‘ಗಾಂಧಿ ಭಾರತ ಸಮಾವೇಶ’ : ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಭಾಗವಹಿಸಬೇಕು
ಬ್ಯಾಡಗಿ 21: ಬೆಳಗಾವಿಯಲ್ಲಿ ಡಿ.26 ಮತ್ತು ಡಿ.27ರಂದು ನಡೆಯಲಿರುವ ‘ಗಾಂಧಿ ಭಾರತ ಸಮಾವೇಶ’ದಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಭಾಗವಹಿಸಬೇಕೆಂದು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ವಿನಂತಿಸಿಕೊಂಡರು.ಶನಿವಾರ ಪಟ್ಟಣದ ಕಾಂಗ್ರೇಸ್ ಕಾರ್ಯಾಲಯದಲ್ಲಿ ದಾನಪ್ಪ ಚೂರಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ‘ಗಾಂಧಿ ಭಾರತ ಸಮಾವೇಶ’ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬೆಳಗಾವಿಯಲ್ಲಿ 1924ರ ಡಿ.26, 27ರಂದು ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ನ 39ನೇ ಅಖಿಲ ಭಾರತ ಅಧಿವೇಶನ ನಡೆದಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನವೂ ಅದಾಗಿತ್ತು. ಅದಕ್ಕೀಗ ನೂರು ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಖಿಲ ಭಾರತ ಮಟ್ಟದಲ್ಲಿ ‘ಗಾಂಧಿ ಭಾರತ ಸಮಾವೇಶ’ ಹಮ್ಮಿಕೊಳ್ಳಲಾಗಿದ್ದು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದರು.
ಬಿಜೆಪಿ ಚುನಾವಣೆ’ ಜಾರಿಗೆ ತರಲು ಸಂವಿಧಾನ ತಿದ್ದುಪಡಿ ಮಾಡಲು ಹೊರಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆಯೂ ಇಲ್ಲ’ ಎಂಬ ನಿಯಮವನ್ನೂ ಜಾರಿಗೊಳಿಸಬಹುದು,ಗೃಹ ಮಂತ್ರಿ ಅಮಿತ್ ಶಾರಿಂದ ಅಂಬೇಡ್ಕರ ಅವಮಾನ ನಡೆದಿರುವುದನ್ನು ಖಂಡಿಸಿದರು.ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ ಡಿ. 27 ರಂದು ಬೆಳಗಾವಿಗೆ ತೆರಳಲು ಪ್ರತಿ ಗ್ರಾ.ಪಂ ಗೊಂದು ಬಸ್ ವ್ಯವಸ್ಥೆ, ಊಟ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಂಜೀವ ನಿರಲಗಿ, ರಾಜ್ಯ ಗ್ಯಾರಂಟಿ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಪ್ರಧಾನ ಕಾರ್ಯದರ್ಶಿ ರಮೇಶ್ ಸುತ್ತ ಕೋಟಿ, ರವಿ ಪೂಜಾರ, ಮಾರುತಿ ಅಚ್ಚಿಗೇರಿ,ಆನಂದ ಗಡ್ಡದೇವರಮಠ, ಶಿವನಗೌಡ ಪಾಟೀಲ, ಬೀರಣ್ಣ ಬಣಕಾರ, ಪರಮೇಶಪ್ಪ ತೆವರಿ,ಅಬ್ದುಲ್ ಮುನಾಫ್ ಎರೇಸಿಮಿ, ಹನುಮಂತಪ್ಪ ನಾಯಕ, ಸುರೇಶಗೌಡ ಪಾಟೀಲ, ಲಕ್ಷ್ಮಿ ಜಿಂಗಾಡೆ, ಪ್ರೇಮಾ ಪಾಟೀಲ,ದುರ್ಗೆಶ ಗೊಣೆಮ್ಮನವರ, ಖಾದರಸಾಬ್ ದೊಡ್ಡಮನಿ, ಮಂಜುನಗೌಡ ಪಾಟೀಲ,ಡಾ. ಎ.ಎಂ.ಸೌದಾಗಾರ. ಸುರೇಶ ಹುಳಬುತ್ತಿ, ಡಿ.ಎಚ್. ಬುಡ್ಡನಗೌಡ, ರಾಜು ಕಳ್ಯಾಳ, ಮಂಜಣ್ಣ ಬಾರ್ಕಿ, ಜೈ ಭೀಮ ಸೇರಿದಂತೆ ಇತರರಿದ್ದರು.