ಹುಬ್ಬಳ್ಳಿ 11: ಪಕ್ಷದ ಕಾರ್ಯಕರ್ತನಾಗಿ ಅಭ್ಯಥರ್ಿ ಪರ ಬಾವುಟ ಕಟ್ಟಿ, ಕರಪತ್ರಗಳನ್ನು ಹಂಚುತ್ತೇನೆ. ನಾನೇನು ಕುಂದಗೋಳ ಕ್ಷೇತ್ರಕ್ಕೆ ಆಟ ಆಡಲು ಬಂದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾ ಡಿದ ಅವರು, ಬಿಜೆಪಿ ನಾಯಕರಿಗೆ ನನ್ನ ಮೇಲೆ ಅಷ್ಟೊಂದು ಪ್ರೀತಿ ಇದೆ. ನನ್ನದು ನಡೆಯುತ್ತದೆ ಎಂದು ಕುಂದಗೋಳ ಚುನಾವಣೆಗೆ ಬಂದಿಲ್ಲ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಲು ಬಂದಿದ್ದೇನೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಡಿ ಕೆ ಶಿವಕುಮಾರ್ ಅವರನ್ನು ಜೈಲಿಗೆ ಹಾಕಿಸುತ್ತೇನೆ ಎಂದಿದ್ದಾರೆ. ಈ ಹಿಂದೆ ಶ್ರೀರಾಮುಲು ಅಣ್ಣ ತಮ್ಮನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದರು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಬಸವಗೌಡ ಪಾಟೀಲ್ ಯತ್ನಾಳ್ ಪ್ರಶ್ನೆಗೆ ಉತ್ತರ ನೀಡುವುದಿಲ್ಲ. ತಾವು ಗಂಡಸೋ, ಗಂಡಸ್ತನವೋ ಈಗ ಉತ್ತರ ನೀಡುವುದಿಲ್ಲ. ಫಲಿತಾಂಶ ಬಂದ ಬಳಿಕ ಅವರಿಗೆ ಅರ್ಥವಾಗಲಿದೆ ಎಂದು ಅವರು ಹೇಳಿದರು.
ಸಚಿವ ಡಿ ಕೆ ಶಿವಕುಮಾರ್ ಕಾರಿನಲ್ಲಿ ಹಣ ಇಟ್ಟುಕೊಂಡು ಕುಂದಗೋಳಕ್ಕೆ ಬಂದಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ಅವರು ಬಂದು ನನ್ನ ಕಾರಲ್ಲೇ ಕುಳಿತುಕೊಳ್ಳಲಿ ಎಂದರು.
ನಮ್ಮ ಕಾರ್ಯಕರ್ತರನ್ನು ಮುಟ್ಟಿದರೆ ಹುಷಾರ್ ಎಂದು ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದರು. ಈಗ 20 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರುತ್ತಾರೆ ಎನ್ನುತ್ತಿದ್ದಾರೆ. ಬರೀ ಕಾರ್ಯಕರ್ತರು ಪಕ್ಷ ತೊರೆಯುವುದನ್ನು ಅವರು ಸಹಿಸಿಕೊಳ್ಳಲ್ಲ. ಕಾಂಗ್ರೆಸ್ ಪಾಟರ್ಿಯ ಶಾಸಕರನ್ನು ಸೆಳೆದರೆ ಅರಗಿಸಿಕೊಳ್ಳಲು ಸಾಧ್ಯನಾ ಎಂದು ಬಿಜೆಪಿ ನಾಯಕರಿಗೆ ಅವರು ಎಚ್ಚರಿಕೆ ನೀಡಿದರು.
ಬಿಜೆಪಿಯವರು ಸಕರ್ಾರ ರಚಿಸುತ್ತೇವೆ ಎನ್ನುತ್ತಿದ್ದಾರೆ. ಸುಳ್ಳು ಹೇಳಿ, ಹೇಳಿ, ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಜನರನ್ನು ನಂಬಿಸಿ ಕನಸಿನ ಗೋಪುರ ಕಟ್ಟುತ್ತಿದ್ದಾರೆ. ಅದೆಲ್ಲ ಏನೂ ಆಗಲ್ಲ.
ಅಷ್ಟು ಸುಲಭವಾಗಿ ನಾವು ಬಿಡುವುದಿಲ್ಲ. ಕುಂದಗೋಳದ ಬಿಜೆಪಿ ಅಭ್ಯಥರ್ಿ ಶೂನ್ಯವಾಗಿದ್ದಾರೆ. ಹೀಗಾಗಿ ಯಡಿಯೂರಪ್ಪ ನಾನೇ ಅಭ್ಯಥರ್ಿ ಅಂತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ನಾಯಕರು ದಬ್ಬಾಳಿಕೆ ಮಾಡಿದರೂ, ಜನರನ್ನು ಹೆದರಿಸಿದರೂ ಅಷ್ಟೇ. ತಮ್ಮನ್ನು ಕಂಡರೆ ಯಡಿಯೂರಪ್ಪ ಅವರಿಗೆ ಪ್ರೀತಿ ಜಾಸ್ತಿ. ಇನ್ನು ಒಂದೆರಡು ದಿನಗಳು ಕಳೆಯಲಿ, ಎಲ್ಲವನ್ನು ಮಾತನಾಡುತ್ತೇನೆ ಸಚಿವ ಡಿ ಕೆ ಶಿವಕುಮಾರ್ ಹೇಳಿದರು.