*2024-25ನೇ ಸಾಲಿನ ವಿಶೇಷ ಗ್ರಾಮ ಸಭೆ ನಡೆಸಲಾಯಿತು
ಇಂಡಿ 6 : ತಾಲ್ಲೂಕಿನ ಝಳಕಿ ಗ್ರಾಮ ಪಂಚಾಯತ ಆವರಣದಲ್ಲಿ ಬುಧುವಾರ ದಿವಸ 10 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಕಾನೂನಾತ್ಮವಾಗಿ ಗ್ರಾಮಸ್ಥರ ಸಮ್ಮೂಖದಲ್ಲಿ, ನೂಡಲ್ ಅಧಿಕಾರಿಗಳಾದ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಆರ್.ಗದ್ಯಾಳ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಾನಂದ ಅಂಗಡಿ ಇವರ ಸಹಯೋಗದಲ್ಲಿ 2024-25ನೇ ಸಾಲಿ ವಿಶೇಷ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಯಿತು.ಈ ಸಂದರ್ಬದಲ್ಲಿ ಅಧ್ಯಕ್ಷರು ಹಾಗೂ ನೂಡಲ್ ಅಧಿಕಾರಿಗಳ, ಗ್ರಾಮ - ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಮಾಹಿತಿಯನ್ನು ಪಡೆದು, ಗ್ರಾಮಸ್ಥರ ಅನುಮತಿ ಮೇರೆಗೆ ಯೋಜನೆ, ವಸತಿಗಳ ವಿಂಗಡನೆ, ನರೇಗಾ ಅನುದಾನದ ವಿಸ್ತರಣೆ ಬಗ್ಗೆ ಚರ್ಚಿಸಲಾಯಿತು, ಗ್ರಾಮ ಪಂಚಾಯತಿ ಅಡಿಯಲ್ಲಿ ಬರತಕ್ಕಂತಹ ಮೈಲಾರ, ಅರ್ಜನಾಳ, ಝಳಕಿ ಗ್ರಾಮಸ್ಥರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಜನರಿಗೆ ಒಗುಡಿಸಿ ಯಾವುದೆ ಕಳಪೆ ಇಲ್ಲದಂತೆ, ಯಾರಿಗು ಅನ್ಯಾವಾಗದಂತೆ ಸರಿಯಾದ ಫಲಾನುಭವಿಗೆ ಸರಿಯಾದ ಯೋಜನೆ ತಲುಪುವಂತೆ ಆಗಬೇಕು ಎಂದು ಅಧ್ಯಕ್ಷರಾದ ರಯಿಶಾ ಶಬ್ಬಿರ ಮುಲ್ಲಾ ಇವರು ಸರ್ವರಿಗು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಬಸವ ವಸತಿ ಯೋಜನೆಯಡಿ ಹೆಚ್ಚುವರಿ 76, ಅಲ್ಪ ಸಂಖ್ಯಾತ ವಸತಿ 19, ಅಂಬೆಡ್ಕರ ವಸತಿ ಯೋಜನೆಯಲ್ಲಿ ಎಸ್.ಸಿ 35, ಎಸ್.ಟಿ 21 ಹೀಗೆ ಒಟ್ಟು 151 ಮನೆಗಳನ್ನು ನೋಡಲ್ ಅಧಿಕಾರಿ ಎಸ್.ಆರ್.ಗದ್ಯಾಳ ಅನುಮೊದಿಸಿದರು, ನರೇಗಾ ಕ್ರೀಯಾ ಯೋಜನೆ ಅನುಮೋದನೆ, ತೆರಿಗೆ ಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಯಲ್ಲಿ ಬರುವಂತೆ ಸೇರರಿ್ಡಸಲಾಗಿದೆ. ಎಂದು ಗ್ರಾ-ಪಂ ಅಭಿವೃದ್ಧಿ ಅಧಿಕಾರಿ ಸಿ.ಜೆ.ಪಾರೆ ವಿವರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕಾಶಿಬಾಯಿ ಪಾಟೀಲ,ಸದಸ್ಯರಾದ ಸಣ್ಣಪ್ಪ ತಳವಾರ, ಶಂಕರಗೌಡ ಬಿರಾದಾರ, ಹನುಮಂತ ಕೋಳಿ, ರಾಘವೇಂದ್ರ ಕೆಂಗಾರ, ಸವಿತಾ ಬಂಗಾರತಳ, ಸವಿತಾ ಬ ಪಾಟೀಲ, ಹನುಮಂತ ದ್ಯಾಮಗೋಳ, ನಾಗಮ್ಮ ಗೋಡೆಕಾರ, ಶ್ರೀಶೈಲ ಬಿರಾದಾರ, ಪ್ರಕಾಶಗೌಡ ಪಾಟೀಲ, ಹೇಮಾ ನಾಯಕೋಡಿ, ಭಾಗ್ಯಶ್ರೀ ಹೂಗಾರ, ದೇವಕ್ಕಿ ಹರಿಜನ, ಹಾಗೂ ಕಾರ್ಯದರ್ಶಿಗಳಾದ ಮಧು ಕೊಡತೆ, ಸೋಮನಿಂಗ ಕಾಗರ, ವಿಜಯಕುಮಾರ, ಪುನಿತ, ರೇವಣಸಿದ್ಧ, ಪ್ರಿಯಾಂಕಾ ಕಾಗರ, ರಾಮಣ್ಣ ಕೋಳಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.