ವಿವೇಕಾನಂದರ ಆದರ್ಶ ಮಕ್ಕಳು ಅಳವಡಿಸಿಕೊಳ್ಳಬೇಕು

ಲೋಕದರ್ಶನ ವರದಿ

ಬೆಳಗಾವಿ 13:  ಬಿಜೆಪಿ ಮುಖಂಡ ಕಿರಣ ಜಾಧವ ಇಂದು ತಮ್ಮ ಜನ್ಮ ದಿನ ಹಾಗೂ ವಿವೇಕಾನಂದರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ನಗರದ ಮಹೇಶ್ವರ ಅಂಧ ಮಕ್ಕಳ ಶಾಲೆಯಲ್ಲಿ ಅಲ್ಲಿನ ಮಕ್ಕಳಿಗೆ ಇಂದು ಬೆಳಗಿನ ಉಪಹಾರ ವ್ಯವಸ್ಥೆ ಮಾಡಿದ್ದ ಕಿರಣ ಜಾಧವ ಅಲ್ಲಿಯೇ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನೂ ಆಯೋಜಿಸಿದ್ದರು. ಸುಮಾರು 300 ಜನರಿಗೆ ಕೇಂದ್ರ ಸರಕಾರದ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯ ಕಾರ್ಡಗಳನ್ನು ವಿತರಿಸಲಾಯಿತು. ವಿವೇಕಾನಂದರ ಆದರ್ಶಗಳನ್ನು ಮಕ್ಕಳು ಅಳವಡಿಸಿಕೊಳ್ಳಬೇಕು. ಅವರು ಯುವಕರಿಗೆ ರೋಲ್ ಮಾಡೆಲ್ ಆಗಬೇಕು ಎಂದ ಜಾಧವ್, ಇಲ್ಲಿನ ಮಕ್ಕಳು ಯಾವುದಕ್ಕೂ ಹಿಂಜರಿಯುವ ಅವಶ್ಯಕತೆ ಇಲ್ಲ. ಅವರ ಉತ್ಸಾಹ, ಚೈತನ್ಯ ಇತರರಿಗೇ ಮಾದರಿಯಾಗುವಂತಿದೆ ಎಂದರು. 

ಕೇಂದ್ರ ಸರಕಾರದ ಆಯುಷ್ಮಾನ್ ಯೋಜನೆಯ ಕಾಡರ್್ ಗಳನ್ನು 3 ತಿಂಗಳಿನಿಂದ ವಿತರಿಸುತ್ತ ಬಂದಿದ್ದೇನೆ. ಇದರಿಂದ ಬಡವರಿಗೆ, ಸಾಮಾನ್ಯರಿಗೆ ಅನುಕೂಲವಾಗಲಿದೆ. ತಪ್ಪದೆ ಎಲ್ಲರೂ ಕಾರ್ಡ ಪಡೆದುಕೊಳ್ಳಬೇಕು ಎಂದೂ ಕಿರಣ ಜಾಧವ ಕರೆ ನೀಡಿದರು. ಬೆಳಗಾವಿ ಜಿಲ್ಲಾ ಅಂಧರ ಸಂಘದ ಅಧ್ಯಕ್ಷ ವಿಕಾಸ ಕಲಘಟಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅರವಿಂದ ಉದೋಶಿ ಸ್ವಾಗತಿಸಿದರು. ಗೌರವ ಕಾರ್ಯದಶರ್ಿ ಪ್ರಭಾಕರ ನಾಗರಮುನೋಳಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾಥರ್ಿಗಳು ಪ್ರಾರ್ಥನೆ ಹಾಡಿದರು. ವಿವೇಕಾನಂದರ ಕುರಿತು ವಿದ್ಯಾಥರ್ಿ ಸಿದ್ದಪ್ಪ ತೋರಣಗಟ್ಟಿ ಮಾತನಾಡಿದನು. ಬೆಂಬಳಗಿ, ಗ್ರಾಮೋಪಾಧ್ಯಾಯ ಮೊದಲಾದವರಿದ್ದರು. ಮುಖ್ಯಾಧ್ಯಾಪಕ ಎ.ಎಂ.ಗಾವಡೆ ವಂದಿಸಿದರು.