'ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ರಾಷ್ಟ್ರಕ್ಕೆ ಮಾದರಿ'

ಲೋಕದರ್ಶನ ವರದಿ

ಶಿರಹಟ್ಟಿ 12: ಭಾರತ ದೇಶದಲ್ಲಿ ಆಧ್ಯಾತ್ಮ, ಯೋಗ ಹಾಗೂ ಕೌಟುಂಬಿಕ ವ್ಯವಸ್ಥೆಯ ನೆಲೆಗಟ್ಟು ಈಗಲೂ ಭದ್ರವಾಗಿ ಉಳಿದಿರುವ ಕಾರಣ ಮುಂದುವರೆದ ರಾಷ್ಟ್ರಗಳು ಇಂದಿಗೂ ಭಾರತದ ಇಂತಹ ವ್ಯವಸ್ಥೆಯತ್ತ ಮುಖ ಮಾಡುತ್ತಿವೆ ಎಂದು ಬೆಳ್ಳಟ್ಟಿ ರಾಮಲಿಂಗೇಶ್ವರ ಮಠದ ಬಸವರಾಜ ಮಹಾಸ್ವಾಮಿಗಳು ಹೇಳಿದರು.

ಅವರು ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ 596ನೇ ಜನ್ಮ ದಿನೋತ್ಸವ ನಿಮಿತ್ತವಾಗಿ ರೆಡ್ಡಿ ಸಮುದಾಯ ಹಾಗೂ ಗ್ರಾಮಸ್ಥರೆಲ್ಲರು ಸೇರಿ ಅದ್ದೂರಿಯಾಗಿ ಆಯೋಜಿಸಲಾಗಿದ್ದ ಮಲ್ಲಮ್ಮನವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದಲ್ಲಿ ಒಬ್ಬ ಹೆಣ್ಣುಮಗಳು ಎಲ್ಲ ರೀತಿಯ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ದಿಟ್ಟತನ ಏಕಾಗ್ರತೆಯಿಂದಾ ಶ್ರೀಶೈಲ ಮಲ್ಲಿಕಾಜರ್ುನನನ್ನು ಒಲಿಸಿಕೊಂಡು ಸಾತ್ವಿಕತೆಯ ಶಿಖರವನ್ನೇರಿ ಹೆಣ್ಣು ಮಗಳಲ್ಲಿರುವ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾ ಮಾತೆಯಾಗಿದ್ದಾಳೆ, ಮಹಿಳಾ ಸಮಾಜಕ್ಕೆ ಅತ್ಯಂತ ಮಾದರಿಯಾಗಿದ್ದಾಳೆ, ದಾಂಪತ್ಯ ಮೌಲ್ಯಗಳು ಅಪಮೌಲ್ಯಗೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಮಹಾಸಾದ್ವಿ ಮಲ್ಲಮ್ಮನವರ ಜೀವನ ಆದರ್ಶವಾಗಿದೆ ಎಂದು ಹೇಳಿದರು.

ನಂತರ ಮಾತನಾಡಿದ ಬೆಳ್ಳಟ್ಟಿ ಗ್ರಾಮ ಪಂಚಾಯತಿ ಸದಸ್ಯ ತಿಮ್ಮರಡ್ಡಿ ಮರಡ್ಡಿ, ಹೇಮರಡ್ಡಿ ಮಲ್ಲಮ್ಮನವರು ಕುಟುಂಬವನ್ನು ಸಾತ್ವಿಕವನ್ನಾಗಿಸಿದವರು. ಭಾರತ ದೇಶದಲ್ಲಿ ಹೆಣ್ಣಿಗೆ ವಿಶೇಷ ಗೌರವ ಸ್ಥಾನಮಾನ ನೀಡಲಾಗುತ್ತಿದೆ. ಸರಕಾರ ಈಗಾಗಲೆ ಧಾರವಾಡದ ಕನರ್ಾಟಕ ವಿವಿಯಲ್ಲಿ ವೇಮನ ಹಾಗೂ ಕಲಬುಗರ್ಿ ವಿವಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಅವರ ಕುರಿತ ಅಧ್ಯಯನ ಪೀಠ ಸ್ಥಾಪಿಸಲಾಗಿದೆ. ಹೇಮರಡ್ಡಿ ಮಲ್ಲಮ್ಮ ನವರ ಜೀವನ ಮೌಲ್ಯಗಳು ಇತರರಿಗೆ ಮಾದರಿಯಾಗಲಿ ಎಂದು ಹೇಳಿದರು.

ತಿಮ್ಮರೆಡ್ಡಿ ಅಳವಂಡಿ, ಶಿವಪ್ರಕಾಶ ಮಹಾಜನಶೆಟ್ಟರ, ಶಿವನಗೌಡ ಪಾಟೀಲ್, ಗಿರೀಶ ಮೇಕಳಿ, ರಮೇಶ ಮರಡ್ಡಿ, ಕೊಟ್ರೇಶ ಸಜ್ಜನರ, ಮೋಹನ ಗುತ್ತೆಮ್ಮನವರ, ಮಹೇಶ ಬಡ್ನಿ, ನವೀನ ಬಸವರೆಡ್ಡಿ, ವಿಜಯ ಮೇಕಳಿ, ದೇವರೆಡ್ಡಿ ಅಳವಂಡಿ, ವಾಸರೆಡ್ಡಿ ಬಸವರೆಡ್ಡಿ ನವೀನ ಬಸವರೆಡ್ಡಿ, ಕೆಂಚರೆಡ್ಡಿ ಅಳವಂಡಿ, ರಮೇಶ ನಿವರ್ಾಣಶೆಟ್ಟರ, ವಿನಾಯಕ ಅಳವಂಡಿ, ಸುರೇಶ ಬಡವರೆಡ್ಡಿ, ಕಾಂತೇಶ ಅಳವಂಡಿ, ಹನುಮರಡ್ಡಿ ಭರಮರೆಡ್ಡಿ, ಫಕ್ಕಿರೆಡ್ಡಿ ಬಸವರೆಡ್ಡಿ, ಅಪ್ಪಣ್ಣ ಮೇಕಳಿ, ವಸರೆಡ್ಡಿ ಬ್ಯಾಲಹುಣಸಿ, ಅನಂತರೆಡ್ಡಿ ಬ್ಯಾಲಹುಣಸಿ, ಸಂಜೀವ ಮೇಕಳಿ, ಮುಂತಾದವರು ಇದ್ದರು.