ಬೆಳಗಾವಿ: 'ಇಂದಿನ ಯುವ ಜನಾಂಗ ಸಂವಿಧಾನದ ಬಗ್ಗೆ ಅರಿತುಕೊಳ್ಳಬೇಕು'

ಬೆಳಗಾವಿ 26:  ಕರ್ನಾಟಕ ಕಾನೂನು ಸಮಿತಿಯ ರಾಜಾ ಲಖಮಗೌಡ ಕಾನೂನು ಮಹಾ ವಿದ್ಯಾಲಯದಲ್ಲಿ ಮಂಗಳವಾರ ರಾಷ್ಟ್ರೀಯ ಕಾನೂನು ದಿನಾಚರಣೆ ಏರ್ಪಡಿಸಲಾಗಿತ್ತು.  

ಬೆಳಗಾವಿಯ ಐದನೇಯ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಬಸವರಾಜ ಅವರು ಕಾರ್ಯಕ್ರಮ ಉದ್ಘಾಟಿಸಿದರು.  

ಸಂವಿಧಾನ ರಚನಾ ಸಮಿತಿಯು ನವಂಬರ್ 26ರಂದು ವಿಧಿವಾಗಿ ಸೃಷ್ಟಿಸಲಾದ ಸಂವಿಧಾನಕ್ಕೆ ಒಪ್ಪಿಗೆ ಸೂಚಿಸದ್ದರಿಂದ ಈ ದಿನವನ್ನು ಕಾನೂನು ದಿನವೆಂದು ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.   

"ಇಂದಿನ ಯುವ ಜನಾಂಗ ಸಂವಿಧಾನದ ಬಗ್ಗೆ ಅಭ್ಯಾಸ ಮಾಡಿ ಅರಿತುಕೊಳ್ಳಬೇಕು. ಜಾಗೃತಿ ಮೂಡಿಸಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಇತರ ವಿಷಯಗಳನ್ನು ಸಹ ಅಭ್ಯಾಸ ಮಾಡಬೇಕು. ಇತರರಿಗೆ ತಿಳಿಸಿಕೊಡಬೇಕು ಎಂದು ಅವರು ಹೇಳಿದರು.  

"ಶತಮಾನಗಳ ಹೋರಾಟದ ನಂತರ ಲಭ್ಯವಾದ ಸ್ವಾತಂತ್ರ್ಯದ ನಂತರ ನಮ್ಮ ರಾಷ್ಟ್ರ ನಾಯಕರಿಗೆ ಒಂದು ದೊಡ್ಡ ಸವಾಲು ಎದುರಾಗಿತ್ತು. ಅದೇನೆಂದರೆ ನಮ್ಮ ದೇಶಕ್ಕಾಗಿಯೇ ಪ್ರತ್ಯೇಕ ಸಂವಿಧಾನದ ಅವಶ್ಯಕತೆ ಇತ್ತು. ಇದನ್ನು ಎದುರಿಸುವುದಕ್ಕಾಗಿ ನಮ್ಮ ಹಿರಿಯ ನಾಯಕರು ಡಾ. ಬಿ. ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ಕರಡು ರಚನಾ ಸಮಿತಿಯನ್ನು ರಚಿಸಿದರು. ಈ ಸಮಿತಿ ಹಾಗೂ ಇತರ ಸಮಿತಿಗಳು ಸುಮಾರು ಮೂರು ವರ್ಷಕ್ಕೂ ಹೆಚ್ಚು ಕಾಲ ಕಷ್ಟಪಟ್ಟು ವಿವಿಧ ದೇಶಗಳನ್ನು ಸಂಚರಿಸಿ ನಂತರ ಅಂತಿಮ ಕರಡನ್ನು ಸೃಷ್ಟಿಸಿದರು. ಸಂವಿಧಾನದ ಅಂತಿಮ ಕರಡನ್ನು ವಿಸ್ತ್ರತ ಚಚರ್ೆಯ ನಂತರ  ನವಂಬರ್ 26ರಂದು  ಒಪ್ಪಿಕೊಳ್ಳಲಾಯಿತು. ಆ ಸವಿನೆನಪಿಗೆ ಈ ದಿನವನ್ನು ಕಾನೂನು ದಿನವನ್ನಾಗಿ ಆಚರಿಸಲಾಗುತ್ತದೆ," ಎಂದರು.  

"ಕಾನೂನಿನ  ಆಡಳಿತ ಎಂದರೆ ಯಾವುದೂ ಒಬ್ಬ ವ್ಯಕ್ತಿಯ ಆಡಳಿತ ವಲ್ಲ. ಈ ತತ್ವವು, ಸಂವಿಧಾನದ ಮೂಲ ತತ್ವವಾಗಿದೆ. ಸ್ವತಂತ್ರ ನ್ಯಾಯಾಂಗ, ಸರಕಾರದ ವಿವಿಧ ಅಂಗಗಳ ನಡುವೆ ಇರುವ ಅಧಿಕಾರದ ಹಾಗೂ ಜವಾಬುದಾರಿಯ ಸಮತೋಲನ, ಮುಂತಾದ ಮೂಲ ಸ್ವರೂಪಗಳು ಸಂವಿಧಾನದ ಮುಖ್ಯ ಅಂಶಗಳು. ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವುದು ಎಂದರೆ ಈ ಎಲ್ಲ ತತ್ವಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅರ್ಥ. ಶಿಕ್ಷಣ ಸಂಸ್ಥೆಗಳು ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಸಂವಿಧಾನದ ತತ್ವ ಗಳನ್ನು ಎತ್ತಿ ಹಿಡಿಯುವುದು ಹಾಗೂ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಹೇಳಿದರು.  

"ಸಂವಿಧಾನ ಸಂಬಂಧೀ ಸಂಶೋಧನೆಗಳನ್ನು ಶಿಕ್ಷಣ ಸಂಸ್ಥೆಗಳು ಪ್ರೋತ್ಸಾಹಿಸಬೇಕು," ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಸ್ . ವಿ ಗಣಾಚಾರಿ ಹೇಳಿದರು,  "ವಿದ್ಯಾಥರ್ಿಗಳಿಗೆ ಸಂವಿಧಾನದಕ್ಕೆ ಸಂಬಂಧ ಪಟ್ಟ ವಿವಿದ ವಿಷಯಗಳನ್ನು ಸಹ ಸಂಶೋಧನೆಗೆ ಒಳಪಡಿಸಬೇಕು. ವಿದ್ಯಾಥರ್ಿಗಳ ಅರಿವನ್ನು ಹೆಚ್ಚಿಸಬೇಕು. ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆ ಹಾಗೂ ಕಾರ್ಯ ನಿರ್ವಹಣೆ ಯ ಅಡ್ಡಿ ಆತಂಕಗಳನ್ನು ನಿವಾರಿಸಬೇಕು," ಎಂದು ಅವರು ಸಲಹೆ ನೀಡಿದರು.  

ಪ್ರಾಂಶುಪಾಲ ಡಾ. ಅನಿಲ ಹವಾಲ್ದಾರ ಅವರು ಕಾನೂನು ದಿನ ನಮ್ಮ ದೇಶದ ಸಾಂವಿಧಾನಿಕ ಇತಿಹಾಸದಲ್ಲಿ ಅತಿ ಪ್ರಮುಖವಾದ ದಿನವೆಂದು ಹೇಳಿದರು. "ಸಾಂವಿಧಾನಿಕ ತತ್ವಗಳ ಲಾಲನೆ ಹಾಗೂ ಪಾಲನೆ ನಮ್ಮ ಕರ್ತವ್ಯ. ಸಂವಿಧಾನದ ಅಥರ್ೆಸುವಿಕೆ ಪಾರದರ್ಶಕವಾಗಿರಬೇಕು. ಯುವ ಜನಾಂಗವು ಸಂವಿಧಾನದ ಬಗ್ಗೆ ಅರಿತು ಇತರರಿಗೆ ತಿಳಿ ಹೇಳಬೇಕು," ಎಂದು ಹೇಳಿದರು.  

ಕಾರ್ಯಕ್ರಮ ಸಂಯೋಜಕ ಡಾ. ಪ್ರಸನ್ನ ಕುಮಾರ ಹಾಗೂ ಇತರ ಶಿಕ್ಷಕರು ಹಾಗೂ ಸಿಬ್ಬಂದಿ, ಮಹಿಳಾ ಪ್ರತಿನಿಧಿ ಅನುಜಾ ಬೆಳಗಾಂಕರ, ಪ್ರಧಾನ ಕಾರ್ಯದಶರ್ಿ ಸಚ್ಚಿದಾನಂದ ಪಾಟೀಲ್, ಸುಕೃತಾ ವಾಗ್ಲೆ, ವಿದ್ಯಾಥರ್ಿಗಳು ಹಾಗೂ ಇತರರು ಹಾಜರಿದ್ದರು.