ಲೋಕದರ್ಶನ ವರದಿ
ಬೆಳಗಾವಿ 15: ಜೀವನದಲ್ಲಿ ನೋವನ್ನುಂಡವನು ಮಾತ್ರ ಚೆನ್ನಾಗಿ ನಗಿಸಬಲ್ಲ. ವಿಶ್ವಖ್ಯಾತಿ ಚಾಲರ್ಿ ಚಾಪ್ಲಿನ್ ಇದಕ್ಕೊಂದ ಒಳ್ಳೆಯ ಉದಾಹರಣೆ. ಇಂದು ದೇಶದಲ್ಲಿ ನಡೆಯುತ್ತಿರುವ ಬ್ರಷ್ಟಾಚಾರ, ರಾಜಕೀಯ ಅವ್ಯವಸ್ಥೆಯನ್ನು ಟಿ.ಪಿ. ಕೈಲಾಸಂ ಅವರ ಅಂದಿನ ನಾಟಕಗಳಲ್ಲಿಯೇ ಚಿತ್ರಣಗೊಂಡಿದೆ. ಗಾಂಧೀಜಿಯವರೂ ಜೀವನದಲ್ಲಿ ಹಾಸ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಮನುಷ್ಯನ ಜೀವನದಲ್ಲಿ ಹಾಸ್ಯ ಮಹತ್ತರ ಸ್ಥಾನವನ್ನು ಪಡೆದುಕೊಂಡಿದೆ ಎಂದು ಎಮ್. ಎಫ್. ಸುಬ್ಬಾಪುರಮಠ ಇಂದಿಲ್ಲಿ ಹೇಳಿದರು.
ನಗರದ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಹನಿಗವನಗಳಲ್ಲಿ ಹಾಸ್ಯ ಎಂಬ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ಸುಬ್ಬಾಪರಮಠ ಮೇಲಿನಂತೆ ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ಎಲ್. ಎಸ್. ಶಾಸ್ತ್ರಿ ಅವರು ಜಾನಪದದಲ್ಲಿ, ಸಂಸ್ಕೃತ ಸುಭಾಷಿತಗಳಲ್ಲಿ ಕೂಡ ಅತ್ಯಂತ ನಗೆಯರಳಿಸುವ ಹನಿಗವನಗಳು ಇವೆ. ಕಣವಿ, ಜರಗನಹಳ್ಳಿ ಶಿವಶಂಕರ, ಎಚ್. ಡುಂಡಿರಾಜ್, ದಿನಕರ ದೇಸಾಯಿ, ಜಿನದತ್ತ ದೇಸಾಯಿ ಬೇರೆ ಬೇರೆ ಕವಿಗಳ ಹನಿಗವಿತೆಗಳನ್ನೋದಿ ತೋರಿದ ಅವರು ಹನಿಗವನವೆಂದರೆ ಶಬ್ಧ ಚಮತ್ಕಾರ. ಹನಿಗವನಗಳಲ್ಲಿ ವ್ಯಂಗ್ಯ, ವಿಡಂಬನೆ, ವಿನೋದವಿರುತ್ತದೆ. ಕೇವಲ ಹಾಸ್ಯವನ್ನೇ ಗುರಿಯನ್ನಾಗಿ ಇಟ್ಟುಕೊಂಡು ಹನಿಗವನ ರಚನೆ ಮಾಡದೇ ಚುರುಕನ್ನು ಮುಟ್ಟಿಸುವಂಥ ಹನಿಗವನ ರಚನೆಯಾಗಲಿ ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕ ಚಾಲನೆ ನೀಡಿದ ಡಾ. ಹೇಮಾ ಸೊನೊಳ್ಳಿ ನಗೆಸುವುದು ತುಂಬ ಕಷ್ಟದ ಕೆಲಸ. ನಗೆಯಿಂದ ನಮ್ಮ ಸುತ್ತ ಮುತ್ತಲಿನ ಪರಿಸರವನ್ನೂ ಆರೋಗ್ಯವಾಗಿ ಇಡಬಹುದೆಂದು. ಹೇಳಿ ಹಾಸ್ಯ ಹನಿಗವನಗಳನೋದಿ ನಗೆಯರಳಿಸಿದರು.
ಕನ್ನಡ ಸಾಹಿತ್ಯ ಭವನ ಗೌರವ ಕಾರ್ಯದಶರ್ಿ ಆರ್. ಬಿ. ಕಟ್ಟಿಯವರು ಕನ್ನಡ ಸಾಹಿತ್ಯಭವನ ವಿಶ್ವಸ್ತ ಮಂಡಳಿ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತ ಬಂದಿದೆ. ವಿಶ್ವಸ್ತ ಮಂಡಳಿಯ ಸಹಯೋಗದೊಂದಿಗೆ ಹಾಸ್ಯಕೂಟ ಪ್ರತಿ ತಿಂಗಳು ಎರಡನೇ ಶನಿವಾರದಂದು ಹಾಸ್ಯಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ನಗರದಲ್ಲೊಂದು ಒಳ್ಳೆಯ ವಾತಾವರಣ ನಿಮರ್ಾಣ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.
ಹಾಸ್ಯಕೂಟ ಕಲಾವಿದರಾದ ಪ್ರೊ. ಜಿ. ಕೆ. ಕುಲಕಣರ್ಿ, ಅಶೋಕ ಮಳಗಲಿ, ಎಂ. ಬಿ .ಹೊಸಳ್ಳಿಯವರ ಮಾತನಾಡಿ ಹಾಸ್ಯ ಹನಿಗವಳೊಂದಿಗೆಯೇ ನವಿರಾದ ಹಾಸ್ಯದೊಂದಿಗೆ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.
ಅರವಿಂದ ಕಡಗದಕೈ, ಎಸ್. ವಿ. ದೀಕ್ಷಿತ, ವಿದ್ಯಾ ಜಾಗಿರದಾರ, ಪಾಂಡುರಂಗ ಮಾರಿಹಾಳಕರ, ಪರಶುರಾಮ ತೆಗ್ಗಿನಮನಿ, ದಾನಮ್ಮಾ ಮುಂತಾದವರು ಹಾಸ್ಯಹನಿಗವನಗಳನ್ನೋದಿ ರಂಜಿಸಿದರು. ಗುಂಡೆನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿ. ಎಸ್. ಸೋನಾರ ನಿರೂಪಿಸಿರು.