ಗ್ರಂಥಾಲಯ ಸದ್ಭಳಿಕೆಗೆ ದುಂಡಿಗೌಡ್ರ ಕರೆ

ಲೋಕದರ್ಶನ ವರದಿ

ಶಿಗ್ಗಾವಿ17: ಹಿರಿಯರ ನಾಣ್ಣುಡಿಯಂತೆ ಅಥವಾ ನಾಲ್ಣುಡಿಯಂತೆ ದೇಶ ಸುತ್ತಿ ನೋಡಿ, ಕೋಶ ಓದಿ ನೋಡು ಎಂಬ ಹಿರಿಯರ ಮಾತು ಅರ್ಥಗಭರ್ಿತವಾಗಿದೆ ಅದರಂತೆ  ನಾವು ದೇಶ ಸುತ್ತದಿದ್ದರು ನಮ್ಮಲ್ಲಿರುವ ವ್ಯವಸ್ಥಿತವಾದ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಂಡು ಜಗತ್ತಿನ ಜ್ಞಾನವನ್ನೇ ಪಡೆಯಬಹುದಾಗಿದೆ ಎಂದು ಪ್ರಥಮ ದಜರ್ೆ ಗುತ್ತಿಗೆದಾರ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

       ಪಟ್ಟಣದ ಶಿಗ್ಗಾಂವ ಶಾಖಾ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಹಾವೇರಿ, ತಾಲೂಕು ಶಾಖಾ ಗ್ರಂಥಾಲಯ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪಟ್ಟಣದಲ್ಲಿ ವ್ಯವಸ್ಥಿತವಾದ ಗ್ರಂಥಾಲಯ ಕಟ್ಟಡ ಕಟ್ಟುವ ಭಾಗ್ಯ ನನಗೆ ದೊರೆತಿರುವುದು ನನ್ನ ಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿ, ಗ್ರಂಥಾಲಯ ನಿಮರ್ಾಣಕ್ಕೆ ಸಹಕರಿಸಿದವರು ಹಾಗೂ ಶ್ರಮಿಸಿದಂತಹ ಎಲ್ಲ ಕಾಮರ್ಿಕರಿಗೂ ಶುಭಕೋರಿದರು.

       ಉಪನ್ಯಾಸಕರಾದ ರಾಜು ಕೆಂಭಾವಿ ಮಾತನಾಡಿ, ನಮ್ಮ ಶೈಕ್ಷಣೀಕ ಹಂತದಲ್ಲಿ ಗ್ರಂಥಾಲಯ ನಮಗೆ ತುಂಬಾ ಪ್ರಮುಖವಾಗಿತ್ತು ಅಲ್ಲಿಯ ಕೆಲವು ಗ್ರಂಥಗಳು ನಮ್ಮ ಶಿಕ್ಷಣಕ್ಕೆ ಉತ್ತಮ ಮಾರ್ಗಸೂಚಿಯಾದವು ಹಾಗಾಗಿ ಗ್ರಂಥಾಲಯದ ಹಳೆಯ ಕಟ್ಟಡ ಬದಲವಾವಣೆ ಮಾಡಬೇಕೆಂಬ ಆಸೆಯಿಂದ ನಮ್ಮ ಸ್ನೇಹಿತ ಫಕ್ಕಿರೇಶ ಶಿಗ್ಗಾಂವ ಅವರೊಂದಿಗೆ ಶಾಸಕ ಬಸವರಾಜ ಬೊಮ್ಮಾಯಿವರಿಗೆ ಹಲವಾರು ಬಾರಿ ಒತ್ತಯಿಸಿದ್ದೇವು ಈಗ ಪಟ್ಟಣದಲ್ಲಿ ಉತ್ತಮ ಗ್ರಂಥಾಲಯ ಕಟ್ಟಡವಿದ್ದು ಹಾಗೂ ಎಲ್ಲ ರಂಗದಲ್ಲಿಯೂ ಉಪಯೋಗವಾಗುವ ಸಾಕಷ್ಟು ಪುಸ್ತಕಗಳು ದೊರಕುತ್ತಿದ್ದು ವಿದ್ಯಾಥರ್ಿಗಳು, ಓದುಗರು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

          ಉಪನ್ಯಾಸಕರಾದ ಶಿವಪ್ರಕಾಶ ಬಳಿಗಾರ ಮಾತನಾಡಿ, ಪುಸ್ತಕ ಹೇಳುತ್ತದೆ ನೀನು ನನ್ನನ್ನು ತಲೆ ತಗ್ಗಿಸಿ ನೋಡು, ನಾನು ನಿನ್ನನ್ನು ತಲೆ ಎತ್ತುವಂತೆ ಮಾಡುತ್ತೇನೆ ಎನ್ನುತ್ತದೆ ಗ್ರಂಥಾಲಯದಲ್ಲಿ ಉನ್ನತ ಶಿಕ್ಷಣಕ್ಕೆ ಬೇಕಾದ ಅತೀಮೌಲ್ಯಯುತವಾದ ಪುಸ್ತಕಗಳಿದ್ದು ಅವುಗಳನ್ನು ವಿದ್ಯಾಥರ್ಿಗಳು ಸದುಪಯೋಗ ಪಡಿಸಿಕೊಳ್ಳಬೇಕು, ಮೂಬೈಲಗಳ ಬಳಕೆ ಕಡಿಮೆ ಮಾಡಿ ಪುಸ್ತಕ ಬಳಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

           ಹಾವೇರಿ ಜಿಲ್ಲಾ ಗ್ರಂಥಾಲಯ ಅಧಿಕಾರಿಯಾದ ಜಿ.ಎಸ್.ವೆಂಕಟೇಶ್ವರಿ, ತಾಲೂಕಾ ಗ್ರಂಥಾಲಯ ಅಧಿಕಾರಿ ಪ್ರಭಾಕರ ಸೂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕರಾದ ಎಚ್.ಕೆ ಬಂಡಿವಡ್ಡರ, ಮಾತನಾಡಿದರು. 

         ಗ್ರಂಥಾಲಯ ಸಿಬ್ಬಂದಿಗಳಾದ ಶಿವಪ್ಪ ದಾಸರ, ಮಂಜುನಾಥ ಮಿಜರ್ಿ, ಶಂಭು ಕೇರಿ, ಶಿವಪ್ಪ ಕೊಣ್ಣೂರ, ದ್ಯಾಮಣ್ಣ ಹಂಚಿನಮನಿ, ಹಾಗೂ ಗುತ್ತಿಗೆದಾರ ಮಂಜುನಾಥಪ್ರಸಾದ ದುಬೆ, ನೀಲಪ್ಪ ಬಡಿಗೇರ, ಮತ್ತು ನಿವೃತ್ತ ಶಿಕ್ಷಕರಾದ ಸೊಮನಕಟ್ಟಿ, ವಿದ್ಯಾಥರ್ಿಗಳು, ಓದುಗರು ಸಾರ್ವಜನಿಕರು ಉಪಸ್ಥಿತರಿದ್ದರು.