'ವಿದ್ಯಾರ್ಥಿಗಳು ಕಡ್ಡಾಯವಾಗಿ ಮತದಾನ ಮಾಡಬೇಕು'

ಲೋಕದರ್ಶನ ವರದಿ

ಬೆಳಗಾವಿ 01: ನಗರದ ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ದಿ.25ರಂದು ರಾಷ್ಟೀಯ ಮತದಾರರ ದಿನ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಸಂಗೀತಾ ದೇಸಾಯಿ "ರಾಷ್ಟೀಯ ಮತದಾರರ ದಿನದ" ಪ್ರತಿಜ್ಞೆಯನ್ನು ವಿದ್ಯಾಥರ್ಿಗಳಿಗೆ ಭೋದಿಸಿದರು ಹಾಗೂ ವಿದ್ಯಾಥರ್ಿಗಳಿಗೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು. ಕಾಲೇಜಿನ ವ್ಯಾಪ್ತಿಯಲ್ಲಿ ವಿದ್ಯಾಥರ್ಿಗಳ ಜಾಥಾ, ಪ್ರಭಾತ ಪೇರಿಗಳನ್ನು ಹಮ್ಮಿಕೊಳ್ಳಲಾಯಿತು. 

ಮತದಾರರ ಸಾಕ್ಷರತಾ ಸಂಘದ ಸಂಯೋಜಕ ಪ್ರೊ. ಬಾಳೇಶ ಮನ್ನಿಕೇರಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ವಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.