ವಿ.ವಿ.ಯ ಬೆಳವಣಿಗೆಗೆ ಅನುಮತಿ ಸಿಗಲು ಸಾಧ್ಯವಿಲ್ಲ'

ಲೋಕದರ್ಶನ ವರದಿ

ಬೆಳಗಾವಿ 16:  ರಾಣಿ ಚನ್ನಮ್ಮ ವಿ.ವಿ.ಯ ಸಮಗ್ರ ಬೆಳವಣಿಗೆಗಾಗಿ ವಿಸ್ತಾರವಾದ ಜಾಗೆಯ ಅವಶ್ಯಕತೆ ಇದೆ. ಆದರೆ ಈಗಿರುವ ಭೂತರಾಮನಹಟ್ಟಿ ಭೂ ಪ್ರದೇಶವು ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಯ ಆಧೀನದಲ್ಲಿದ್ದು ವಿ.ವಿ.ಯ ಬೆಳವಣಿಗೆಗೆ ಅನುಮತಿ ಸಿಗಲು ಸಾಧ್ಯವೆ ಇಲ್ಲ ಎಂದು ರಾಣಿ ಚನ್ನಮ್ಮ ವಿ.ವಿ ಕುಲಪತಿ ಪ್ರೊ. ರಾಮಚಂದ್ರಗೌಡ ಹೇಳಿದರು. 

     ಕುಲಪತಿಗಳ ಕಾಯರ್ಾಲಯದಲ್ಲಿ ಆಯೋಜಿಸಲಾಗಿದ್ದ ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಣಿ ವಿ.ವಿ ಅಸ್ತಿತ್ವಕ್ಕೆ ಬಂದು ಇದೀಗ ತನ್ನಯೆ ದಶಮಾನೋತ್ಸವವನ್ನು ಆಚರಿಸುವ ಹೊಸ್ತಿಲಲ್ಲಿದೆ, ಹಾಗಾಗಿ ಉನ್ನತ ಶಿಕ್ಷಣದ ಅಭಿವೃದ್ಧಿ ಎಂಬುವುದು ನಿಂತ ನೀರಾಗಬಾರದು ವಿಶ್ವ ವಿದ್ಯಾಲಯದ ಸ್ಥಾಪನೆಗಾಗಿ ನಡೆದ ಹೋರಾಟ ಪಟ್ಟಿ ಪರಿಶ್ರಮ ವ್ಯರ್ಥವಾಗಬಾರದು ಸ್ವತಂತ್ರ ವಿಶ್ವವಿದ್ಯಾಲಯಕ್ಕಾಗಿ ಸುದೀರ್ಘ ಹೋರಾಟದ ಕಿಡಿ ಹೊತ್ತಿಸಿದ  ಹಿರೇಬಾಗೇವಾಡಿಯ ರೈತರೆ ಖುದ್ದಾಗಿ ತಮ್ಮ ಸ್ವಂತ ಜಮೀನನ್ನು ವಿ.ವಿ.ಯ ಅಭಿವೃದ್ಧಿಗಾಗಿ ನೀಡಲು ಮುಂದೆ ಬಂದಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಎಂದು ಸಂತಸ ವ್ಯಕ್ತಪಡಿಸಿದರು.

     ರಾಣಿ ಚನ್ನಮ್ಮ ವಿ.ವಿ ಅಭಿವೃದ್ಧಿ ಪರ ಹೋರಾಟ ಸಮೀತಿಯ ಸಂಚಾಲಕ ಮಂಜುನಾಥ ವಸ್ತ್ರದ ಮಾತನಾಡಿ ವಿ.ವಿ.ಯ ಅಭಿವೃದ್ಧಿ ಪರ ಯೋಜನೆಯ ಬಹು ಮುಖ್ಯ ಭಾಗವಾಗಿರುವ ರೈತರೊಂದಿಗೆ ಕುಲಪತಿಗಳ ಅಧ್ಯಕ್ಷತೆಯಲ್ಲಿ ಒಂದು ಸಂವಾದ ನಡೆಸಲು ವಿನಂತಿಸಿಕೊಂಡಿರುವ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಆದ್ದರಿಂದ ರೈತರು  ಈ ಸಂವಾದದಲ್ಲಿ ಮುಕ್ತವಾಗಿ ಭಾಗವಹಿಸಿ, ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಬೇಕೆಂದು ಹೇಳಿದರು.

   ಸಂವಾದದಲ್ಲಿ ಭಾಗವಹಿಸಿದ ರುದ್ರಗೌಡ ಪಾಟೀಲ, ವೈಜನಾಥ ಪಾಟೀಲ,ಯಲಗೌಡ ಪಾಟೀಲ, ಎ.ಬಿ.ಸಾಗರ, ಶಿವರಾಯಿ ವಾಲಿ, ಬಿ.ಎಸ್.ಗಾಣಿಗಿ, ಸಿದ್ದಾರೂಢ ಹೊನ್ನನವರ ಮುಂತಾದವರು ಮಾತನಾಡಿ, ಜಮೀನಿಗೆ ಯೋಗ್ಯಬೆಲೆ, ವಿ.ವಿ ಆಗುವುದರಿಂದಾಗಿ ಈ ಭಾಗದಲ್ಲಿನ ಶಿಕ್ಷಣಕ, ಆಥರ್ಿಕ, ಔದ್ಯೋಗಿಕ, ಅವಕಾಶಗಳು ಮತ್ತು ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಚಿಂತನೆ ನಡೆಸಿ ಮಾಹಿತಿ ಪಡೆದರು. 

ಈ ಸಂದರ್ಭದಲ್ಲಿ ಫಡಿಗೌಡ ವಾಲಿ, ಅಪ್ಪಯ್ಯಾ ವಾಲಿ, ಶಂಕರ ಸೋನಪ್ಪನವರ,ಭೀಮನಗೌಡ ಪೋಲೇಶಿ, ಬಾಯಪ್ಪ ಕಾದ್ರೋಳಿ, ಭೀಮನಗೌಡ ಪಾಟೀಲ, ಬಸನಗೌಡ ಬಾರಿಗಿಡದ,ಬಸವರಾಜ ರೊಟ್ಟಿ, ಅಡಿವೆಪ್ಪ ರೊಟ್ಟಿ, ಚಂಬಪ್ಪ ಪಾಶ್ಚಾಪೂರ, ಮಹಾತೇಶ ಪಾಟೀಲ, ಫಡಿಗೌಡ ಅಂಕಲಗಿ,  ಗ್ರಾ. ಪಂ ಸದಸ್ಯರಾದ ಸಂಜಯ ದೇಸಾಯಿ, ಯಾಕುಬ ದೇವಲಾಪೂರ, ಅನ್ವರ ದೇವಡಿ ಮುಂತಾದವರು ಉಪಸ್ಥಿತರಿದ್ದರು.