‘ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಮುಂದಾಗಿ’

'Propose to bring BJP back to power in the state'

‘ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಮುಂದಾಗಿ’  

ಮುದ್ದೇಬಿಹಾಳ 27:  ರಾಜ್ಯದಲ್ಲಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಮುಸ್ಲಿಂ ಮತಗಳನ್ನು ಉಳಿಸಿಕೊಳ್ಳಲು ಮುಸ್ಲಿಮರ ಓಲೈಕೆಗಾಗಿ ಶೇಕಡಾ 4 ರಷ್ಟು ಮೀಸಲಾತಿ ನೀಡುವುದರೊಂದಿಗೆ ಅನೇಕ ರೀತಿಯ ಸೌಲಭ್ಯಗಳನ್ನು ನೀಡುವ ಮೂಲಕ ಹಿಂದೂ ವಿರೋಧಿ ಸರಕಾರವಾಗಿದೆ ಮಾತ್ರವಲ್ಲದೇ ಗುಲಾಮರನ್ನಾಗಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಇಂತಹ ಸರಕಾರವನ್ನು ಕಿತ್ತೆಸೆದು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಬಲಿಷ್ಟ ಪಕ್ಷ ಕಟ್ಟುವಲ್ಲಿ ಕಾರ್ಯಕರ್ತರು, ಮುಖಂಡರು ಮುಂದಾಗಬೇಕು ಎಂದು  ನಿಕಟಪೂರ್ವ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಹೇಳಿದರು.  

ವಿಜಯಪುರ ರಸ್ತೆ ಮಾರ್ಗದಲ್ಲಿರುವ ತಮ್ಮ  ಗ್ರಹಕಚೇರಿಯಲ್ಲಿ ಮಾಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಅವರ ನೇತೃತ್ವದಲ್ಲಿ ತಾಲೂಕಾ ಮಂಡಲದದಿಂದ ಸಂಜೆ ಹಮ್ಮಿಕೊಂಡಿದ್ದ ವಿಜಯಪುರ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಗುರುಲಿಂಗಪ್ಪ ಅಂಗಡಿಯವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. 

 ಅತಿಹೆಚ್ಚು ಬಾಜಪದ ಸದಸ್ಯತ್ವವನ್ನು ಮಾಡಿದ ಕೀರ್ತಿ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಸಲ್ಲುತ್ತದೆ. ದೇಶ, ನಾಡು ಕಟ್ಟಬೇಕೆನ್ಬುವ ರೈತರ ಬದುಕಿಗೆ ನ್ಯಾಯ ಒದಗಸುವ ಸಾಮಾಜಿಕ ಕಳಕಳಿಯೊಂದಿಗೆ ಉದ್ದೇಶ ದಿಂದ ನಾವೇಲ್ಲ ರಾಜಕಾರಣಕ್ಕೆ ಪಾದಾರೆ​‍್ಣ ಮಾಡಿರುತ್ತೇವೆ. ಕಾಂಗ್ರೇಸ ಪಕ್ಷ ನಮ್ಮನ್ನು ಗುಲಾಮರನ್ನಾಗಿ ಮಾಡಿದ್ದಾರೆ. ಮುಸ್ಲೀಂರಿಗೆ ಸೇಕಡಾ 4 ರಷ್ಟು ಗುತ್ತಿಗೆದಾರರಿಗೆ ಮೀಸಲಾತಿ ನೀಡಬೇಕು ಎನ್ನುವ ಹಿಂದೂ ವಿರೋಧಿ ನೀತಿಯ ಮಸೂದೆಯನ್ನು ಅಂಗಿಕಾರ ಮಾಡಿದೆ. ಅದರಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರವರು ಮುಸ್ಲಂಗೊಸ್ಕರ ಸಂವಿದಾನವನ್ನೇ ಬದಲಿಸುತ್ತೇವೆ ಎಂದು ಹೇಳಿಕೆ ಕೊಟ್ಟಿರುವುದು ಮುಸ್ಲೀಂ ರ ಓಲೈಕೆ ಉದ್ದೇಶವಿದೆ ಎಂಬುದು ಕಂಡುಬರುತ್ತಿದೆ. ಜೊತೆಗೆ ಮುಸ್ಲಿಂ ಸಮೂದಯದ ಹೆಣ್ಣುಮಕ್ಕಳ ಮದುವೆಗಾಗಿ ಸುಮಾರು 2 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ.ಇದೋಂದು ಸಂಪೂರ್ಣ ವಾಗಿ ಹಿಂದೂ ವಿರೋಧಿ ಪಕ್ಷವಾಗಿದೆ. 

 ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಒಂದಾಗಿದ್ದೇವೆ ನಮ್ಮಲ್ಲಿ ಯಾವೂದೇ ರೀತಿಯ ಭಿನ್ನಾಭಿಪ್ರಾಯ ಗಳಿಲ್ಲ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಬಹಳಷ್ಟು ಜನ ಹಿರಿಯರು ಕಾರ್ಯಕರ್ತರು ಚುರುಮುರಿ ತಿಂದೇ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ  ಕಟ್ಟಿ ಬೆಳೆಸಿದ್ದಾರೆ. ಯಾರಾ​‍್ಯರು ಪಕ್ಷದೊಳಗೆ ಇದ್ದು ಕುತಂತ್ರ ನಡೆಸಿದ್ದಾರೆ ಯಾರು ಪಕ್ಷವನ್ನು ಕಟ್ಟಿ ಬೇಳೆಸಿದ್ದಾರೆ ಎಂಬುದು ರಾಜ್ಯದ ಘಟಕದಲ್ಲಿ ಸಂಪೂರ್ಣ ಮಾಹಿತಿ ಇದೇ ಈ ನಿಟ್ಟಿನಲ್ಲಿ ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತರು ಕೂಡಾ ಪ್ರಮುಖರೇ ನಿಜವಾದ ಕಾರ್ಯಕರ್ತರಿಗೆ ಅತೀ ಶೀಘ್ರದಲ್ಲಿಯೇ ವಿವಿಧ ಸ್ಥಾನಮಾನ ನೀಡಿ ಗೌರವಿಸಲಾಗುವುದು ಎಂದರು. 

 ಸಧ್ಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರವರು ವಿಜಯಪುರ ಭಾಜಪದ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಅಳೆದು ತೂಗಿ ಗುರಲಿಂಗಪ್ಪ ಅಂಗಡಿಯವರನ್ನು ಸೂಕ್ತ ಸಮಯಕ್ಕೆ ಆಯ್ಕೆ ಮಾಡುವ ಮೂಲಕ ಜಿಲ್ಲೆಯಲ್ಲಿ ಸಂಘಟನೆಗೆ ಶಕ್ತಿ ತುಂಬಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಂಟು ಮತಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ ಸಾಧಿಸಲು ಕಾರ್ಯಕರ್ತರು ಮುಖಂಡರು ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಹಿತದೃಷ್ಠಿಯಿಂದ ಪಕ್ಷದ ಬಲವರ್ಧನೆಗಾಗಿ ಯಾರಾ​‍್ಯರು ಸಿಟ್ಟಾಗಿದ್ದಾರೋ, ಮುನಿಸಿಕೊಂಡಿದ್ದಾರೋ ಅವರ ಮನೆಗೆ ತೆರಳಿ ಮನೋಲಿಸಿ ನೂತನ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿಯವರ ನೇತೃತ್ವದಲ್ಲಿ ಮುದ್ದೇಬಿಹಾಳ ಸೇರಿದಂತೆ ಜಿಲ್ಲೆಯಾದ್ಯಂತ ಮುಖಂಡರು ಕಾರ್ಯಕರ್ತರು ಸೇರಿಕೊಂಡು ಬಲಿಷ್ಟ ಪಕ್ಷ ಕಟ್ಟವಲ್ಲಿ ಮುಂದಾಗುತ್ತೇನೆ. ಕಾರ್ಯಕರ್ತರು ಒಗ್ಗಟ್ಟಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು  

ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿಯವರು ಮಾತನಾಡಿ ಎ ಎಸ್ ಪಾಟೀಲ(ನಡಹಳ್ಳಿ)ಯವರು ಸೇರಿದಂತೆ ಜಿಲ್ಲೇಯ ಬಹುತೇಕ ಎಲ್ಲ ಮುಖಂಡರು ನನ್ನ ಜಿಲ್ಲಾಧ್ಯಕ್ಷನನ್ನಾಗಿ ಮಾಡಲು ಶ್ರಮಿಸಿದ್ದಾರೆ ಅವರೇಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ರಾಜ್ಯದಲ್ಲಿಕಾಂಗ್ರೇಸ್ ಸರಕಾರ ಜನವೀರೋಧಿ ಸರಕಾರವಾಗಿದೆ ಈ ನಿಟ್ಟಿನಲ್ಲಿ ಸರಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಮೂಲಕ ಬಿಜೆಪಿ ಪಕ್ಷದ ಶಕ್ತಿ ಹೆಚ್ಚಿಸುವಲ್ಲಿ ಎಲ್ಲರೊಂದಿಗೆ ನಾನು ಸದಾಸಿದ್ಧನಿದ್ದೇನೆ ಎಂದರು.  

ತಾಲೂಕಾ ಬಿಜೆಪಿ ಮುಖಂಡ ರಮೇಶ ಬಿದನೂರ  ಮಾತನಾಡಿ  ಒಬ್ಬ ಯೋಗ್ಯ ಸರಳ ಸಜ್ಜನಕೆ ವ್ಯಕ್ತಿತ್ವದ ಸಮರ್ಥ ನಾಯಕರಾದ ಗುರುಲಿಂಗಪ್ಪ ಅಂಗಡಿಯವರನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಶ್ರಮಿಸಿದ ಕಾರ್ಯ ನಿಜಕ್ಕೂ ಶ್ಲಾಘನಿಯ ಇವರ ಆಯ್ಕೆಯಿಂದಾಗಿ  ಜಿಲ್ಲೆಯ ನಿಜವಾದ ಬಿಜೆಪಿ ಕಾರ್ಯಕರ್ತರಿಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು 

ಮುಖಂಡರಾದ ಎಂ ಎಸ್ ಪಾಟೀಲ, ಮಲಕೇಂದ್ರಾಯಗೌಡ ಪಾಟೀಲ, ಮುನ್ನಾಧಣಿ ನಾಡಗೌಡರ, ಮುತ್ತುಸಾಹುಕಾರ ಅಂಗಡಿ, ಕೆಂಚಪ್ಪ ಬಿರಾದಾರ ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಬಸವರಾಜ ಮುರಾಳ, ಅಶೋಕ ಹೊನ್ನಳ್ಳಿ, ಗೌರಮ್ಮ ಹುನಗುಂದ, ತಾಲೂಕಾ ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಸಿದ್ದರಾಜ ಹೊಳಿ, ಅಶೊಕ ರಾಠೊಡ, ಸಂಜಯ ಬಾಗೇವಾಡಿ, ಪುನಿತ್ ಹಿಪ್ಪರಗಿ ಸೇರಿದಂತೆ ಹಲವರು ಇದ್ದರು.