ಬೈಲಹೊಂಗಲ: ಯುವಕರು ತಂಬಾಕು ಮುಕ್ತ ಸಮಾಜ ಮಾಡಲು ಪಣತೊಡಬೇಕು

ಲೋಕದರ್ಶನ ವರದಿ

ಬೈಲಹೊಂಗಲ 03:  ತಂಬಾಕು ಸೇವನೆಯಿಂದ ಗುಣಪಡಿಸಲಾಗದ ಮಾರಕ ರೋಗಗಳು ಉಂಟಾಗುವುದರಿಂದ ಯುವಕರು ತಂಬಾಕು ಸೇವನೆ ತ್ಯಜಿಸಿ ತಂಬಾಕು ಮುಕ್ತ ಸಮಾಜ ಮಾಡಲು ಪಣತೊಡಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶೆ ಕಾವೇರಿ ಕಲ್ಮಠ ಹೇಳಿದರು.

ಅವರು ಪಟ್ಟಣದಲ್ಲಿ ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ  ಹಾಗೂ ಪ್ಯಾನಲ್ ವಕೀಲರು ಇವುರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ತಂಬಾಕು ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂಬಾಕು ಸೇವನೆ ಅಪಾಯಕಾರಿ ಹಿರಿಯರು ಮಕ್ಕಳಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು  ತಿಳುವಳಿಕೆ ನೀಡಬೇಕು ಎಂದರು.

ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ತಂಬಾಕು ಸೇವನೆ ಅಪಾಯಕಾರಿ ಅದರಲ್ಲಿ ಇರುವ ರಾಸಾಯನಿಕ ವಸ್ತುಗಳು ದೇಹದ ಆರೋಗ್ಯದ  ಮೇಲೆ ಅನೇಕ  ರೀತಿಯ ದುಷ್ಪರಿಣಾಮವನ್ನು ಉಂಟು ಮಾಡುತ್ತವೆ. ತಂಬಾಕು ತ್ಯಜಿಸಿ ರೋಗಮುಕ್ಯರಾಗಬೇಕೆಂದರು.

ವೇದಿಕೆ ಮೇಲೆ  ನ್ಯಾಯಾಧೀಶರಾದ ಚೈತ್ರಾ ಎ.ಎಮ್., ಸೌಭಾಗ್ಯ ಭೂಶೇರ, ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಸ್.ಹಿತ್ತಲಮನಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಮ್.ಆರ್.ಮೆಳವಂಕಿ, ಉಪಾಧ್ಯಕ್ಷ ಕೆ.ಎಸ್.ಕುಲಕಣರ್ಿ,  ಕಾರ್ಯದಶರ್ಿ ಡಿ.ಎಮ್.ಗರಗದ, ಬಿ.ಎಚ್.ಇ.ಓ ಎಸ್.ಎಸ್.ಮುತ್ನಾಳ, ಎನ್.ಡಿ.ಖಾಡೆ  ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ,ನಸರ್ಿಂಗ್ ವಿದ್ಯಾಥರ್ಿಗಳು, ಐ.ಸಿ.ಡಿ.ಎ.ಎಸ್.ಮೇಲ್ವಿಚಾರಕರು ಇದ್ದರು.

****