'ಅನ್ಯ ಇಲಾಖೆಗಳ ಕಾರ್ಯದಿಂದ ಮುಕ್ತಿ ನೀಡಿ'

ಲೋಕದರ್ಶನ ವರದಿ

ಬೆಳಗಾವಿ, 19:  ಅಂಗನವಾಡಿ ಕಾರ್ಯಕರ್ತೆ ಯರು ಮತ್ತು ಸಹಾಯಕಿಯರಿಗೆ  ಆರೋಗ್ಯ ಇಲಾಖೆ ಕುಷ್ಠರೋಗ ಸರ್ವ  ಕಾರ್ಯಕ್ಕೆ  ಒತ್ತಡ ಹೆರುತ್ತಿದೆ ಎಂದು ಖಂಡಿಸಿ ಮಂಗಳವಾರ ರಾಜ್ಯ ಅಂಗನವಾಡಿ ಕಾರ್ಯಕತರ್ೆಯರು ಮತ್ತು ಸಹಾಯಕಿಯರ ಸಂಘಟನೆ ಪದಾಧಿಕಾರಿಗಳು ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಎಲೆಕ್ಷನ್ ಕೆಲಸದಿಂದ ಅಂಗನವಾಡಿ ಕಾರ್ಯಕರ್ತೆ ಯರು  ಮತ್ತು ಸಹಾಯಕಿಯರನ್ನು ಮುಕ್ತಗೊಳಿಸಬೇಕು. ಈ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಮನವಿಗೆ ಅವರು ಸರಿಯಾಗಿ ಸ್ಪಂದಿಸಿಲ್ಲ. ಈಗ ಮತ್ತೆ ಕುಷ್ಠರೋಗ ಸವರ್ೆ ಮಾಡಲು ಆರೋಗ್ಯ ಇಲಾಖೆಯಿಂದ ಒತ್ತಡ ಹೇರುತ್ತಿದ್ದಾರೆ. ಯಾವುದೇ ಸರ್ವ  ಕಾರ್ಯಗಳಿಗೆ ಅಧಿಕೃತ ನೋಟಿಸ್ ನೀಡದೆ ದಬ್ಬಾಳಿಕೆಯಿಂದ ಕಾರ್ಯ ನಿರ್ವಹಿಸಲು ಒತ್ತಡ ಹೆರುತ್ತಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರತಿ ಮನೆಗಳಿಗೆ ತೆರಳಿ ನಿಮ್ಮ ಮನೆಯಲ್ಲಿ ಕುಷ್ಟರೋಗಿಗಳು ಇದ್ದಾರಾ ಎಂದು ಕೆಳಲಾಗುವುದಿಲ್ಲ. ಒಂದು ವೇಳೆ ಕೇಳಿದರೆ ಜನ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಕುಷ್ಠರೋಗ ಸರ್ವ  ಕಾರ್ಯದಿಂದ ನಮನ್ನು ಮುಕ್ತಿಗೊಳಿಸಬೇಕು. ಕಳೆದ ಮೂರು ತಿಂಗಳುಗಳಿಂದ ನಮ್ಮ ಗೌರವಧನವು ನೀಡಿಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು ಏನೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ದಬ್ಬಾಳಿಕೆಯಿಂದ ನಮಗೆ ಅನ್ಯ ಇಲಾಖೆಗಳ ಕೆಲಸ ಮಾಡಲು ಒತ್ತಡ ಹೇರುತ್ತಿದ್ದಾರೆ. ಅನ್ಯ ಇಲಾಖೆಗಳ ಕಾರ್ಯದಲ್ಲಿ ಸಮಯ ವ್ಯಯ ಮಾಡುವುದರಿಂದ ನಮ್ಮ ಅಂಗನವಾಡಿ ಮಕ್ಕಳ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಮತ್ತು ವಯಕ್ತಿಕ ಕೆಲಸಗಳಿಗೂ ಸಮಯ ವಿಲ್ಲದಂತಾಗಿದೆ. ಆದ್ದರಿಂದ ವಿವಿಧ ಇಲಾಖೆಗಳ ಕೆಲಸದ ಒತ್ತಡಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ನಾಗೇಶ ಸಾತೇರಿ, ಜಿಲ್ಲಾ ಉಪಾಧ್ಯಕ್ಷೆ ಮಿನಾಕ್ಷಿ ಕೋಟಗಿ, ಯಲ್ಲೂಬಾಯಿ ಶೀಗಿಹಳ್ಳಿ, ಸುಜಾತಾ ಬೆಳಗಾವಕರ, ಕಮರುನಿಶಾ ಬಾಳೆಕುಂದ್ರಿ, ರಂಜನಾ ಗುತ್ತಿಗೆಕರ, ಲತಾ ಕುಲಕಣರ್ಿ, ಅನೀತಾ ಭೋಸಲೆ, ಗೀತಾ ಬೋಸಲೆ. ಮೊದಲಾದವರು ಉಪಸ್ಥಿತರಿದ್ದರು.