'ಯು ಟರ್ನ ನಾಟಕ ಪ್ರದರ್ಶನ

'ಯು ಟರ್ನ ನಾಟಕ ಪ್ರದರ್ಶನ

ಬೆಳಗಾವಿ: ನಗರದ ರಂಗಸಂಪದದವರು  ಇದೇ ದಿ. 15 ರವಿವಾರ ಸಾಯಂಕಾಲ 6-30 ಕ್ಕೆ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರ (ಹಳೆ ರೀಝ ಟಾಕೀಜ್) "ಯು ಟರ್ನ ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ. 

ಮೂಲ ಮರಾಠಿಯಲ್ಲಿ "ಯು ಟರ್ನ ನಾಟಕವನ್ನು ಆನಂದ ಮ್ಹಸ್ವೇಕರ ಅವರು ರಚಿಸಿದ್ದು ಕನ್ನಡಕ್ಕೆ ನೀತಾ ಇನಾಂದಾರ ಅನುವಾದಗೊಸಿರುವ ಈ  ನಾಟಕದಲ್ಲಿ ಡಾ. ಅರವಿಂದ ಕುಲಕಣರ್ಿ ಹಾಗೂ ಶ್ರೀಮತಿ ಪದ್ಮಾ ಕುಲಕಣರ್ಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಹಿನ್ನಲೆ ಸಂಗೀತ ಹಾಗೂ ನಾಟಕ ನಿದರ್ೇಶನ ಶ್ರೀಪತಿ ಮಂಜನಬೈಲ ಅವರದ್ದಿದೆ.

ರಂಗಸಂಪದ  ಪ್ರೇಕ್ಷಕ ಸದಸ್ಯತ್ವ ಪಡೆದವರಿಗೆ ಉಚಿತ ಪ್ರವೇಶವಿದ್ದು ಉಳಿದವಿರಗೆ ರೂ.100 ಸಹಾಯ ಪ್ರವೇಶಧನವಿರುತ್ತದೆ ಎಂದು ರಂಗಸಂಪದ ಅಧ್ಯಕ್ಷ ಡಾ. ಎ. ಎಲ್. ಕುಲಕಣರ್ಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ