ಬೆಳಗಾವಿ: 'ವೀರಭದ್ರೇಶ್ವರ ಜಯಂತಿಗೆ ಸಕರ್ಾರದಿಂದ ಮನ್ನಣೆ ಸಿಗಬೇಕು'

ಲೋಕದರ್ಶನ ವರದಿ

ಬೆಳಗಾವಿ 15:  ವಿಶ್ವದೆಲ್ಲಡೆ ಹರಿದು ಹಂಚಿಹೊಗಿರುವ ವೀರಶೈವ ಧರ್ಮದ ಜನರನ್ನ ವೀರಭದ್ರೇಶ್ವರ ಜಯಂತಿಯ ಆಚರಣೆಯ ಮುಖಾಂತರ ಒಗ್ಗೊಡಿಸಬೇಕು, ವೀರಶೈವರು ಪ್ರಪಂಚದ ಯಾವುದೇ ಮೂಲೆಗೆ ಹೋದರು ಧರ್ಮವನ್ನ ಮರೆಯದೆ ಪಾಲಿಸುತ್ತಿರಬೇಕು, ಧರ್ಮದ ಜನರನ್ನ ಒಗ್ಗೋಡಿಸುವ ನಿಟ್ಟಿನಲ್ಲಿ ಇಂತಹ ಸಂಘ ಸಂಸ್ಥೆಗಳು ಉತ್ತಮ ವೇದಿಕೆಗಳಾಗಿವೆ, ಪ್ರತಿಯೊಬ್ಬ ವಿರಶೈವನಿಗೆ ಮೂಲದೇವರು ವಿರಭದ್ರೇಶ್ವರ . ವೀರಭದ್ರೇಶ್ವರನಿಗೆ ಹೆಚ್ಚಿನ ಪ್ರಮುಖ ಭಕ್ತರು ವೀರಶೈವರಾಗಿದ್ದಾರೆ, ವೀರಭದ್ರದೇವರ ಮಂತ್ರ ಹಾಗು ಬಸ್ಮದಲ್ಲಿ ಅಗಾಧವಾದ ಶಕ್ತಿ ಇದೆ. ಜಗತ್ತಿನ ಎಲ್ಲ ವೀರಶೈವ ಲಿಂಗಾಯುತರು ಒಂದಾಗಬೇಕು. ವೀರಭದ್ರೇಶ್ವರ ಜಯಂತಿಗೆ ಸಕರ್ಾರದಿಂದ ಮನ್ನಣೆ ಸಿಗಬೇಕು. ಮುಂದಿನ ವರ್ಷದಿಂದ ವೀರಭದ್ರೇಶ್ವರ ಜಯಂತಿಯ ಸಂದರ್ಭದಲ್ಲಿ ಸಮಾಜಕ್ಕೆ ಹಾಗು ಧರ್ಮಕ್ಕಾಗಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಯನ್ನ ಗುರುತಿಸಿ  ಒಂದು ಲಕ್ಷ ರೊಗಳನ್ನ ಪ್ರಶಸ್ತಿ ರೋಪದಲ್ಲಿ ನೀಡಲಾಗುವುದು ಎಂದು ಬೆಳಗಾವಿಯ ಹುಕ್ಕೇರಿ ಹಿರೇಮಠದ ಶ್ರೀ.ಷ.ಬ್ರ. ಚಂದ್ರಶೇಖರ ಶೀವಾಚಾರ್ಯ ಮಹಾಸ್ವಾಮಿಗಳು ಹೇಳಿದರು ಅವರು ಮಂಗಳವಾರ ವಿರಶೈವ ಲಿಂಗಾಯುತ ಸಂಘಟನಾ ವೇದಿಕೆಯಿಂದ ಬೆಂಗಳೊರು ವಿಜಯ ನಗರದ ಬಸವೇಶ್ವರ ಸುಜ್ಞಾನ ಮಂದಿರದಲ್ಲಿ ಆಯೋಜಿಸಿದ್ದ - ಸಾಮಾಜಿಕ ಹಾಗು ರಾಜಕೀಯ ಕ್ಷೇತ್ರದಲ್ಲಿ ಜನಸೇವೆ ಮಾಡುತ್ತಿರುವ ವೀರಶೈವ ಲಿಂಗಾಯುತ ಗಣ್ಯರ ಅಭಿನಂದನಾ ಸಮಾರಂಭ. ನೊತನ ಪಧಾದಿಕಾರಿಗಳ ಪದಗ್ರಹಣ  ಹಾಗು ವೀರಭದ್ರೇಶ್ವರ ಜಯಂತೋತ್ಸವ  ಸಮಾರಂಭದ ಸಾನಿಧ್ಯ ವಹಿಸಿ ಸಮಾರಂಭವನ್ನ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತ ಹೇಳಿದರು.  

 ಕನರ್ಾಟಕ ಸರಕಾರದ ಮುಖ್ಯಮಂತಿಗಳ ಮಾಧ್ಯಮ ಸಲಹೆಗಾರರಾದ ಮಹದೇವ ಪ್ರಸಾದ್ "ಧರ್ಮ ಮತ್ತು ಸಮತಾವಾದ" ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತ "12ನೇ ಶತಮಾನದ ಶಿವಶರಣರು ಪ್ರಥಮವಾಗಿ ಅಹಿಂದವನ್ನ ಪಾಲಿಸಿದವರು ಜಾತಿ ಧರ್ಮ ಬೇದವಿಲ್ಲದೆ ಎಲ್ಲ ಶೋಷಿತರಿಗೆ ಇಷ್ಠಲಿಂಗಕಟ್ಟಿ ಕಾಯಕವೆ ಕೈಲಾಸ, ಜಾತಿ ಜಾತಿ ಎನಬೇಡ, ದಯವೆ ಧರ್ಮದ ಮೊಲವಯ್ಯ ಎಂದು ಸಮಾನತೆಯನ್ನ ಸಾರಿದವರು, ಸರ್ವರಿಗೊ ಸಮಪಾಲು ಸಿದ್ದಾಂಥವನ್ನ ಜಗತ್ತಿಗೆ ಸಾರಿದವರು 12ನೇ ಶತಮಾನದ ಶರಣರು, ಅರಿವು ಆಚಾರವಿದ್ದರೆ ಪ್ರಪಂಚದಲ್ಲಿ ಎನನ್ನಾದರು ಗೆಲ್ಲಬಹುದು. ಜನರಾಡುವ ಬಾಷೆಯಲ್ಲಿ ಶಿಕ್ಷಣ ಪಡೆಯಬೇಕು, ಜನರಾಡುವ ಬಾಷೆಯಲ್ಲಿ ವಚನ ಹಾಡಬೇಕು. ಮಹಿಳೆಯರ ಶೋಷಣೆಯ ವಿರುದ್ದ ಹೋರಾಡಿ ಅವರನ್ನ ಸಮಾಜದ ಮುಖ್ಯ ವಾಹಿನಿಗೆ ತಂದವರು ಅವರಿಗೆ ಇಷ್ಠಲಿಂಗಕಟ್ಟಿ ಪೊಜಿಸುವ ಅವಕಾಶ ನೀಡಿ ಉದ್ದರಿಸಿದವರು ಜಗತ್ತಿನ ಪ್ರಥಮ ವಚನಗಾತರ್ಿ ಅಕ್ಕಮಹಾದೇವಿ. ಬಸವಣ್ಣನವರ ವಚನಗಳು ಇಂದು ಮನು ಕುಲಕ್ಕೆ ಮಾದರಿಯವಾಗಿದೆ. ಪ್ರಪಂಚದ ಅತ್ಯಂತ ಶಕ್ತಿಯುತ ಧರ್ಮ ವಿರಶೈವ ಧರ್ಮ, ಇಂತಹ ಧರ್ಮವನ್ನ ಕೆಲವು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಒಡೆಯಲು  ಪ್ರಯತ್ನಿಸಿದ್ದು ವಿಷಾಧನಿಯ. ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಅನೇಕ ರಾಜಕಾರಣಿಗಳು ಇಂದು ಗೈರಾಗಿರುವುದು ಬೇಸರದ ಸಂಗತಿ ಎಂದರು.  

ಮಾಜಿ ಶಾಸಕ ವಿಶ್ವನಾಥ ಪಾಟೀಲ, ಆಂದ್ರಪ್ರದೇಶದ ರಾಯದುರ್ಗದ ಶಾಸಕ ರಾಮಚಂದ್ರ ರೆಡ್ಡಿ,  ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಿ.ಆರ್ ಜಯರಾಜ, ಉಪಾಧ್ಯಕ್ಷರಾದ ಉಮೇಶ ಬಣಕಾರ ಗೌರವ ಅತಿಥಿಗಳಾಗಿ ಆಗಮಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂಘಟನೆಯ ವಿವಿಧ ಘಟಕಗಳನ್ನ ಉದ್ಘಾಟಿಸಿ ಮಾತನಾಡಿದರು.  


 ಸಂಘಟನೆಯ ಅಧ್ಯಕ್ಷರು ಹಾಗು ವಿರಶೈವ ಲಿಂಗಾಯುತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರದೀಪ ಕಂಕಣವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆ ನಡೆದು ಬಂದ ರೀತಿಯನ್ನ ವಿವರಿಸಿದರು.

 ಸಂಘಟನೆಯ ಅನೇಕ ಘಟಕಗಳ ನೊತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು.

ರಶ್ಮಿ ಕಾರ್ಯಕ್ರಮ ನಿರೂಪಿಸಿದರು.