‘ಮಿತಸಮಯ’ ಮಹಿಳಾ ಕಥಾ ಸಂಚಯಕೃತಿ ಬಿಡುಗಡೆ ಕಾರ್ಯಕ್ರಮ

‘ಮಿತಸಮಯ’ ಮಹಿಳಾ ಕಥಾ ಸಂಚಯಕೃತಿ ಬಿಡುಗಡೆ ಕಾರ್ಯಕ್ರಮ 'Mitasamaya' women's story anthology release program

        ಧಾರವಾಡ 07 :  ಇಂದಿನ ಯಾಂತ್ರಿಕ ಜೀವನದಲ್ಲಿ ದೀರ್ಘವಾದ ಕಥೆಗಳನ್ನು ಓದುವ ವ್ಯವದಾನ ಯಾರಲ್ಲೂ ಇಲ್ಲ. ಮಿತ ಸಮಯದಲ್ಲಿ ಹೇಳುವ ಕಥೆಗಳೇ ಹೆಚ್ಚು ಜನಪ್ರಿಯವಾದವುಗಳಾಗಿವೆ ಎಂದು ಉಪನ್ಯಾಸಕರಾದ ಡಾ. ಶ್ರೀಧರ ಹೆಗಡೆ ಭದ್ರನ್ ಅಭಿಪ್ರಾಯಪಟ್ಟರು. ಅವರು ಕ.ವಿ.ವಿ. ಸಂಘವು ಪ್ರಕಟಿಸಿದ ಡಾ.ಬಸವರಾಜ ಸಾದರ ಅವರ ಸಂಪಾದನೆಯ ‘ಮಿತಸಮಯ’ ಮಹಿಳಾ ಕಥಾ ಸಂಚಯಕೃತಿ ಬಿಡುಗಡೆ ಕಾರ್ಯಕ್ರಮಲ್ಲಿ ಕೃತಿ ಕುರಿತು ಮಾತನಾಡಿದರು. 

ಈ ಕಥಾ ಸಂಕಲನದಲ್ಲಿ ಹತ್ತು ಜನಕಥೆಗಾರ್ತಿಯರ ಮಿತ ಸಮಯದಲ್ಲಿ ಓದಿದ ಮತು ಬರೆಯಲ್ಪಟ್ಟ ಕಥೆಗಳು ವಿಭಿನ್ನ ಶೈಲಿಯಲ್ಲಿ ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ, ಸಾಮಾಜಿಕ ಸನ್ನಿವೇಶಗಳನ್ನು ಸೆರೆ ಹಿಡಿದು ಸಮಕಾಲೀನ ಸಂದರ್ಭಕ್ಕೆ ಕೈಗನ್ನಡಿಗಳಾಗಿವೆ. ಈ 10 ಕಥೆಗಳಲ್ಲಿ ಬಳಸಿದ ಭಾಷೆ, ನಿರೂಪಣಾ ಶೈಲಿ, ತಂತ್ರಗಾರಿಕೆ ಮನೋಜ್ಞವಾಗಿದೆ. ಎಲ್ಲಾ ಹತ್ತು ಕಥೆಗಳು ಓದುಗರಲ್ಲಿ ಕುತೂಹಲ ಮೂಡಿಸುತ್ತಿವೆ. ಇಲ್ಲಿಕಥೆ ಬರೆಯುವುವರೇ ಕಥೆ ಓದುವುದೇ ಒಂದು ವಿಶಿಷ್ಟತೆ ಇದೆ.ಡಾ. ಬಸವರಾಜ ಸಾದರ ಅವರ ಹೊಸ ಪ್ರಯತ್ನಕ್ಕೆ ಕ.ವಿ.ವ. ಸಂಘದ ಪ್ರೋತ್ಸಾಹ ಮಹತ್ವದ್ದು ಎಂದು ಹೇಳಿದರು. 

ಕೃತಿ ಲೋಕಾರೆ​‍್ಣ ಮಾಡಿದ ಡಾ. ಶಾಂತಾ ಇಮ್ರಾಪೂರ ಮಾತನಾಡಿ, ಕನ್ನಡದಲ್ಲಿ ಕಥೆ ಬರೆಯುವಿಕೆಗೆ ಒಂದು ನೂರು ವರ್ಷಗಳ ಇತಿಹಾಸವಿದೆ. 50ರ ದಶಕದಲ್ಲಿ ಮಹಿಳೆಯರು ಕೌಟುಂಬಿಕ ಚೌಕಟ್ಟಿನಲ್ಲಿ ಅವರು ಕುಟುಂಬ ಜೀವನದಲ್ಲಿ ಪಟ್ಟ ಪಾಡುಗಳೇ ಮಿತ ಕಥೆಗಳಾಗಿ ರೂಪಗೊಂಡಿದ್ದವು. ನಂತರ ಬಂದ ಕಥೆಗಳು ಪ್ರಗತೀಶೀಲ ನೆಲೆಗಟ್ಟಿನಲ್ಲಿ ರಚನೆಯಾದವು. ತದನಂತರ ಬಂದ ಕಥೆಗಳು ಹೊಸ ಪ್ರಪಂಚಕ್ಕೆ  ತೆರೆದುಕೊಳ್ಳುವಂತೆ ಮೂಡಿ ಬಂದಿವೆ. ಈ ದೆಸೆಯಲ್ಲಿ ವೀಣಾ ಶಾಂತೇಶ್ವರರಿಂದ ರಚನೆಯಾದ ಕಥೆಗಳು ವೈಚಾರಿಕತೆಯಿಂದ ರಚನೆಯಾದದ್ದು ಕಾಣಬಹುದು. ಹತ್ತು ಜನರ ಕಥೆಗಳು ಮಿತಸಮಯದಲ್ಲಿ ಬರೆದವು ಓದುಗರಲ್ಲಿ ಖಂಡಿತಾ ಕುತೂಹಲ ಮೂಡಿಸುತ್ತವೆ ಎಂದು ಹೇಳಿದರು.  

ಕ.ವಿ.ವ. ಸಂಘದ ಗೌರವ ಉಪಾಧ್ಯಕ್ಷರಾದ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಸವರಾಜ ಸಾದರ ಅವರದು ಸೃಜನಶೀಲ ಮನಸ್ಸು. ಇಂದು ಮಹಿಳೆಯರು ಮಿತಸಮಯದ ಕಥೆಗಳನ್ನು ವಿಭಿನ್ನ ಶೈಲಿಯಲ್ಲಿ ಬರೆಯುತ್ತಿರುವುದು ಶ್ಲಾಘನೀಯ. ಮಹಿಳೆಯರ ಕಥೆಗಳೆಂದರೆ ಕೇವಲ ಅಡುಗೆ ಮನೆ ಸಾಹಿತ್ಯ ಎಂದು ಪರಿಗಣಿಸದೆ ಮೌಲಿಕ ದೃಷ್ಟಿಯಿಂದ ನೋಡಬೇಕು. ಸಾಹಿತ್ಯವನ್ನು ಮಹಿಳಾ ಸಾಹಿತ್ಯ, ಪುರುಷ ಸಾಹಿತ್ಯಎಂದು ಪ್ರತ್ಯೇಕಿಸಿ ನೋಡುವುದು ಸರಿಯಲ್ಲ. ಈ ಎಲ್ಲಾ ಕಥೆಗಳು ಯಾವ ಕಾದಂಬರಿಗೂ ಕಡಿಮೆ ಇಲ್ಲ ಎಂದು ಹೇಳಿದರು. 

ಡಾ. ಬಸವರಾಜ ಸಾದರ ತಮ್ಮತಾಯಿಯ ಸ್ಮರಣೆಯ ಈ ಮಿತಸಮಯ ಮಹಿಳಾ ಕಥಾ ಸಂಚಯಕುರಿತು ಮಾತನಾಡಿದರು.ಸತೀಶತುರಮರಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿ, ವಂದಿಸಿದರು.ಪ್ರಿ. ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ.ತೇಜಸ್ವಿ ಕಟ್ಟೀಮನಿ, ಡಾ.ಕೆ.ಆರ್‌.ದುರ್ಗಾದಾಸ, ಡಾ.ಮೃತ್ಯುಂಜಯ ಶೆಟ್ಟರ, ಡಾ.ಪ್ರಕಾಶ ಭಟ್, ಡಾ.ಚಿದಾನಂದ ಮಾಸನಕಟ್ಟಿ, ಜಿ.ಎ. ತಿಗಡಿ, ಪ್ರಕಾಶ ಮಲ್ಲಿಗವಾಡ, ಶಿವಾನಂದ ಅಮರಶೆಟ್ಟಿ, ಪಂಕಜಾದೇವಮಾನೆ, ಪ್ರಕಾಶಕಡಮೆ, ಚೇತನ ನಾಯಕ, ನಿರ್ಮಲಾ ಶೆಟ್ಟರ, ಡಾ. ಪ್ರಜ್ಞಾ ಮತ್ತಿಹಳ್ಳಿ, ನಿಂಗಪ್ಪ ಮಾಯಕೊಂಡ ಸೇರಿದಂತೆ ಮುಂತಾದವರಿದ್ದರು.