ಬೆಳಗಾವಿ: 'ಮನೆ, ಮನ ಕಟ್ಟುವಂತಹ ಧಾರಾವಾಹಿಗಳಿಂದು ಬೇಕಾಗಿದೆ'

ಲೋಕದರ್ಶನ ವರದಿ

ಬೆಳಗಾವಿ 09:  ಇಂದು ದೂರದರ್ಶನಗಳಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗಳನ್ನು ಗಮನಿಸಿದಾಗ ಹೆಣ್ಣು ಕೆಟ್ಟವಳು, ಮನೆಮುರುಕಳೆಂದು ಎಂದು ಬಿಂಬಿಸುತ್ತಿರುವ ಧಾರವಾಹಿಗಳೇ ಇಂದು ಹೆಚ್ಚಾಗಿ ಕಂಡು ಬರುತ್ತಿವೆ. ಇವುಗಳ ಕುರಿತು ಮಹಿಳೆಯರು ವಿಚಾರ ಮಾಡಬೇಕು. ಮನೆಯನ್ನು ಒಂದುಗೂಡಿಸುವ ಧಾರಾವಾಹಿಗಳು ಬೇಕೆ ಹೊರತು ಮನೆ, ಮನಗಳನ್ನು ಮುರಿಯುವಂತಹ ಧಾರಾವಾಹಿಗಳಿಂದೇನು ಪ್ರಯೋಜನವೆಂದು ಚಿತ್ರನಟ ಸಂತೋಷರಾಜ್ ಝಾವರೆ ಇಂದಿಲ್ಲಿ ಹೇಳಿದರು.

ನಗರದ ವರೇರಕರ ಸಭಾಭವನದಲಿ ಸರ್ವ ಮಧುರಂ ಮೆಲೋಡಿಸ್ದವರು ನಿನ್ನೆ ದಿ. 8 ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ  "ಜೊತೆ ಜೊತೆಯಲಿ" ಎಸ್.ಪಿ. ಮಧುರಗೀತೆಗಳ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ನಟ ಸಂತೋಷಕುಮಾರ ಝಾವರೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಮೇಲಿನಂತೆ ಅಭಿಪ್ರಾಯ ಪಟ್ಟರು.

ಕನರ್ಾಟಕದಲ್ಲಿ ಕಲಾವಿದರಿಗೆ  ಅವಕಾಶಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಕಲಾವಿದರು ಗೋವಾ, ಮಹಾರಾಷ್ಟ್ರ ಹೀಗೆ ಹೊರರಾಜ್ಯಗಳಿಗೆ ವಲಸೆ ಹೋಗುತ್ತಲಿದ್ದಾರೆ. ಇಂತಹ ಸಮಯದಲ್ಲಿ ಸರ್ವ ಮಧುರಂ ಮೆಲೋಡಿಸ್ ಅವರು ಹೊಸ ಹೊಸ ಕಲಾವಿದರಿಗೆ ಅವಕಾಶಗಳನ್ನು ಕೊಟ್ಟು  ಪ್ರೋತ್ಸಾಹಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು  ಹೇಳಿದ ಅವರು ಸಧ್ಯದಲ್ಲಿಯೇ ನಾನು ನಾಯಕನಾಗಿ ನಟಿಸಿರುವ ಲಕ್ಷ್ಯ ಚಲನಚಿತ್ರ ಬಿಡುಗಡೆಯಾಗಲಿದ್ದು ತಾವೆಲ್ಲರೂ ಚಿತ್ರಮಂದಿರದಲ್ಲಿ ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಕೇಳಿಕೊಂಡರು.

ಲಕ್ಷ್ಯ ಚಿತ್ರದ ನಿಮರ್ಾಕರಾದ ಮಹಾಂತೇಶ ತಾವಂಶಿಯವರು ಅತಿಥಿಗಳಾಗಿ ಆಗಮಿಸಿದ್ದರು. ಅವರು ಮಾತನಾಡುತ್ತ ಯಾಂತ್ರಿಕ ಬದುಕಿನಲ್ಲಿ ಜನರಿಗೆ ಮನರಂಜನೆ  ಅವಶ್ಯಕತೆಯಿದ್ದು. ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಏಕತಾನತೆಯ ಬದುಕಿನಿಂದ ಹೊರತರುತ್ತಿರುವ ಸರ್ವ ಮಧುರಂ ಮೆಲೋಡಿಸ್ದವರ ಕಾರ್ಯವನ್ನು ಕೊಂಡಾಡಿದ ಅವರು ನನ್ನ ನಿಮರ್ಾಣದಲ್ಲಿ ಹೊರ ಬರುತ್ತಿರುವ ಲಕ್ಷ್ಯ ಚಿತ್ರ ಸಮಾಜಕ್ಕೆ  ಒಳ್ಳೆಯ ಸಂದೇಶ ನೀಡುವಂಥ ಚಿತ್ರವಾಗಿದ್ದು ನೀವೆಲ್ಲ  ಆ ಚಿತ್ರವನ್ನು ನೋಡಿ  ಹರಿಸಬೇಕೆಂದು ಎಂದು ಕೇಳಿಕೊಂಡರು.

ಸರ್ವ ಮಧುರಂ ಮೆಲೋಡಿಸ್ದ ಸಂಚಾಲಕಿ ಶ್ರೀಮತಿ ಶಾಂತಾ ಆಚಾರ್ಯ ಅವರು ಮಾತನಾಡಿ ನಮ್ಮ ಸಂಸ್ಥೆಯಿಂದ  ನಟಸಾರ್ವಭೌಮ ಡಾ. ರಾಜಕುಮಾರ ಹಾಗೂ ಸಾಹಸಸಿಂಹ ಡಾ. ವಿಷ್ಣುವರ್ಧನ ಹೀಗೆ ಮೇರು ನಟರ ಹಾಡು, ನೃತ್ಯಗಳೊಂದಿಗೆ ಕಲಾವಿದರನ್ನು ಪ್ರೋತ್ಸಾಹಿಸುತ್ತ ಬಂದಿದ್ದೇವೆ. ಈಗ ಎಸ್.ಪಿ. ಹಾಡುಗಳನ್ನು ಮೆಲಕು ಹಾಕುವುದಾಯಿತು.  ಇನ್ನು  ಮುಂದೆ ಚಿತ್ರರಂಗಕ್ಕೆ ಮೌಲ್ಯಯುತ ಸಾಹಿತ್ಯವನ್ನು ನೀಡಿರುವ  ಕವಿ ಜಯಂತ ಕಾಯ್ಕಿಣಿಯವರ ಹಾಡುಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವವರಿದ್ದೇವೆ. ಜಯುಂತ ಕಾಯ್ಕಿಣಿಯವರು  ಬರುವವರಿದ್ದಾರೆ. ಗಡಿನಾಡಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಣ ಮಾಡುವ ಪ್ರಯತ್ನ ನಮ್ಮ ಸಂಸ್ಥೆಯದು ಇಂಥ ಕಾರ್ಯಕ್ರಮಗಳಿಗೆ ತಮ್ಮೆಲ್ಲರ ಸಹಾಯ ಸಹಕಾರ ಅತ್ಯವಶ್ಯವಾಗಿದೆ ಎಂದು ಹೇಳಿದರು.

ಜನಪ್ರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಂ ಅವರು ಹಾಡಿರುವ ಕನ್ನಡ,  ಹಿಂದಿ ಚಿತ್ರಗಳಲ್ಲಿಯ ಹಾಡುಗಳನ್ನು ತಮ್ಮ ಸುಶ್ರಾವ್ಯ ಕಂಠದಲ್ಲಿ ಪ್ರಸ್ತುತ ಪಡಿಸಿದರು. 'ಎಲ್ಲಿರುವೆ ಮನವ ಕಾಡುವ ರೂಪಸಿಯೆ..'(ಬಯಲುದಾರಿ), 'ಜೊತೆಯಾಗಿ ಹಿತವಾಗಿ..'(ರಥಸಪ್ತಮಿ), 'ಒಂದೇ ಒಂದು ಆಸೆಯು..'(ಸೀತಾರಾಮು), 'ಮೇರೆ ಜೀವನ ಸಾಥಿ..'(ಏಕ ಧುಜೆ ಕೆ ಲಿಯೆ),  'ಪ್ರೇಮದಾ ಕಾದಂಬರಿ..'(ಬಂಧನ) ಮುಂತಾದ ಪ್ರೇಮ ಗೀತೆಗಳನ್ನು ಹಾಡಿದರೆ. ಸಂಗೀತ ಪ್ರಧಾನವಾದ 'ಓಂಕಾರ ನಾದವನು...' (ಶಂಕರಾಭರಣ) ಚಿತ್ರದ ಹಾಡು ಅಲ್ಲದೇ 'ಕರುನಾಡ ತಾಯಿ ಸದಾ ಚಿನ್ಮಯಿ...'(ತಿರುಗುಬಾಣ), 'ಕನ್ನಡ ನಾಡಿನ ಜೀವನದಿ ಕಾವೇರಿ..'(ಜೀವನದಿ)ಮುಂತಾದ ಕನ್ನಡ ನಾಡು ನುಡಿ ಕುರಿತಾದ ಹಾಡುಗಳನ್ನು ಶಾಂತಾ ಆಚಾರ್ಯ, ವಿಶ್ವ ದೇಸಾಯಿ, ಪ್ರಸಾದ ಪುಣೆಕರ, ಶ್ರುತಿ ಕಾಮತ, ಶುಭಾಂಗಿ ಕಾರೇಕರ, ಸುರೇಶ ಪಾಟೀಲ, ಸಂತೋಷ ಕಲಾವಿದರು ಹಾಡಿ ರಂಜಿಸಿದರು.

ರೋಜಾ  ಚಿತ್ರದ 'ಏ ಹಸಿ ವಾದಿಂಯಾ...'  ಹಾಡನ್ನು ಶುಭಾಂಗಿ ಕಾರೇಕರ  ಮತ್ತು ವಿಶ್ವ ದೇಸಾಯಿ ತಮ್ಮ ಮಧುರ ಕಂಠದ ಹಾಡಿಗೆ ಶಿವಲೀಲಾ ಹಾಗು ತಂಡದವರು  ಮಾಡಿದ ನೃತ್ಯ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.   ತುಂಬ ಕಷ್ಟಕರವಾದ ಸಾಹಸ  ನೃತ್ಯವನ್ನು ಮಕ್ಕಳು ನಗು ನಗುತ್ತ ಮಾಡಿದರೂ  ಪ್ರೇಕ್ಷಕರು ಮಾತ್ರ ಉಸಿರು ಬಿಗಿ ಹಿಡಿದು ನೋಡಿದರು. ಚಪ್ಪಾಳೆಯ ಸುರಿಮಳೆಯಾಯಿತು. ವಡವಿ ದಂಪತಿಗಳು ನಿರೂಪಿಸಿದರು.