'ಇನ್ನೊಬ್ಬರಿಗೆ ಒಳಿತನ್ನು ಮಾಡುವುದೇ ಪರಂಪರೆ'

ಲೋಕದರ್ಶನ ವರದಿ

ಬೆಳಗಾವಿ 17:  ಇನ್ನೊಬ್ಬರಿಗೆ ಒಳಿತನ್ನು ಮಾಡುವುದೇ ಪರಂಪರೆ, ಪರಂಪರೆ ನಿನ್ನೆ, ಇಂದು, ಮುಂದೆಯು ಇರುವಂತಹದ್ದು ಸಂಸ್ಕೃತಿ ಮನುಷ್ಯನ ಬದುಕಿನಲ್ಲಿದೆ ಎಂದು ಕನರ್ಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವ್ಹಿ.ವಸಂತಕುಮಾರ ನುಡಿದರು.

ಮಂಗಳವಾರ ನಗರದ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕನ್ನಡ ವಿಭಾಗದಿಂದ ಆಯೋಜಿಸಿದ್ದ "ಕನ್ನಡ ಸಾಹಿತ್ಯ ಮತ್ತು ಪರಂಪರೆ" ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಎಲ್ಲರೂ ಕವಿಗಳೇ, ಕೆಲವರು ಹೃದಯ ಕವಿಗಳು ಸಾಹಿತ್ಯವು ಭಾರತೀಯ, ಮನುಷ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಪಂಪನಿಂದ ಹಿಡಿದು ಆಧುನಿಕ ಕನ್ನಡ ಸಾಹಿತ್ಯವು ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಈ ಮೌಲ್ಯಪ್ರತಿಪಾದನೆ ಆನಂದಾನುಭೂತಿಗೆ ದಾರಿಮಾಡಿಕೊಟ್ಟಿದೆ, ಇಂತಹ ಆನಂದಾನುಭೂತಿ ಕನ್ನಡ ಕಾವ್ಯದ ಕಣ್ಣುಗಳಾಗಿವೆ ಎಂದು ಅವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಂ.ಪಾಟೀಲ ವಹಿಸಿದ್ದರು. ಡಾ.ಹೆಚ್.ಎಮ್.ಚನ್ನಪ್ಪಗೋಳ ಸ್ವಾಗತಿಸಿದರು. ಡಾ.ಆರ್.ವ್ಹಿ.ಚಿಕ್ಕಮಠ ವಂದಿಸಿದರು ಡಾ.ಹೆಚ್.ಎಸ್.ಮೇಲಿನಮನಿ ನಿರೂಪಿಸಿದರು.