ಲೋಕದರ್ಶನ ವರದಿ
ಕಡಬಿ 20: ಕುಷ್ಠರೋಗ, ಕ್ಷಯರೋಗ ಪತ್ತೆ ಹಚ್ಚುವ ಅಂದೋಲನ ಕಾರ್ಯಕ್ರಮವು ನವಂಬರ್ 25 ರಿಂದ ಡಿಸೆಂಬರ್ 10ನೇ ದಿನಾಂಕದರವರೆಗೆ ಜರುಗಲಿದೆ. ಇದರಲ್ಲಿ ಆಶಾ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಮನೆ ಮನೆ ಬೇಟಿ ನೀಡಿ ಸಂಶಯಾಸ್ಪದ ಕುಷ್ಠರೋಗಿಗಳನ್ನು ಮತ್ತು ಕ್ಷಯರೋಗೊಗಳನ್ನು ಗುತರ್ಿಸುವದು, ಇಂತಹ ರೋಗಿಗಳನ್ನು ವೈಧ್ಯಾಧಿಕಾರಿಗಳ ಬಳಿ ಕರೆ ತಂದು ಪರೀಕ್ಷೆ ಮಾಡಿ ಚಿಕಿತ್ಸೆಯ ಮೂಲಕ ಗುಣಪಡಿಸುವದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಯರಗಟ್ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ ಆರ್ ಗಂಜಿ ಹೇಳಿದರು.
ಅವರು ಸಮೀಪದ ಸತ್ತಿಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರಣದ ಮುಂದೆ ಮಧುಮೇಹ ದಿನಾಚರಣೆ, ಮತ್ತು ಕುಷ್ಠರೋಗ, ಕ್ಷಯರೋಗ ಆಂದೊಲನದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಣಗಿದ ಬಾಯಿ, ವಿಪರಿತ ಬಾಯಾರಿಕೆ, ಪದೆ ಪದೆ ಮೂತ್ರ ವಿಸರ್ಜನೆ, ಹಸಿವು ಹೆಚ್ಚಾಗುವದು, ಮಂದ ದೃಷ್ಠಿ, ಆಯಾಸಾಗಿ ಸುಸ್ತಾಗುವದು ಇವು ಸಕ್ಕರೆ ಕಾಯಿಲೆ ಲಕ್ಷಣಗಳಾಗಿವೆ, ರಕ್ತ ಪರಿಕ್ಷೆ ಮೂತ್ರ ಪರಿಕ್ಷೆ ಮಾಡಿಸಿಕೊಂಡು ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುದರ ಮೂಲಕ ಸದರಿ ರೋಗವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ ಎಂದು ಎನ್ ಸಿ ಡಿ ಆಪ್ತ ಸಮಾಲೋಚಕರಾದ ಸರಸ್ವತಿ ಬಾಲನ್ನವರ ಹೇಳಿದರು.
ನಂತರ ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಕುಷ್ಠರೋಗ, ಕ್ಷಯರೋಗ, ಮಧುಮೇಹರೋಗದ ಹರುಡುವಿಕೆಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಘೋಷಣೆಗಳನ್ನು ಹೇಳಿ ಜನಜಾಗೃತಿ ಮೂಡಿಸಲಾಯಿತು.
ಸಂದರ್ಭದಲ್ಲಿ ಎಂ ಟಿ ಕುಂಬಾರ, ಯು ಬಿ ಬೇಟಗೇರಿ, ಸಮೀರ ಗೋರೆಕಾನ, ಲಕ್ಷ್ಮಿ ನಾಯ್ಕರ, ರುದ್ರಗೌಡ ಪಾಟೀಲ, ಶಾಲೆಯ ಶಿಕ್ಷಕರಾದ ಎಂ ಬಿ ಸರನ್ನವರ ಐ ಎಸ್ ಪವಾಡಿಗೌಡರ, ಜಿ ಎಸ್ ಉಪ್ಪಿನ, ಎಸ್ ಎಂ ಮಾಸ್ತಮರಡಿ, ವಿ ಡಿ ದಳವಾಯಿ, ವಿಧ್ಯಾರ್ಥಿಗಳು, ಆಶಾ ಕಾರ್ಯಕತರ್ೆಯರು ಹಾಜರಿದ್ದರು.