ವೀರರಾಣಿ ಕಿತ್ತೂರು ಚನ್ನಮ್ಮ’ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ15 ರಂದು ಹರಿಹರದಲ್ಲಿ ’ಹರ ಜಾತ್ರೆ’

ವೀರರಾಣಿ ಕಿತ್ತೂರು ಚನ್ನಮ್ಮ’ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ15 ರಂದು ಹರಿಹರದಲ್ಲಿ ’ಹರ ಜಾತ್ರೆ’ 'Hara Jatre' to be held in Harihar on the 15th in the name of 'Veer Rani Kittur Channamma'

                  ಹುಬ್ಬಳ್ಳಿ 05:   ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಮಕರ ಸಂಕ್ರಾಂತಿ ಹಬ್ಬದಂದು (ಜ. 15ರಂದು) ಬೆಳಗ್ಗೆ 10 ಗಂಟೆಗೆ ’ಹರ ಜಾತ್ರೆ’ ನೆರವೇರಲಿದ್ದು, ಈ ಬಾರಿ ’ವೀರರಾಣಿ ಕಿತ್ತೂರು ಚನ್ನಮ್ಮ’ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಹರ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಪ್ರತಿವರ್ಷ ಹರ ಜಾತ್ರೆಯ ನಿಮಿತ್ತ ಉದ್ಯೋಗ ಮೇಳ, ಆರೋಗ್ಯ ಶಿಬಿರಗಳನು, ಆಯೋಜಿಸುತ್ತ ಬಂದಿದ್ದು, ಈ ಬಾರಿ ಜಾತ್ಯತೀತವಾಗಿ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ’ವೀರರಾಣಿ ಕಿತ್ತೂರು ಚನ್ನಮ್ಮ’ ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಕ್ಷೇತ್ರವಾರು ಪ್ರಶಸ್ತಿ ನೀಡುವ ಯೋಜನೆ ಇದೆ.

                 ಇದೇ ಸಂದರ್ಭದಲ್ಲಿ ’ಕಿತ್ತೂರ ರಾಣಿ ಚನ್ನಮ್ಮ’ ದ್ವಿಶತಮಾನ ವಿಜಯೋತ್ಸವದ ಸಮಾರೋಪ ಸಮಾರಂಭ ಹಾಗೂ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳ ಅಷ್ಟಮ ವಾರ್ಷಿಕ ಪೀಠಾರೋಹಣ ನಡೆಯಲಿದೆ ಎಂದು ವಿವರಿಸಿದರು.ಹಾವೇರಿಯ ವೈದ್ಯ ಬಸವರಾಜ ವೀರಾಪುರ ಅವರು ’ವೀರರಾಣಿ ಕಿತ್ತೂರು ಚನ್ನಮ್ಮ’ ಅವರ ಹೆಸರಿನ ಪ್ರಶಸ್ತಿಗೆ ದತ್ತಿನಿಧಿ ನೀಡಿದ್ದು, ಈ ಬಾರಿ ಕೇವಲ ಓರ್ವ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಸಂಬಂಧಸಮಿತಿಯೊಂದನ್ನು ರಚಿಸಲಾಗಿದೆ. ಅವರ ನಿರ್ಣಯವೇ ಅಂತಿಮವಾಗಲಿದೆ ಎಂದರು.ಸಮಾಜದ ಮುಖಂಡ ಮೋಹನ ಲಿಂಬಿಕಾಯಿ ಮಾತನಾಡಿ, ತುಳಿತಕ್ಕೊಳಗಾದವರು, ಅಸಂಘಟಿತರು, ಬಡವರು ಹಾಗೂ ಶಿಕ್ಷಣ ವಂಚಿತರಿಗೆ ಹರಿಹರಮಠ ನಿರಂತರ ಸಹಾಯ ಮಾಡುತ್ತಿದೆ.

               ಕೆಲ ವರ್ಷಗಳ ಹಿಂದೆ ನಡೆದ ಹರ ಜಾತ್ರೆಯ ಸಂದರ್ಭದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ 6,500 ಜನರಿಗೆ ಉದ್ಯೋಗ ದೊರೆಯುವಂತೆ ಮಾಡಲಾಗಿತ್ತು. ಆದರೊಟ್ಟಿಗೆ ಶ್ರೀಗಳು ಜವಾಬ್ದಾರಿ ವಹಿಸಿಕೊಂಡ ಬಳಿಕ ಗುರು ಭವನ, ದಾಸೋಹ ಭವನದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂದಿನ ದಿನಗಳಲ್ಲಿ ಅತಿಥಿಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದುಎಂದು ತಿಳಿಸಿದರು.ಸಮಾಜದಲ್ಲಿ ಮೂವರು ಸ್ವಾಮೀಜಿಗಳಿರಬಹುದು. ಆದರೆ, ಸಮಾಜ ಒಕ್ಕಟ್ಟಾಗಿದೆ. ಕೂಡಲಸಂಗಮ ಪೀಠದಲ್ಲಿನ ಭಿನ್ನಾಭಿಪ್ರಾಯಗಳಿಂದ ಅಲ್ಲಿನ ಶ್ರೀಗಳನ್ನು ಉಚ್ಚಾಟನೆ ಮಾಡಲಾಗಿದೆ. ಅದೇನು ದೊಡ್ಡ ವಿಷಯವಲ್ಲ. ಇಂದಲ್ಲ ನಾಳೆ ತಿಳಿಗೊಳ್ಳಲಿದೆ ಎಂದರು.ಸಮಾಜದ ರಾಜ್ಯ ಘಟಕದ ಅದ್ಯಕ್ಷ ರಾದ ಸೋಮನಗೌಡ ಪಾಟೀಲ, ಮುಖಂಡರಾದ ರಾಮೇಶ ಪಾಟೀಲ, ಜಿ.ಜಿ.ದೇವನಗೌಡ, ಬಸವರಾಜ ವೀರಾಪುರ, ಎಫ್‌.ವಿ.ಮುದೇಗೌಡ್ರ, ಈರಣ್ಣ ಕರಿಬಿಷ್ಠಿ ಇದ್ದರು.