'ಹೆಚ್.ಐ.ವಿ ಸೋಂಕಿನ ಬಗ್ಗೆ ಸಾರ್ವಜನಿಕರಿಗೆ ನಿಖರವಾದ ಮಾಹಿತಿ ನೀಡಿ'
ಬೆಳಗಾವಿ: 02 : ವಿಶ್ವ ಏಡ್ಸ ದಿನಾಚರಣೆ -2019 ರ ಘೋಷಣೆ ಸಮುದಾಯಗಳು ಬದಲಾವಣೆಯನ್ನುಂಟು ಮಾಡುತ್ತವೆ ಎಂಬುದಾಗಿದ್ದು ಈ ಆಚರಣೆಯ ಮುಖ್ಯ ಉದ್ದೇಶ ಹೆಚ್,ಐ,ವಿ ಸೋಂಕಿತರು ಹಾಗೂ ಬಾಧಿತರ ಕಲ್ಯಾಣಕ್ಕಾಗಿ ಶ್ರಮಿಸುವದಾಗಿದೆ ಎಂದು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿದರ್ೇಶಕರಾದ ಡಾ.ಎಸ್.ಟಿ ಕಳಸದ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಶಿಕ್ಷಣ ಇಲಾಖೆ, ಜಿಲ್ಲಾ ಏಡ್ಸ ನಿಯಂತ್ರಣ ಘಟಕ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅವರ ಸಹಯೋಗದಲ್ಲಿ (ಡಿ.2) ವಿಶ್ವ ಏಡ್ಸ್ ದಿನಾಚರಣೆ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್.ಐ.ವಿ ಏಡ್ಸ ರೋಗ ಹರಡುವ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಿಬೇಕಿದ್ದು ಆಪ್ತ ಸಮಾಲೋಚಕರು ಹೆಚ್.ಐ.ವಿ ಸೋಂಕಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕೆಂದರು. ಅದರಂತೆ ಹೆಚ್.ಐ.ವಿ, ಪೀಡಿತರು ಜಿಲ್ಲೆಯಲ್ಲಿರುವ ಎ.ಆರ್.ಟಿ ಕೇಂದ್ರಗಳ ಮೂಲಕ ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹ-ಪ್ರಾದ್ಯಾಪಕರಾದ ಡಾ. ಗಿರಿಧರ ಪಾಟೀಲ ಅವರು ಮಾತನಾಡಿ, 1988 ಡಿಸಂಬರ್ 1 ರಿಂದ ವಿಶ್ವ ಏಡ್ಸ್ ದಿನ ಆಚರಿಸುವದನ್ನು ಪ್ರಾರಂಭಿಸಲಾಯಿತು. ಹೆಚ್.ಐ.ವಿ ಸೋಂಕಿನ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕಾಗಿದೆ. ಸಾರ್ವಜನಿಕರಲ್ಲಿ ಎಚ್.ಐ.ವ್ಹಿ ರೋಗ ಹರಡುವ ಬಗ್ಗೆ ಸಾಕಷ್ಟ ಅಪನಂಬಿಕೆಗಳಿವೆ ಎಂದು ಹೇಳಿದರು.ಹೆಚ್.ಐ.ವಿ, ಏಡ್ಸ ರೋಗ ಮುಖ್ಯವಾಗಿ ನಾಲ್ಕು ಮಾರ್ಗಗಳಿಂದ ಹರಡುತ್ತದೆ ಎಂದರು. ಅವುಗಳೆಂದರೆ ಸೋಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡುವದರಿಂದ, ಸೋಂಕಿತ ರಕ್ತ ಪಡೆಯುವದರಿಂದ, ಸಂಸ್ಕರಿಸದೇ ಇರುವ ಸೂಜಿ ಮತ್ತು ಸಿರಿಂಜಗಳನ್ನು ಬಳಸುವದರಿಂದ ಹಾಗೂ ಸೋಂಕಿತ ತಾಯಿಯಿಂದ ಮಗುವಿಗೆ ಹರಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕರು ಜಿಲ್ಲಾ ಆಸ್ಪತ್ರೆಯ ಡಾ.ಹುಸೇನಸಾಬ ಖಾಜಿ ಅವರು ಮಾತನಡಿ, ಹೆಚ್.ಐ.ವಿ, ಏಡ್ಸ ಜಾಗೃತಿ ಕಾರ್ಯಕ್ರಮಗಳನ್ನು ತಾಲೂಕಾ ಮಟ್ಟ, ಹೋಬಳಿ ಮಟ್ಟ ಗ್ರಾಮ ಹಾಗೂ ಕುಟುಂಬದವರಿಗೆ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿ ಕೇವಲ ಆರೋಗ್ಯ ಇಲಾಖೆಯವರು ಜಾಗೃತಿ ಮೂಡಿಸಿದರೆ ಸಾಲದು ಸಂಘ ಸಂಸ್ಥೆಯವರು ಕೂಡಾ ಸಕ್ರೀಯವಾಗಿ ಭಾಗವಹಿಸಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಬಿಮ್ಸ್ ನರ್ಸಿ ಗ ಕಾಲೇಜ ವಿದ್ಯಾಥರ್ಿನಿಯರು ನಾಡಗೀತೆ ಹಾಡಿದರು. ಡಾ.ಶೈಲಜಾ ತಮ್ಮಣ್ಣವರ ಸ್ವಾಗತಿಸಿದರು, ಬಿ.ಪಿ ಯಲಿಗಾರ ವಂದಿಸಿದರು,. ಸಿ.ಜಿ ಅಗ್ನಿಹೋತ್ರಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಐ.ಪಿ ಗಡಾದ, ಜಿಲ್ಲಾ ಏಡ್ಸ ನಿಯಂತ್ರಣಾಧಿಕಾರಿಗಳಾದ ಡಾ. ಅನೀಲ ಕೊರಬು ಮತ್ತಿತರರು ಉಪಸ್ಥಿತರಿದ್ದರು.