ಲೋಕದರ್ಶನ ವರದಿ
ಗೋಕಾಕ 17: ಗ್ರಾಮೀಣ ವಲಯದಲ್ಲಿ ಸಹಕಾರಿ ಸಂಘ-ಸಂಸ್ಥೆಗಳ ಪ್ರಗತಿಗೆ ಸ್ಥಳೀಯರ ಸಹಕಾರ ಅವಶ್ಯಕವಾಗಿದೆ ಎಂದು ಕಟಕೋಳದ ಅಭಿನವ ಸಿದ್ರಾಯಜ್ಜನವರು ಹೇಳಿದರು.
ಗ್ರಾಮದ ಕುರಬೇಟ ಅವರ ಕಟ್ಟಡದಲ್ಲಿ ಸೋಮವಾರ ಡಿ.16ರಂದು ನಡೆದ ಕಟಕೋಳ ಸಿದ್ರಾಯಜ್ಜನವರ ಸೌಹಾರ್ದ ಸಹಕಾರಿಯ ನೂತನ ಶಾಖೆಯ ಉದ್ಘಾಟನೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಸಹಕಾರಿ ಸಂಘ-ಸಂಸ್ಥೆಗಳು ಹಳ್ಳಿಯ ಜನರ ಜೀವಾಳವಾಗಿವೆ ಎಂದರು.
ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ ಅವರು ಮಹಾಲಕ್ಷೀ ಮತ್ತು ಸರಸ್ವತಿ ಮಹಾಪೂಜೆ ನೆರವೇರಿಸಿದರು. ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ, ಯರಗಟ್ಟಿ ಗಣಪತಿ ಮಹಾರಾಜರು, ತಪಸಿ ಸುರೇಶ ಮಹಾರಾಜರು, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಹನುಮಂತ ವಡೇರ ಸಮಾರಂಭದ ಸಮ್ಮುಖ ವಹಿಸಿದ್ದರು.
ಇಲ್ಲಿಯ ನೂತನ ಶಾಖೆಯಲ್ಲಿ ಠೇವಣಿ, ಎಸ್ಬಿ ಖಾತೆದಾರ ಗ್ರಾಹಕರಿಗೆ ಪ್ರಮಾಣ ಪತ್ರ, ಪಾಸ್ ಬುಕ್ಕ್ ವಿತರಿಸಲಾಯಿತು. ಹರಗುರು ಚರಮೂತರ್ಿ, ಗಣ್ಯರನ್ನು ಈ ವೇಳೆ ಸಹಕಾರಿಯ ವತಿಯಿಂದ ಸತ್ಕರಿಸಲಾಯಿತು.
ಬಸವರಾಜ ಕುರಬೇಟ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಲಕ್ಷ್ಮಣ ಸೋಮಗೌಡ್ರ, ವೀರಭದ್ರ ನೀಲಣ್ಣವರ, ಚಂದ್ರಶೇಖರ ಹೂಗಾರ, ಮಹಾದೇವ ಹೊರಟ್ಟಿ, ಸುರೇಶ ವಡೇರ, ವಿರುಪಾಕ್ಷಯ್ಯ ಮಠಪತಿ, ವಿಠಲ ಕೋಣಿ, ರಮೇಶ ಹಾಲಣ್ಣವರ, ಸುರೇಶ ಮಠದ, ಪ್ರಧಾನ ಕಛೇರಿ ವ್ಯವಸ್ಥಾಪಕ ಚಿದಂಬರ ಕದಮ, ಶಾಖೆಯ ಮುಖ್ಯ ಕಾರ್ಯನಿವರ್ಾಹಕ ಸಂಭಾಜಿ ಕದಮ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಶರಣರು, ಯರಗಟ್ಟಿ ಪ್ರಧಾನ ಕಛೇರಿಯ ಆಡಳಿತ ಮಂಡಳಿ ಅಧ್ಯಕ್ಷ, ಸದಸ್ಯರು, ಪದಾಧಿಕಾರಿಗಳು, ಶಾಖೆಯ ಸಲಹಾ ಸಮಿತಿ ಸದಸ್ಯರು, ಗ್ರಾಮಸ್ಥರು, ಇತರರು ಇದ್ದರು.