ಇಂದು ‘ಮೊಬೈಲ್ ಮಾವ’ ನಗೆ ನಾಟಕ ಪ್ರದರ್ಶನ
ಧಾರವಾಡ .12: ನಗರದ ‘ಸೃಜನಾ’ ಡಾ. ಅಣ್ಣಾಜಿರಾವ ಸಿರೂರ ರಂಗಮಂದಿರದಲ್ಲಿ ಇಂದು (13ನೇ ಜನೆವರಿ, 2025 ಸೋಮವಾರ) ಆಯೋಜಿಸಿರುವ, ಆಕಾಶವಾಣಿ ಧಾರವಾಡ ಕೇಂದ್ರದ ಅಮೃತ ಮಹೋತ್ಸವದ ಪ್ರಧಾನ ವೇದಿಕೆ ಕಾರ್ಯಕ್ರಮದಲ್ಲಿ, ಸಂಜೆ 7.30ರ ಬಳಿಕ, ಹಾಸ್ಯ ನಾಟಕ ರಂಗದ ಮೇಲೆ ಪ್ರಸ್ತುತ ಪಡಿಸಲಾಗುತ್ತಿದೆ.
ಹುಬ್ಬಳ್ಳಿಯ ಡಾ.ಗೋವಿಂದ ಮಣ್ಣೂರ ರಚಿಸಿದ ನಗೆ ನಾಟಕ ‘ಮೊಬೈಲ್ ಮಾವ’ ಆಕಾಶವಾಣಿಯ ಹಿರಿಯ ಉದ್ಘೋಷಕಿ ಸುರೇಖಾ ಸುರೇಶ ನಿರ್ದೇಶನದಲ್ಲಿ, ಪ್ರದರ್ಶನಗೊಳ್ಳಲಿದೆ.
ಆಕಾಶವಾಣಿಯ ಉನ್ನತ ಶ್ರೇಣಿ ನಾಟಕ ಕಲಾವಿದರಾದ ಡಾ.ಚೇತನ್ ನಾಯಕ, ಡಾ.ಶಶಿಧರ ನರೇಂದ್ರ, ರವಿ ಕುಲಕರ್ಣಿ, ಅನಂತ ದೇಶಪಾಂಡೆ, ವೀರಣ್ಣ ಪತ್ತಾರ, ನವೀನ ಮಹಾಲೆ, ಆರತಿ ದೇವಶಿಖಾಮಣಿ ಹಾಗೂ ಸನ್ಮತಿ ಅಂಗಡಿ ವಿವಿಧ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.
ರವಿ ರಸಾಳಕರ ನಾಟಕಕ್ಕೆ ಸಂಗೀತ ಸಂಯೋಜಿಸಲಿದ್ದು, ಸಂತೋಷ ಗಜಾನನ ಮಹಾಲೆ ಪ್ರಸಾದನ ಹಾಗೂ ಬೆಳಕಿನ ವ್ಯವಸ್ಥೆ ವಿಜಯೀಂದ್ರ ಅರ್ಚಕ್ ನಿರ್ವಹಿಸಲಿದ್ದಾರೆ.