ಬ್ಯಾಡಗಿ ರಸ್ತೆಯಲ್ಲಿರುವ ಗುಂಡಿ ಮುಚ್ಚಿಸುವಂತೆ ಆಗ್ರಹ

ಲೋಕದರ್ಶನ ವರದಿ

ಬ್ಯಾಡಗಿ23: ಪಟ್ಟಣದ ಮುಖ್ಯರಸ್ತೆಯಲ್ಲಿ ತಗ್ಗು ಗುಂಡಿ ಬಿದ್ದಿರುವನ್ನು ಕೂಡಲೇ ಮುಚ್ಚಿಸುವಂತೆ ಆಗ್ರಹಿಸಿ ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ ಶನಿವಾರ ಲೋಕೋಪಯೋಗಿ ಇಲಾಖೆಗೆ ಲಿಖಿತ ಮನವಿಯೊಂದನ್ನು ಸಲ್ಲಿಸಿ ಒತ್ತಾಯಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವಾರು ದಶಕಗಳ ಇತಿಹಾಸ ಹೊಂದಿರುವ ಪಟ್ಟಣದ ಮುಖ್ಯರಸ್ತೆ ಸಿಮೆಂಟ್ ಕಾಂಕ್ರೀಟ್ನಿಂದ ನಿಮರ್ಿತವಾಗಿದ್ದು, ಅಂದು ಅರಣ್ಯ ಸಚಿವರಾಗಿದ್ದ ಕೆ.ಎಫ್.ಪಾಟೀಲರು ಸದರಿ ನಿಮರ್ಿಸಿದ್ದರು ಅಲ್ಲಿಂದ ಇಲ್ಲಿಯವರೆಗೂ ಲಕ್ಷಾಂತರ ಭಾರಿ ವಾಹನಗಳು ಸಂಚರಿಸಿದರೂ ಒಂದು ಸಣ್ಣ ತಗ್ಗು ಗುಂಡಿ ಕೂಡ ಬಿದ್ದಿರಲಿಲ್ಲ ಆದರೆ, ಅಗಲೀಕರಣದ ಉದ್ದೇಶದಿಂದ ಕೈಗೊಂಡ ಕಾಮಗಾರಿಯಿಂದಾಗಿ ಕೆಳದೆರಡು ವರ್ಷಗಳಿಂದ ಮುಖ್ಯರಸ್ತೆಯಲ್ಲೆಡೆ ತಗ್ಗು ಗುಂಡಿಗಳು ಬಿದ್ದಿದ್ದು ಇದಕ್ಕೆ ಲೋಕೋಪಯೋಗಿ ಇಲಾಖೆಯೇ ಹೊಣೆ ಎಂದು ಆರೋಪಿಸಿದರು.

ವೈಜ್ಞಾನಿಕವಾಗಿ ನಿಮರ್ಿಸಿದ ಮುಖ್ಯರಸ್ತೆ: ಮುಖ್ಯರಸ್ತೆಯನ್ನು ಬಹಳಷ್ಟು ವೈಜ್ಞಾನಿಕವಾಗಿ ಮತ್ತು ಗುಣಮಟ್ಟದ ಕಾಮಗಾರಿಯಿಂದ ನಿಮರ್ಿಸಲಾಗಿದ್ದು ಯಾವುದೇ ಕಾರಣಕ್ಕೂ ತಗ್ಗು ಗುಂಡಿಗಳು ಬೀಳುವ ಸಾಧ್ಯತೆ ಇರಲಿಲ್ಲ, ಮುಖ್ಯರಸ್ತೆಯಲ್ಲಿ ಅಂಗಡಿ ಮತ್ತು ಮನೆಗಳ ಪ್ರತಿಯೊಬ್ಬ ಮಾಲೀಕರೂ ಸಹ ಬಳಕೆ ಮಾಡಿದ ನೀರನ್ನು ಹಿಂದಕ್ಕೆ ಕಳುಹಿಸುತ್ತಿದ್ದುದರಿಂದ ಸಹಜವಾಗಿ ಮುಖ್ಯರಸ್ತೆಗೆ ಯಾವುದೇ ರೀತಿಯ ಧಕ್ಕೆ ಆಗಿರಲಿಲ್ಲ ಎಂದರು.

   ಅಪೂರ್ಣಗೊಂಡ ಕಾಮಗಾರಿ ಸಮಸ್ಯೆಯ ಮೂಲ: ಎಸ್.ಪಿ.ಕಬ್ಬೂರ ಮಾತನಾಡಿ, ಅಗಲೀಕರಣ ಉದ್ದೇಶದಿಂದ ಕೆಲ ಅಂಗಡಿ ಮನೆಗಳನ್ನು ತೆರವುಗೊಳಿಸಲಾಯಿತಲ್ಲದೇ, ಅವೈಜ್ಞಾನಿಕವಾಗಿ ಚರಂಡಿಗಳನ್ನು ನಿಮರ್ಿಸಲಾಯಿತು, ಇದರಿಂದ ನೀರು ಮುಂದಕ್ಕೆ ಹರಿದು ಹೋಗದೇ ನಿಂತಲ್ಲೇ ನಿಂತಿದ್ದರಿಂದ ಗುಣಮಟ್ಟದ ರಸ್ತೆಯೊಂದರಲ್ಲಿ ತಗ್ಗು ಗುಂಡಿಗಳು ಬೀಳಲು ಕಾರಣವಾಯಿತು ಎಂದು ಆರೋಪಿಸಿದರು. ಕೂಡಲೇ ತಗ್ಗು ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಅಂಗಡಿಗಳ ಒಳಗೆ ಕೆಸರು: ಕಳದೆರಡು ವರ್ಷಗಳಿಂದ ಮುಖ್ಯರಸತೆಯಲ್ಲಿ ಬಿದ್ದಂತಹ ತಗ್ಗು ಗುಂಡಿಗಳಿಂದ, ಇಲ್ಲಿನ ಅಂಗಡಿ ಮನೆಗಳಿಗೆ ಕೆಸರು ಸಿಡಿಯುತ್ತಿದೆ ಹೀಗಾಗಿ ವರ್ತಕರು ಸೇರಿದಂತೆ ವಾಹನ ಸವಾರರು ರೋಸಿ ಹೋಗಿದ್ದಾರೆ, ಅಲ್ಲದೇ ಬಹುದೊಡ್ಡ ಪ್ರಮಾಣದಲ್ಲಿ ಗುಂಡಿಗಳು ಬಿದ್ದಿರುವುದರಿಂದ ದ್ವಿಚಕ್ರ ವಾಹನ ಸವಾರರು ಯಾವುದೇ ಸಂದರ್ಭದಲ್ಲಿಯೂ ಅಪಘಾತ ಸಂಭವಿಸಬಹುದು ಈ ಎಲ್ಲ ಕಾರಣಗಳಿಂದ ಮುಖ್ಯರಸ್ತೆಯಲ್ಲಿನ ತಗ್ಗು ಗುಂಡಿಗಳನ್ನು ಕೂಡಲೇ ಮುಚ್ಚಿಸುವಂತೆ ಆಗ್ರಹಿಸಿದರು.

ಕೋರ್ಟ ಮೆಟ್ಟಿಲೇರಿದ್ದರಿಂದ ತಡವಾಗಿದೆ: ಮನವಿ ಸ್ವೀಕರಿಸಿ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಎಸ್.ಎಂ.ಅಗಡಿ, ಸದರಿ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ವಿವಾದ ಕೋರ್ಟ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಅಥವಾ ದುರಸ್ತಿ ಸೇರಿದಂತೆ ಇನ್ನಿತರ ಕಾರಣಕ್ಕೆ ಸಕರ್ಾರದಿಂದ ಹಣ ಬಿಡುಗಡೆಯಾಗುತ್ತಿಲ್ಲ, ಹೀಗಾಗಿ ಕಾಮಗಾರಿಗೆ ವಿಳಂಬವಾಗಿದೆ, ಕೂಡಲೇ ಪುರಸಭೆ ಮುಖ್ಯಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಮುಖ್ಯರಸ್ತೆಯಲ್ಲಿನ ತಗ್ಗು ಮತ್ತು ಗುಂಡಿಗಳನ್ನು ಮುಚ್ಚಿಸಲು ಕ್ರಮ ತಗೆದುಕೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಇಲಾಖೆ ಅಧಿಕಾರಿ ದೊಡ್ಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.