ಬಾಲಮಂದಿರ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿದ ‘ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವ’

ಬಾಲಮಂದಿರ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿದ  ‘ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವ’ 'Science and Culture Festival' held successfully at Balamandir High School

ಕಾರವಾರ 12: ಇಲ್ಲಿಯ ಬಾಲಮಂದಿರ ಪ್ರೌಢಶಾಲೆಯಲ್ಲಿ ನಡೆದ “ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವ”ವು ಯಶಸ್ವಿಯಾಗಿ ನಡೆಯಿತು.   ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರವಾರದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ ವಿಭಾಗ) ಮಂಜುನಾಥ ಜಿ. ನಾವಿ, “ವಿದ್ಯಾರ್ಥಿಗಳಲ್ಲಿ ಅಘಾದವಾದ ಜ್ಞಾನ ಬಂಢಾರ ಸೂಪ್ತಾವಸ್ಥೆಯಲ್ಲಿದೆ. ಅವರಲ್ಲಿ ಅನ್ವೇಷಣೆಯ ಗುರಿಯಿದೆ ಅದನ್ನು ಹೊರತರುವ ಪ್ರಯತ್ನವೇ ಈ ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವದ ಮುಖ್ಯ ಉದ್ಧೇಶವಾಗಿದೆ”. ಎಂದು ನುಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರವಾರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಆರ್‌.ಎಸ್‌. ಹಬ್ಬು ಮಾತನಾಡಿ, “ವಿದ್ಯಾರ್ಥಿಗಳು ತಮ್ಮಲ್ಲಿ ಕುತೂಹಲ, ಚುರುಕುತನ ಹಾಗೂ ಸ್ವಾಭಿಮಾನ ಬೆಳೆಸಿಕೊಂಡಲ್ಲಿ ಮುಂದೆ ಮಹತ್ತರ ಸಾಧನೆಯನ್ನು ಮಾಡುವುದರಲ್ಲಿ ಸಂದೇಹವಿಲ್ಲ. ಪಠ್ಯದ ವಿಷಯಾಧ್ಯಯನದ ಜೊತೆಗೆ ಪ್ರತಿಯೊಂದರಲ್ಲಿಯೂ ವಿದ್ಯಾರ್ಥಿಗಳು ಆಸಕ್ತಿಯನ್ನು ಹೊಂದಿದ್ದಲ್ಲಿ ಹೊಸತನವನ್ನು ಆವಿಷ್ಕರಿಸಬಹುದು” ಎಂದರು. ಇನ್ನೊರ್ವ ಅತಿಥಿಗಳಾದ ಕಾರವಾರ ನಗರಸಭೆಯ ಅಧ್ಯಕ್ಷರಾದ ರವಿರಾಜ ಅಂಕೋಲೆಕರ ವಿಜ್ಞಾನ ಪ್ರದರ್ಶನದ ಮೆಚ್ಚುಗೆ ಕುರಿತು ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರವಾರ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷ ಅನಿರುದ್ಧ ಹಳದಿಪುರ “ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವ” ನಡೆಸುವ ಉದ್ದೇಶದ ಕುರಿತು ಮನವರಿಕೆ ಮಾಡಿದರು. ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯ ಸಹಕಾರದ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. 

ಹಿಂದೂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಆರ್‌.ವಿ. ದೇಶಭಂಡಾರಿ ಹಾಗೂ ಸುಮತಿದಾಮ್ಲೆ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಮೀಂಧರ ಎಸ್‌.ಎಮ್‌. ಬಾಲಮಂದಿರ ಪ್ರೌಢಶಾಲೆಯ ಶಿಕ್ಷಕಿ ಭಾರತಿ ಐಸಾಕ್ ಹಾಗೂ ನಜಿರುದ್ಧಿನ್ ಸೈಯದ್ ಉಪಸ್ಥಿತರಿದ್ದರು. ಕಾರವಾರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಎಸ್‌.ಪಿ. ಕಾಮತ್ ಹಾಗೂ ಆಡಳಿತಾಧಿಕಾರಿ ಜಿ.ಪಿ. ಕಾಮತ ಈ ಉತ್ಸವದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.  ಶಿಕ್ಷಕಿ ಕೋಮಲ ಮಾನಕರ ಕಾರ್ಯಕ್ರಮ ನಿರೂಪಿಸಿದರೆ, ಸೀಮಾ ರೇವಣಕರ ವಂದನಾರೆ​‍್ಣ ಸಲ್ಲಿಸಿದರು.  

ಈ ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವದಲ್ಲಿ ಒಟ್ಟೂ 547 ವಿದ್ಯಾರ್ಥಿಗಳು ಭಾಗವಹಿಸಿದ್ದು, 197 ವಿಜ್ಞಾನದ ಮಾಧರಿಗಳು, 229 ಸಮಾಜ ಶಾಸ್ತ್ರ ಮತ್ತು 121 ಗಣತದ ವಸ್ತುಪ್ರದರ್ಶನ ಹಾಗೂ 50 ಚಿತ್ರಕಲೆ, ಕರಕುಶಲ ಮತ್ತು ರಂಗೋಲಿ ಪ್ರದರ್ಶನಗಳನ್ನು ಏರಿ​‍್ಡಸಲಾಗಿತ್ತು. ಕಾರವಾರದ ಸುತ್ತಮುತ್ತಲಿನ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಮತ್ತು ಪಾಲಕರು ಈ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.