ತಬಲಾ ಕಲಾವಿದ ಶ್ರೀಧರ ಮಾಂಡ್ರೆ ಅವರಿಗೆ ‘ಕಲಾ ಉಪಾಸಕ ಪ್ರಶಸ್ತಿ-2025’ ಪ್ರದಾನ
ಧಾರವಾಡ 19 : ಗಜಾನನ ಮಹಾಲೆ ತಮ್ಮ ಮುಗ್ಧ ಹಾಗೂ ನಿರಾಡಂಬರ ಮನಸ್ಸಿನಿಂದಲೇ ಕಲಾ ರಸಿಕರ ಹೃದಯ ಗೆದ್ದ ಪ್ರಸಾದನ ಕಲೆಯ ಹಿರಿಯ ಚೇತನ. ಪ್ರಸಾದನ ಕಲೆಯೇ ಅವರ ಜೀವನದ ಉಸಿರಾಗಿತ್ತು ಎಂದು ಪದ್ಮಶ್ರೀ ಪುರಸ್ಕೃತರಾದ ಪಂಡಿತ ಎಂ. ವೆಂಕಟೇಶಕುಮಾರ ಅಭಿಪ್ರಾಯ ಪಟ್ಟರುಅವರು ನಗರದ ಕವಿವ ಸಂಘದಲ್ಲಿ ಧಾರವಾಡದ ದಿ.ಗಜಾನನ ಮಹಾಲೆ ಕಲಾ ಪ್ರತಿಷ್ಠಾನವು ಅವರ93 ಜನ್ಮದಿನದ ಪ್ರಯುಕ್ತ ಖ್ಯಾತ ತಬಲಾ ಕಲಾವಿದ ಶ್ರೀಧರ ಮಾಂಡ್ರೆ ಅವರಿಗೆ ‘ಕಲಾ ಉಪಾಸಕ ಪ್ರಶಸ್ತಿ-2025’ ಪ್ರದಾನ ಮಾಡಿ ಮಾತನಾಡಿದರು.ದಿ. ಗಜಾನನ ಮಹಾಲೆ ಕೇವಲ ಪ್ರಸಾದನ ಕ್ಷೇತ್ರದ ಸಾಧಕರು ಮಾತ್ರವಲ್ಲ ಸಕಲಕಲಾ ಪ್ರಕಾರಗಳ ಸಂಗಮವಾಗಿದ್ದರು.ಅವರು ಜೀವನದಲ್ಲಿಎಷ್ಟೇ ಸಾಧನೆ ಮಾಡಿದರೂ ಮೂಲ ಸ್ವಭಾವದಲ್ಲಿಯಾವುದೇ ಬದಲಾವಣೆ ಆಗಿರಲಿಲ್ಲ. ತಮ್ಮ ಕುಲಕಸಬು ಕ್ಷೌರಿಕ ವೃತ್ತಿಯನ್ನು ಸಹ ಬದ್ಧತೆ, ಪ್ರಾಮಾಣಿಕತೆ ಹಾಗೂ ಕಾರ್ಯತತ್ವರತೆಯಿಂದ ಮಾಡಿದವರಾಗಿದ್ದರು.ತಾವು ಮಾಡಿದಕಾರ್ಯಕ್ಕೆ ಕೊಟ್ಟಷ್ಟರಲ್ಲಿಯೇ ತೃಪ್ತಿ ಪಡುವದೊಡ್ಡಗುಣ ಅವರಲ್ಲಿತ್ತು.ಅವರೊಬ್ಬ ಶುದ್ಧ ಹಸ್ತರು, ಸಿದ್ದ ಹಸ್ತರು ಹೌದು.ಆಯಾ ಪಾತ್ರಗಳಿಗನುಗುಣವಾಗಿ ಪಾತ್ರಧಾರಿಗಳಿಗೆ ಪ್ರಸಾದನದ ಮೂಲಕ ಜೀವತುಂಬುತ್ತಿದ್ದರು.ಅವರ ಸ್ಮರಣೀಯಕಾರ್ಯಕ್ರಮಕ್ಕೆತಮ್ಮ ಸಹಾಯ ಸದಾಕಾಲವಿರಲಿದೆಎಂದರು. ಅಧ್ಯಕ್ಷತೆ ವಹಿಸಿದ್ದ ದಿ.ಗಜಾನನ ಮಹಾಲೆಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಬಾಳಣ್ಣ ಶೀಗೀಹಳ್ಳಿ ಮಾತನಾಡಿಗಜಾನನ ಮಹಾಲೆ ಕುಟುಂಬ ವತ್ಸಲರು.ಅವರಲ್ಲಿ ಪ್ರಬುದ್ಧವಾದ ಪ್ರಸಾದನಕೌಶಲ್ಯವಿತ್ತು. ಅವರಿಂದ ಸಹಾಯ ಪಡೆದವರೆಷ್ಟೊ ಜನ,ಆದರೆ ಇಂಥ ಕಾರ್ಯಕ್ರಮಕ್ಕೆ ಪಾಲ್ಗೊಳ್ಳದಿರುವುದು ವಿಷಾಧನೀಯಎಂದು ಹೇಳಿದರು ಕಲಾ ಉಪಾಸಕ ಪ್ರಶಸ್ತಿ ಪುರಸ್ಕೃತರಾದಖ್ಯಾತತಬಲವಾದಕಶ್ರೀಧರ ಮಾಂಡ್ರೆ ಮಾತನಾಡಿ, ಪ್ರಸಾದನ ಕಲಾವಿದರ ಹೆಸರಿನಿಂದ ಕೊಡಮಾಡುವ ಈ ಪ್ರಶಸ್ತಿ ನನ್ನಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.ವೇದಿಕೆಯಲ್ಲಿಗಜಾನನ ಮಹಾಲೆಪುತ್ರಿಅಪೂರ್ವ ಮಹಾಲೆಇದ್ದರು.ಗಜಾನನ ಮಹಾಲೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಗಜಾನನ ಮಹಾಲೆ ಕಲಾ ಪ್ರತಿಷ್ಠಾನದ ಕೋಶಾಧ್ಯಕ್ಷ ಕೆ.ಎಚ್.ನಾಯಕ ಸ್ವಾಗತಿಸಿದರು, ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಗಜಾನನ ಮಹಾಲೆ ಕಲಾ ಪ್ರತಿಷ್ಠಾನದ ಉಪಾಧ್ಯಕ್ಷ ಶಂಕರ ಕುಂಬಿ ನಿರೂಪಿಸಿದರು,ಗಜಾನನ ಮಹಾಲೆ ಕಲಾ ಪ್ರತಿಷ್ಠಾನದಕಾರ್ಯದರ್ಶಿ ಬಾಬು ಈಳಿಗೇರ ವಂದಿಸಿದರು,ವೀರಣ್ಣ ಒಡ್ಡೀನ, ಎಂ.ಎಂ.ಚಿಕ್ಕಮಠ, ಬಿ.ಮಾರುತಿ, ಗುರು ಬಸವ ಮಹಾಮನೆ, ಪ್ರಕಾಶ ಬಾಳಿಕಾಯಿ, ಡಾ. ಎ. ಎಲ್. ದೇಸಾಯಿ, ಡಾ. ಬಸವರಾಜ ಕಲೆಗಾರ, ವೀರಣ್ಣ ಪತ್ತಾರ ಸೇರಿದಂತೆ ಮುಂತಾದವರಿದ್ದರು.