ಕಾನೂನು ಅರಿವು ನೆರವು ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ03: ದೇಶದ ಕಟ್ಟಕಡೆಯ ಸಾಮಾನ್ಯ ವ್ಯಕ್ತಿಯು ನ್ಯಾಯದಿಂದ ವಂಚಿರಾಗಬಾರದು, ಕಾನೂನು ಸುಲಭವಾಗಿ ಅವರಿಗೆ ತಲುಪಬೇಕು ಅವರು ಎಲ್ಲರಂತೆ ಬದುಕಬೇಕೆಂಬ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರವನ್ನು ಸಕರ್ಾರ ಜಾರಿಗೆ ತಂದಿದೆ, ಹಾಗಾಗಿ ನಾವು ಕಾನೂನು ಅರಿವು ನೇರವು ಕಾರ್ಯಕ್ರಮದ ಮೂಲಕ ನಿತ್ಯಜೀವನಕ್ಕೆ ಬೇಕಾದ ಕಾನೂನುಗಳನ್ನು ತಿಳಿಸಲಿದ್ದು.  ವಿದ್ಯಾಥರ್ಿಗಳು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಸಹಬಾಳ್ವೆ ನಡೆಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ವಿಜಯಕುಮಾರ ಕನ್ನೂರ ಸಲಹೆ ನೀಡಿದರು.

     ತಾಲೂಕಿನ ಜಕ್ಕನಕಟ್ಟಿ ಗ್ರಾಮದ ಕಿತ್ತೂರ ಚನ್ನಮ್ಮಾ ವಸತಿ ಶಾಲೆಯಲ್ಲಿ 3 ನೇ ದಿನ ನಡೆದ ಕಾನೂನು ಸಾಕ್ಷರತಾ ರಥ ಯಾತ್ರೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾಯವಾದಿಗಳ ಸಂಘ, ವಿವಿಧ ಇಲಾಖೆಗಳ  ಸಂಯುಕ್ತಾಶ್ರಯದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು    ದೇಶದಲ್ಲರಿತಕ್ಕ ಪ್ರತಿಯೊಬ್ಬ ನಾಗರಿಕನು ತಾನು ಆಥರ್ಿಕವಾಗಿ ದುರ್ಭಲವಾಗಿದ್ದೇನೆ ನನಗೆ ಯಾವುದೇ ಒಂದು ಸೌಲಭ್ಯದ ಕೊರತೆ ಇದೆ ಎಂಬ ಕಾರಣಕ್ಕಾಗಿ ಅವರು ನ್ಯಾಯದಿಂದ ವಂಚನೆಗೆ ಒಳಗಾಗಬಾರದು ಆ ಒಂದು ಕಾರಣದಿಂದ ನಮ್ಮ ಸವರ್ೋಚ್ಚ ನ್ಯಾಯಾಲಯ ಪರಮೊಚ್ಚ ನ್ಯಾಯಾಧೀಶರಾದ ಜಸ್ಟೀಸ್ ಭಗವತಿ ಅವರು 1978 ರಂದು ಕಾನೂನು ಸೇವಾ ಪ್ರಾಧಿಕಾರಿ ಎಂಬ ಕಾನೂನು ಜಾರಿಗೆ ತರಲು ಬಹಳ ಉತ್ಸಕತೆ ಹೊಂದ್ದಿದ್ದರಿಂದ 1995 ರಲ್ಲಿ ಕಾನೂನು ಸೇವಾ ಪ್ರಾಧಿಕಾರ ರಚನೆಯಾಗಿ ಇಂದು ದೇಶದಲ್ಲಿ, ರಾಜ್ಯದಲ್ಲಿ, ಜಿಲ್ಲೆಯಲ್ಲಿ, ತಾಲೂಕಿನಲ್ಲಿ ಈ ಪ್ರಾಧಿಕಾರವನ್ನು ರಚನೆ ಮಾಡಿ ಎಲ್ಲರಿಗೂ ಕಾನೂನಿನ ನೇರವು ಕೊಡುತ್ತಾ ಬಂದಿದೆ ಎಂದರು. 

   ಸಿ.ಪಿ.ಆಯ್ ಆರ್.ಎಫ್.ದೇಸಾಯಿ, ವಲಯ ಅರಣ್ಯಾಧಿಕಾರಿ ಶಿವಾನಂದ ಪೂಜಾರ, ನ್ಯಾಯವಾದಿಗಳ ಸಂಘಧ ಅಧ್ಯಕ್ಷ ಎಸ್.ಬಿ ಲಕ್ಕಣ್ಣನವರ, ಹಿರಿಯ ನ್ಯಾಯವಾದಿ ಎನ್.ಎನ್. ಪಾಟೀಲ್, ಎಮ್.ಜಿ ವಿಜಾಪೂರ, ಸಿ.ಎಮ್.ಹರಕುಣಿ, ಸಮಾಜ ಕಲ್ಯಾಣಿಧಿಕಾರಿ ಸಿ.ಆರ್ ಅಂಬಿಗೇರ, ರಾಣಿ ಚೆನ್ನಮ್ಮಾ ವಸತಿ ಶಾಲೆಯ ಪಾಂ್ರಶುಪಾಲರಾದ ಎಸ್.ಬಿ ಪೂಜಾರ , ಅಂಗನವಾಡಿ ವೇಲ್ವಿಚಾರಕಿ ಸುನಂದಾ ಆಲೂರ, ಉಪನ್ಯಾಸ ಮಾಡಿದರು.

 ಹಿರಿಯ ನ್ಯಾಯವಾದಿಗಳಾದ ಮುದಕ್ಕಣ್ಣವರ, ಎಸ್.ಎಮ್.ಕಮ್ಮಾರ, ಎನ್.ಎನ್.ಪಾಟೀಲ್, ಜಿ.ಎ ಹಿರೇಮಠ, ಜಿ.ಎನ್.ಯಲಿಗಾರ, ಎಫ್.ಎಮ್.ಹಾದಿಮನಿ, ಎಮ್.ಜಿ ವಿಜಾಪೂರ, ಸಿ.ಎಮ್ ಹರಕುಣಿ, ಕೆ.ಎನ್.ಭಾರತಿ, ಹನುಮಂತ ಬಂಡಿವಡ್ಡರ, ಪೋಲಿಸ್ ಸಿಬ್ಬಂದಿಗಳಾದ ಎ.ಎಮ್.ಹಳ್ಳಿಯವರ ಎಸ್.ಟಿ ಕಲಕೊಟಿ ನ್ಯಾಯಾಲಯದ ಸಿಬ್ಬಂದಿಗಳಾದ ಮೋಹನ ಬದ್ದಿ, ನಿರಂಜನ, ಅಮೋಗ ಹಡಗಲಿ, ಅಶೋಕ ಉಪ್ಪಾರ, ಮತ್ತು ವಸತಿ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬಿ.ಎಸ್.ಮರಿಗೌಡರ ಸ್ವಾಗತಿಸಿದರು ಟಿ. ರಾಜಶೇಖರ ನಿರೂಪಿಸಿದರು.