ಲೋಕದರ್ಶನ ವರದಿ
ಸಾಣೇಹಳ್ಳಿ01 ಇಲ್ಲಿನ ಎಸ್.ಎಸ್.ರಂಗಮಂದಿರದಲ್ಲಿ `ತಿಂಗಳ ನಾಟಕ' ಯೋಜನೆಯಡಿ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ನಾಟ್ಕದೂರು-ಮುದ್ರಾಡಿಯ ನಮ್ಮ ತುಳುವೆರ್ ಕಲಾ ಸಂಘಟನೆ ಅಭಿನಯಿಸಿದ ಕುವೆಂಪು ಅವರ ರಾಮಾಯಣ ದರ್ಶನಂ ಆಧಾರಿತ, ಮಂಜುನಾಥ್ ಎಲ್ ಬಡಿಗೇರ್ ನಿದರ್ೇಶಿಸಿದ `ದಶಾನನ ಸ್ವಪ್ನಸಿದ್ಧಿ' ನಾಟಕವನ್ನು ಪ್ರದಶರ್ಿಸಲಾಯಿತು. ನಾಟಕವನ್ನು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು, ಮಧುರೆಯ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮಿಗಳವರು, ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮಿಗಳು ಮತ್ತು ಕುಂಚಟಿಗ ಮಹಾಸಂಸ್ಥಾನದ ಬಸವಶಾಂತವೀರ ಸ್ವಾಮಿಗಳವರು ಮತ್ತು ಬಾಗಲಕೋಟೆಯ ಅನ್ನದಾನ ಭಾರತಿ ಸ್ವಾಮಿಗಳು ಹಾಗೂ ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್, ಬೆಂಗಳೂರು ಎನ್.ಎಸ್ ಡಿ ಚಾಪ್ಟ್ರ್ನ ನಿದರ್ೇಶಕ, ಹೆಸರಾಂತ ರಂಗನಿದರ್ೇಶಕ ಸಿ. ಬಸವಲಿಂಗಯ್ಯ ಉಪಸ್ಥಿತರಿದ್ದರು.
ಪ್ರದರ್ಶನದ ನಂತರ ಏಪರ್ಾಡಾಗಿದ್ದ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು ನಾಟಕಕ್ಕೆ ಭಾಷೆ ಮುಖ್ಯವಲ್ಲ, ಭಾವ ಮುಖ್ಯ. ಈ ನಾಟಕದ ಭಾಷೆ ಹಳಗನ್ನಡವಾಗಿದ್ದರೂ ಕಲಾವಿದರು ತಮ್ಮ ಅದ್ಭುತ ಭಾವಾಭಿನಯದ ಮೂಲಕ ಕಥಾವಸ್ತುವನ್ನು ಪ್ರೇಕ್ಷಕರವರೆಗೂತಲುಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಇಂಥ ನಾಟಕ ನೋಡಲು ಪ್ರೇಕ್ಷಕರಿಗೆ ತಾಳ್ಮೆ, ಸಹನೆ ಇರಬೇಕು. ಆಧುನಿಕ ಕನ್ನಡವೇ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಹಳಗನ್ನಡವನ್ನು ಹೇಳುವವರು- ಕೇಳುವವರು ತುಂಬ ವಿರಳವಾಗಿದ್ದಾರೆ. ಆಂಗ್ಲ ಭಾಷೆಯ ಮೋಹ ಎಲ್ಲೆಲ್ಲೂ ವಿಜೃಂಭಿಸುತ್ತಿದೆ. ಇಂಥ ಸಂದರ್ಭದಲ್ಲಿ ಕಲಾವಿದರು ಮಾತ್ರ ಕನ್ನಡದ ದೇಸೀತನವನ್ನು, ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿಯುವ, ಉಳಿಸುವ ಪ್ರಯತ್ನ ಮಾಡಬಲ್ಲರು. ಕಲಾವಿದರಿಗೆ ಅಂಥ ವಿಶೇಷ ಶಕ್ತಿ ಇರುತ್ತದೆ. ರಾವಣ ಶಿವನ ಪರಮ ಭಕ್ತ ಮತ್ತು ಮಹಾಶೂರ. ಮನಸ್ಸಿನ ವಿಕಾರದಿಂದಾಗಿ ಸೀತೆಯನ್ನು ಅಪಹರಿಸುವ ಕೆಲಸ ಮಾಡಿದ. ತಾನು ಮಾಡಿದ್ದು ತಪ್ಪು ಎಂದು ತಿಳಿದ ಮೇಲೆ ಪರಿವರ್ತನೆಯಾದ. ಆದರೆ ಲೋಕ ಮಾತ್ರ ಅವನು ಪರಿವರ್ತನೆಯಾದುದನ್ನು ಗಮನಿಸಲೇ ಇಲ್ಲ. ಅವನ ಮನಃ ಪರಿವರ್ತನೆಯನ್ನು ಜನರಿಗೆ ತಿಳಿಸುವ ಉದ್ದೇಶ ಈ ನಾಟಕದ ಲೇಖಕರಿಗೆ, ನಿದರ್ೇಶಕರಿಗೆ ಮತ್ತು ಕಲಾವಿದರಲ್ಲಿ ಇತ್ತು. ಈ ಪ್ರಯತ್ನದಲ್ಲಿ ಇವರೆಲ್ಲರೂ ಯಶಸ್ವಿಯಾಗಿದ್ದಾರೆ.
ರಾಜಕಾರಣಿಗಳಿಗೆ ಸಾಂಸ್ಕೃತಿಕ ಒಲವು ಇದ್ದರೆ ಅವರ ಆಡಳಿತದಲ್ಲೂ ಮಾನವೀಯ ಮೌಲ್ಯಗಳನ್ನು ಕಾಣಲು ಸಾಧ್ಯ. ಇಂಥ ಸಾಂಸ್ಕೃತಿಕ ಒಲವು ಶಾಸಕರಾದ ಗೂಳಿಹಟ್ಟಿ ಶೇಖರ್ ಅವರಿಗೆ ಇದೆ. ಜೊತೆಗೆ ನಮ್ಮ ಹೊಸದುರ್ಗ ತಾಲೂಕಿನ ಎಲ್ಲ ಸ್ವಾಮೀಜಿಗಳಲ್ಲೂ ಸಾಂಸ್ಕೃತಿಕ ಒಲವಿದೆ. ಹೀಗಾಗಿ ಇಂದು ಎಲ್ಲರೂ ಒಟ್ಟಿಗೆ ಕುಳಿತು ನಾಟಕ ನೋಡಲು ಸಾಧ್ಯವಾಗಿದೆ ಎಂದರು.
ಮಧುರೆಯ ಭಗೀರಥ ಪೀಠದ ಪೂಜ್ಯ ಪುರುಷೋತ್ತಮಾನಂದಪುರಿ ಸ್ವಾಮಿಗಳು ಮಾತನಾಡಿ ನಾಟಕದ ಭಾಷೆ ಹಳಗನ್ನಡವಾದರೂ ಅಭಿನಯದ ಮೂಲಕ ಕಥಾವಸ್ತುವನ್ನು ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಕಲಾವಿದರು ಯಶಸ್ವಿಯಾಗಿದ್ದಾರೆ. ರಾವಣ ಕೆಟ್ಟ ಮನುಷ್ಯನಲ್ಲ; ಆತ ಮಹಾಶಿವಭಕ್ತ ಮತ್ತು ಮಹಾಶೂರನೂ ಆಗಿದ್ದ. ರಾವಣನ ಸ್ವಪ್ನ, ಸುಶುಪ್ತ ಮತ್ತು ಜಾಗೃತಾವಸ್ಥೆಯನ್ನು ಈ ನಾಟಕದಲ್ಲಿ ತೋರಿಸಲಾಗಿದೆ. ರಂಗಭೂಮಿಗೆ ಅದ್ಭುತವಾದ ಶಕ್ತಿಯಿದ್ದು ಪೂಜ್ಯರು ರಂಗಭೂಮಿಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಣೇಹಳ್ಳಿಯನ್ನು ಬೆಳೆಸಿದ್ದಾರೆ. ಶಿವಸಂಚಾರದ ನಾಟಕಗಳು ಕನ್ನಡ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ ಎಂದರು.
ಹೊಸದುರ್ಗದ ಕನಕ ಗುರುಪೀಠದ ಪೂಜ್ಯ ಈಶ್ವರಾನಂದಪುರಿ ಸ್ವಾಮಿಗಳು ಮಾತನಾಡಿ ಇಂದು ಕನ್ನಡ ಭಾಷೆಯನ್ನು ಮಾತನಾಡುವುದೇ ಕಷ್ಟ. ಅಂಥದ್ದರಲ್ಲಿ ಹಳಗನ್ನಡವನ್ನು ಕಲಿತು ಸುಲಲಿತವಾಗಿ ಮಾತನಾಡುವುದು ಕಲಾವಿದರಿಗೆ ಮಾತ್ರ ಸಾಧ್ಯ. ಮಕ್ಕಳಿಗೆ ಸಂಸ್ಕಾರ ಮುಖ್ಯ.
ರಾವಣ ಮಗುವಾಗಿದ್ದಾಗ ಆತನ ತಾಯಿ ಅವನಿಗೆ ಸರಿಯಾದ ಸಂಸ್ಕಾರ ನೀಡದ್ದರ ಪರಿಣಾಮ ರಾವಣ ಮುಂದೆ ದುಷ್ಟನಾಗುವ ಪರಿಸ್ಥಿತಿ ಬಂತು. ಸ್ವಾಮಿಗಳು ನಾಟಕ ನೋಡುವುದೇ ಅಪರಾಧ ಎನ್ನುವ ಭಾವನೆ ಅನೇಕರಲ್ಲಿ ಇತ್ತು. ಆದರೆ ಪಂಡಿತಾರಾಧ್ಯ ಶ್ರೀಗಳು ರಂಗಭೂಮಿಯನ್ನು ಸಮರ್ಥವಾಗಿ ಬಳಸಿಕೊಂಡದ್ದರ ಪರಿಣಾಮ ಇಂದು ಸಾಲು-ಸಾಲಾಗಿ ಸ್ವಾಮಿಗಳು ಒಟ್ಟಿಗೆ ಕುಳಿತು ನಾಟಕ ನೋಡುವಂತಾಗಿದೆ. ಇಂಥ ನಾಟಕಗಳನ್ನು ಮತ್ತೆ ಮತ್ತೆ ನೋಡುವ ಭಾಗ್ಯ ನಮ್ಮದಾಗಲಿ ಎಂದರು.
ಕುಂಚಟಿಗ ಮಹಾಸಂಸ್ಥಾನದ ಪೂಜ್ಯ ಬಸವಶಾಂತವೀರ ಸ್ವಾಮಿಗಳು ಮಾತನಾಡಿ ಇದು ಅತ್ಯಂತ ಸಾಂಕೇತಿಕ ನಾಟಕ. ಮೊದಮೊದಲು ಈ ನಾಟಕ ಏನೇನೂ ಅರ್ಥವಾಗಲಿಲ್ಲ. ನಿಧಾನವಾಗಿ ನಾಟಕ ಸ್ವಲ್ಪ ಸ್ವಲ್ಪವೇ ಅರ್ಥವಾಗತೊಡಗಿತು. ನಾಟಕಗಳ ವೀಕ್ಷಣೆಯಿಂದ ಮಕ್ಕಳ ಪ್ರತಿಭೆ ಹೊರಬರಲು ಪ್ರೇರಣೆ ನೀಡಿದಂತಾಗುತ್ತದೆ ಜೊತೆಗೆ ಮಕ್ಕಳ ಸ್ಮರಣ ಶಕ್ತಿಯೂ ಹೆಚ್ಚುತ್ತದೆ ಎಂದರು.
ಬಾಗಲಕೋಟೆಯ ಪೂಜ್ಯ ಅನ್ನದಾನ ಭಾರತಿ ಸ್ವಾಮಿಗಳವರು ಮಾತನಾಡಿ ಪಂಡಿತಾರಾಧ್ಯ ಶ್ರೀಗಳು ಕಲೆಯ ಬೆಲೆಯನ್ನು ಹೆಚ್ಚಿಸಿದ್ದಾರೆ. ಕಲೆಯಿಂದ ಬದುಕು ಹಸನಾಗುವುದರ ನಮ್ಮೊಳಗಿನ ದೋಷಗಳನ್ನು ತಿದ್ದಿಕೊಳ್ಳಲು ನೆಲೆಯನ್ನು ಒದಗಿಸುತ್ತದೆ, ಸಮಾಜಕ್ಕೂ ಒಳ್ಳೆಯ ಸಂದೇಶವನ್ನು ನೀಡುತ್ತದೆ.
ನಾವು ಸ್ವಾಮಿಗಳಾಗುವ ಮುಂಚೆ ನಮಗೂ ನಾಟಕದ ಹುಚ್ಚು ಬಹಳ ಇತ್ತು. ಬಾಲ್ಯದಲ್ಲಿ ನಾವು ನಮ್ಮ ಗೆಳೆಯರ ಜೊತೆಗೂಡಿ ನಾಟಕ ಬರೆದು ಅಭಿನಯಿಸಿದ್ದೇವೆ. ಸ್ವಾಮಿಗಳಾದ ಮೇಲೆ ಇದೇ ಮೊದಲ ಬಾರಿಗೆ ನಾಟಕ ನೋಡುತ್ತಿದ್ದೇವೆ. ನಾಟಕ ನೋಡಲು ಅವಕಾಶ ಮಾಡಿಕೊಟ್ಟ ಸಾಣೇಹಳ್ಳಿಯ ಶ್ರೀಗಳಿಗೆ ಪ್ರಣಾಮಗಳು ಎಂದರು.
ಶಾಸಕರಾದ ಗೂಳಿಹಟ್ಟಿ ಡಿ ಶೇಖರ್ ಮಾತನಾಡಿ ಇದೊಂದು ಅತ್ಯುಮ ನಾಟಕ ಪ್ರದರ್ಶನ. ನಾಟಕ ನೋಡುತ್ತ ನೋಡುತ್ತ ನಾವೂ ಶಿವಭಕ್ತಿಯಲ್ಲಿ ಮಿಂದಂತಾಯಿತು. ಇಂಥ ಅವಕಾಶ ಮಾಡಿಕೊಟ್ಟ ಪಂಡಿತಾರಾಧ್ಯ ಶ್ರೀಗಳಿಗೆ ಪ್ರಣಾಮಗಳು ಎಂದರು.
ಮುಖ್ಯೋಪಾಧ್ಯಾಯ ಬಿ ಎಸ್ ಶಿವಕುಮಾರ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ -ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾಥರ್ಿಗಳು ನಾಟಕ ವೀಕ್ಷಿಸಿದರು.