಕಾಯಕಕ್ಕೆ ಮತ್ತು ದಾನದ ಬದಲು ದಾಸೋಹಕ್ಕೆ ಆದ್ಯತೆ ನೀಡುವ ಮೂಲಕ ಬದುಕನ್ನು ಹಸನಾಗಿಸಿದ್ದಾರೆ. 12 ನೇ ಶತಮಾನಕ್ಕಿಂತ ಮುಂಚೆ ಮಹಿಳೆಯರು ಮತ್ತು ಶೋಷಿತ ಸಮುದಾಯಗಳ ಜನರು ಅಕ್ಷರ ಕಲಿತ ಇತಿಹಾಸವೇ ಇಲ್ಲ. ಮಹಿಳೆಯರು ಮತ್ತು ಶೋಷಿತ ಸಮುದಾಯಗಳ ಜನರಿಗೆ ಅಕ್ಷರ ಕಲಿಸಿದ ವಿಶ್ವದ ಪ್ರಥಮ ಗುರು ಬಸವಣ್ಣನವರು ಎಂದರು.
ಬಸವಣ್ಣನವರ ಅಕ್ಷರ ದಾಸೋಹದಿಂದಾಗಿ ವಿಶ್ವ ವಿನೂತನ ವಿಶ್ವಮಾನ್ಯ ವಚನ ಸಾಹಿತ್ಯ ಮೂಡಿ ಬಂದಿದೆ. ಶೋಷಿತ ಸಮುದಾಯಗಳ ಮತ್ತು ಮಹಿಳೆಯರಿಂದ ರೂಪಿತವಾದ ವಚನ ಸಾಹಿತ್ಯ ಇಂದು ಅನೇಕ ಭಾಷೆಗಳಿಲ್ಲ ಬಾಷಾಂತರಗೊಂಡು ವಿಶ್ವದ ಮೆಚ್ಚುಗೆ ಪಡೆಯುತ್ತಿದೆ. ಅಂತಹ ಸಾಹಿತ್ಯವನ್ನು ಕಟ್ಟಿಕೊಟ್ಟಿರುವ ಬಸವಣ್ಣನವರಿಗೆ ಇಂದು ನಾವೆಲ್ಲ ಋಣಿಯಾಗಿರಬೇಕು. ಪ್ರತಿನಿತ್ಯ ನಮನ ಸಲ್ಲಿಸಬೇಕು ಎಂದರು.
ಶಿಕ್ಷಕ ಬಸವರಾಜ ಸುಣಗಾರ ಮಾತನಾಡಿ, ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಬಸವಾದಿ ಶರಣರಿಂದ ಮೂಡಿ ಬಂದಿರುವ ವಚನ ಸಾಹಿತ್ಯ ಅದ್ಭುತವಾದ ಸಾಹಿತ್ಯ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗುವಲ್ಲಿ ವಚನ ಸಾಹಿತ್ಯದ ಪಾತ್ರ ಪ್ರಮುಖವಾಗಿದೆ. ವಚನ ಸಾಹಿತ್ಯವು ಮಾತೃ ಭಾಷೆಯಲ್ಲಿ ರಚಿತವಾದ ದೇಶದ ಮೊದಲ ಸಾಹಿತ್ಯವಾಗಿದೆ. ಶುದ್ದ ಮಾತೃ ಭಾಷೆಯನ್ನು ನೀಡಿರುವ ಬಸವಾದಿ ಶರಣರಿಗೆ ಕನ್ನಡ ಲೋಕ ಋಣಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಕಲ್ಯಾಣರಾವ ಮುಚಳಂಬಿ ಮಾತನಾಡಿ, ಬಸವಣ್ಣನವರ ನೆನಪಾದರೆ ನಮಗೆ ಸಮಾನತೆಯ ನೆನಪಾಗುತ್ತದೆ. ಬಸವಣ್ಣನವರ ನೆನಪಾದರೆ ನಮಗೆ ಮಹಿಳಾ ಸಬಲೀಕರಣದ ನೆನಪಾಗುತ್ತದೆ. ಬಸವಣ್ಣನವರ ನೆನಪಾದರೆ ನಮಗೆ ಕಾಯಕದ ನೆನಪಾಗುತ್ತದೆ. ಬಸವಣ್ಣನವರ ನೆನಪಾದರೆ ನಮಗೆ ದಾಸೋಹದ ನೆನಪಾಗುತ್ತದೆ. ಬಸವಣ್ಣನವರ ಸಮಾನತೆಯ ಹೋರಾಟ ಇಂದು ಜಗತ್ತಿಗೆ ಮಾದರಿಯಾಗಿದೆ ಎಂದರು.
ಪತ್ರಕರ್ತ ಸಂಪತಕುಮಾರ ಮುಚಳಂಬಿ ಸ್ವಾಗತಿಸಿದರು. ಪತ್ರಕರ್ತ ಸಿ.ಬಿ.ದೊಡಗೌಡ ನಿರೂಪಿಸಿದರು. ನೃತ್ಯ ಕಲಾವಿಧ ಅಕ್ಷರ ಶಹಾಪೂರಕರ ವಂದಿಸಿದರು. ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.